ಯಡಿಯೂರಪ್ಪ ರಾಜೀನಾಮೆ ನಂತರ ಸಿದ್ದರಾಮಯ್ಯ ಹೇಳಿದ್ದೇನು

Politics (itskannada) ಯಡಿಯೂರಪ್ಪ ರಾಜೀನಾಮೆ ನಂತರ ಸಿದ್ದರಾಮಯ್ಯ ಹೇಳಿದ್ದೇನು- ಬಿ.ಎಸ್.ಯಡಿಯೂರಪ್ಪನವರು ರಾಜೀನಾಮೆ ಘೋಷಿಸಿದ ನಂತರ ಸಿದ್ದರಾಮ್ಯನವರು ಮಾಧ್ಯಮಗಳೊಂದಿಗೆ ಮಾತನಾಡಿ. ಬಿ.ಜೆ.ಪಿ ಪಕ್ಷವು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರು ಕೊಟ್ಟಂತಹ ತೀರ್ಪನ್ನು ಒಪ್ಪಿಕೊಳ್ಳಬೇಕಾದುದು ನಮ್ಮ ಜವಾಬ್ದಾರಿಯಾಗಿರಬೇಕು  ಎಂದರು.

ಯಡಿಯೂರಪ್ಪ ರಾಜೀನಾಮೆ ನಂತರ ಸಿದ್ದರಾಮಯ್ಯ ಹೇಳಿದ್ದೇನು

ನಂತರ ಮಾತನಾಡಿದ ಸಿದ್ದರಾಮಯ್ಯ ನವರು , ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಮಾಡಿದ ಪ್ರಧಾನಿ ಮೋದಿ , ಅಮಿತ್ ಷಾ , ಹಾಗೂ ಕೆಲವು ಕೇಂದ್ರ ಸಚಿವರುಗಳ ನಡೆ ಖಂಡನೀಯ ಎಂದಿದ್ದಾರೆ. ಯಡಿಯೂರಪ್ಪನವರು ಬಹುಮತ ಸಾಭೀತಿಗೆ 1 ವಾರದ ಗಡುವು ಕೇಳಿದರೆ ರಾಜ್ಯಫಾಲರು 15 ದಿನಗಳ ಗಡುವು ನೀಡಿದರು,ಒಟ್ಟಾರೆ ರಾಜ್ಯಪಾಲರು ಬಿ.ಜೆ.ಪಿಗೆ ಶಾಮೀಲಾಗಿದ್ದಾರೆ.

ಯಡಿಯೂರಪ್ಪ ರಾಜೀನಾಮೆ ನಂತರ ಸಿದ್ದರಾಮಯ್ಯ ಹೇಳಿದ್ದೇನು

ಅತಂತ್ರ ಪರಿಸ್ಥಿತಿ ಇದ್ದರೂ ಸಹ ಸರ್ಕಾರ ರಚನೆ ಮಾಡೇ ಮಾಡುತ್ತೇವೆ ಎಂಬ ನಿಲುವು ಖಂಡನೀಯ ಎಂದರು. ಸರ್ಕಾರ ಮಾಡಲೇ ಬೇಕು ಎಂದು ಮಾಡಿದ ಬಿ.ಜೆ.ಪಿ ಯ ಹಲವು ನಡೆಗಳು ಅವರ ವಿಫಲಕ್ಕೆ ಕಾರಣಗಳು , ಕೊನೆಗೆ ಕುದುರೆ ವ್ಯಾಪಾರಕ್ಕೂ ಕೈ ಹಾಕಿ ಪಕ್ಷ ಮುಜುಗರ ಅನುಭವಿಸಿತು , ಎಂದರು./// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Karnataka Politics News

Web Title : ಯಡಿಯೂರಪ್ಪ ರಾಜೀನಾಮೆ ನಂತರ ಸಿದ್ದರಾಮಯ್ಯ ಹೇಳಿದ್ದೇನು

ಬಹುಮತ ಇಲ್ಲದೆಯೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್‌.ಯಡಿಯೂರಪ್ಪ ಶನಿವಾರ ವಿಶ್ವಾಸಮತ ಯಾಚನೆ ಭಾಷಣ ಆರಂಭಿಸಿದರು. ಆದರೆ ಬಳಿಕ ಅದನ್ನು ಹಿಂಪಡೆದು ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವುದಾಗಿ ಘೋಷಿಸಿದರು.

104 ಸ್ಥಾನ ಗೆದ್ದ ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲ ವಜುಭಾಯಿ ವಾಲಾ ಆಹ್ವಾನ ನೀಡಿದ್ದರು. ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದರು.

ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು 15 ದಿನಗಳ ಗಡುವು ನೀಡಿದ್ದರು. ಆದರೆ, ಕಾಂಗ್ರೆಸ್‌–ಜೆಡಿಎಸ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌; ಶನಿವಾರ ಸಂಜೆಯೊಳಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವಂತೆ ಬಿಜೆಪಿಗೆ ಸೂಚನೆ ನೀಡಿತ್ತು.