ಯಶ್,ರಾಜಕೀಯ ಪ್ರಚಾರ-ಅಭಿಮಾನಿಗಳು ಏನಂತಾರೆ…

yash-Doing-election-canvas

28

Politics (itskannada) ನಟ ಯಶ್‌ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆ ಘೋಷಣೆಯಾದ ಸಂದರ್ಭದಲ್ಲೇ ಅವರ ರಾಜಕೀಯ ನಿಲುವುಗಳ ಬಗ್ಗೆ ಕೆಲವು ಬಾರಿ ಪ್ರಸ್ತಾಪವಾಗಿತ್ತು. ತಾವು ರಾಜಕೀಯಕ್ಕಿಳಿಯುವುದಿಲ್ಲ ಎಂದು ಆಗಲೇ ಅವರು ಸ್ಪಷ್ಟಪಡಿಸಿದ್ದರು. ಅದರೆ, ತಮಗೆ ಅರ್ಹವೆನಿಸುವ ಅಭ್ಯರ್ಥಿಗಳ ಪರ ಪಕ್ಷಾತೀತವಾಗಿ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿಯೂ ಹೇಳಿಕೊಂಡಿದ್ದರು. ಅದರಂತೆ, ಅವರು ಪ್ರಚಾರಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕೆ ಅರ್ ನಗರ ಜೆಡಿಎಸ್ ಅಭ್ಯರ್ಥಿ ಸಾ ರಾ ಮಹೇಶ್‌ ಅವರ ಪರ ರೋಡ್‌ ಶೋ ನಡೆಸುವ ಮೂಲಕ ಅವರ ಪ್ರಚಾರ ಕಾರ್ಯ ಶುರುವಾಗಿತ್ತು.

ಫೇಸ್‌ಬುಕ್‌ ಚರ್ಚೆಯಲ್ಲಿ ಒಂದಷ್ಟು ಜನರು ಯಶ್‌ ನಿರ್ಧಾರವನ್ನು ಬೆಂಬಲಿಸಿದರೆ, ಹಲವರು ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ. “ಏನು ಮಾಡಿದರೂ ಯಶ್ ಸರಿಯಾಗಿ ಯೋಚಿಸಿ ನಿರ್ಧರಿಸಿರುತ್ತಾರೆ. ಯಾರನ್ನು ಬೆಂಬಲಿಸಬೇಕು ಎನ್ನುವುದು ಅವರ ವೈಯಕ್ತಿಕ ನಿರ್ಧಾರ. ಇದನ್ನು ಆಕ್ಷೇಪಿಸುವುದು ಸರಿಯಲ್ಲ,” ಎನ್ನುವಂತಹ ಸಂದೇಶಗಳೂ ಇವೆ. ಮತ್ತೊಂದೆಡೆ, “ಜನಪ್ರಿಯ ನಟ ಯಶ್ ಸಾರ್ವಜನಿಕ ವ್ಯಕ್ತಿ. ಅವರು ತಳೆಯುವ ನಿಲುವುಗಳಿಗೆ ಸಾರ್ವತ್ರಿಕತೆ ಇರುತ್ತದೆ. ಹಾಗಾಗಿ, ಕಾಳಜಿಯಿಂದ ನಾವು ಮಾತನಾಡುತ್ತಿದ್ದೇವೆ. ಇನ್ನೂ ಚಿಕ್ಕವಯಸ್ಸಿನ ನಟರಾದ ಯಶ್‌ ಇಂತಹ ವಿಷಯಗಳ ಬಗ್ಗೆ ಹೆಚ್ಚು ಮುತುವರ್ಜಿಯಿಂದ ತೀರ್ಮಾನ ತೆಗೆದುಕೊಳ್ಳಬೇಕು,” ಎಂದು ಹಿರಿಯರೊಬ್ಬರು ಸಲಹೆ ಮಾಡಿದ್ದಾರೆ. ಈ ಮಧ್ಯೆ, ನಟ ಸುದೀಪ್‌ ಕೂಡ ರಾಜಕೀಯ ಪ್ರಚಾರಕ್ಕಿಳಿದಿದ್ದಾರೆ. ತಮ್ಮ ಆತ್ಮೀಯ ಸ್ನೇಹಿತ ರಾಜು ಗೌಡ ಅವರ ಪರ ಪ್ರಚಾರ ಮಾಡಲಿರುವ ಸುದೀಪ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವೂ ಪ್ರಚಾರ ನಡೆಸುವ ಸೂಚನೆ ಸಿಕ್ಕಿದೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Politics News – Kannada News – Kannada Sandalwood News

ಹೊಸ ಸೇರ್ಪಡೆ : Karnataka Taluks News | All Karnataka Taluk Live Updates

 


ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ

Stay Updated with itsKannada, to know more Latest Kannada News - Read Kannada News Today Updates Kannada News Online - Get Latest News Headlines Breaking News in Kannada


.
error: Content is protected !!