ಎಡವಟ್ ಆಂಜನೇಯ-ಏನಂದ್ರು ಗೊತ್ತಾ . .

ಭಾರತ ಮಕ್ಕಳನ್ನು ಹುಟ್ಟಿಸುವುದರಲ್ಲಿ ನಂಬರ್ ಒನ್: ಮಾಜಿ ಸಚಿವ ಎಚ್.ಆಂಜನೇಯ

Kannada News (itskannada) Politics :ಭಾರತ ಮಕ್ಕಳನ್ನು ಹುಟ್ಟಿಸುವುದರಲ್ಲಿ ನಂಬರ್ ಒನ್: ಮಾಜಿ ಸಚಿವ ಎಚ್.ಆಂಜನೇಯ – ಎಡವಟ್ಟು ಮಾಡಿಕೊಂಡ ಆಂಜನೇಯ – ಕೊಪ್ಪಳ: ಇತ್ತೀಚೆಗೆ ರಾಜಕೀಯ ನಾಯಕರು ವಿವಾದ ಹೇಳಿಕೆ ನೀಡುತ್ತಾ ಸದಾ ಸುದ್ದಿಯಾಗುತ್ತಿದ್ದಾರೆ. ಉದಾಹರಣೆಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ,   ಮೊನ್ನೆ ಶಾಸಕ ಬಸನಗೌಡ ಯತ್ನಾಳ ಅಲ್ಲದೆ ಈಗ ಮಾಜಿ ಸಚಿವ ಎಚ್.ಆಂಜನೇಯ.  ಅವರು ನಿನ್ನೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡಿ , “ಭಾರತ ದೇಶ ಮುಂದುವರೆದ ದೇಶ ಅದು ಯಾವ ವಿಷಯದಲ್ಲಿ ಅಂದರೆ ಮಕ್ಕಳ ಹುಟ್ಟಿಸುವುದ್ರಲ್ಲಿ” ಎಂದು ಹೇಳಿ ಎಡವಟ್ಟು ಮಾಡಿಕೊಂಡಿರುವ ಘಟನೆ ಕೊಪ್ಪಳದ  ಕುಷ್ಟಗಿ ಪಟ್ಟದ ಕಾರ್ಯಕ್ರಮದಲ್ಲಿ ನಡೆದಿದೆ.

ಭಾರತ ಮಕ್ಕಳನ್ನು ಹುಟ್ಟಿಸುವುದರಲ್ಲಿ ನಂಬರ್ ಒನ್: ಮಾಜಿ ಸಚಿವ ಎಚ್.ಆಂಜನೇಯ

ಸುಮ್ಮನಿರದೆ ಏನೋ ಹೇಳಲು ಹೋಗಿ ಏನೋ  ಹೇಳಿ ವಿವಾದ ಮೈ ಮೇಲೆ ಎಳೆದು ಕೊಂಡಿದ್ದಾರೆ. ವಿಶ್ವದಲ್ಲಿ ಏನಾದರು ಮಕ್ಕಳ ಹುಟ್ಟಿಸೋ ಸ್ಪರ್ಧೆ ಇಟ್ಟರೆ ಭಾರತ ದೇಶ ಪ್ರಶಸ್ತಿ ಪಡೆಯುವುದು ಎಂದುಬಿಟ್ಟಿದ್ದಾರೆ. ಪಾಪ ಮೈಮೇಲೆ ಪ್ರಜ್ಞೆ ಇತ್ತೋ ಇಲ್ವೋ ,  ಜನ ಪ್ರತಿನಿಧಿ ಈಗೆ ಮಾತನಾಡೋದು ತಲೆಕೆಟ್ಟ ಸಮಯದಲ್ಲಿ ಎಂದು ಜನ ಟೀಕಿಸಿದ್ದಾರೆ.

ಸಚಿವರು , ಶಾಸಕರು ಯಾರೇ ಆಗಲಿ ಮೈಕು ಕೈಗೆ ಸಿಕ್ಕಾಗ ಎನೋ ಹೇಳಲು ಹೋಗಿ ಎನೋ ಹೇಳಿ ಎಡವಟ್ಟು ಮಾಡಿಕೊಂಡು ಬಿಡುತ್ತಾರೆ. ಆದರೆ ಅವರು ಪ್ರಜ್ಞಾವಂತ ನಾಗರೀಕರು. ಈ ರೀತಿ ಹೇಳಿಕೆ ಸಮಾಜದ ಮೇಲೆ ಪರಿಣಾಮ ಬೀರುತ್ತದೆ.  ಹೀಗಿರುವಾಗ ಇನ್ನೂ ಮುಂದೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.  // // Karnataka Politics News – Karnataka News

 

Title  : ಭಾರತ ಮಕ್ಕಳನ್ನು ಹುಟ್ಟಿಸುವುದರಲ್ಲಿ ನಂಬರ್ ಒನ್: ಮಾಜಿ ಸಚಿವ ಎಚ್.ಆಂಜನೇಯ