ವಿಧಾನಸೌಧ ಅಂದರೆ ನನಗೆ ಭಯ-ಸಿಎಂ ಅಚ್ಚರಿ ಹೇಳಿಕೆ

Kannada News(itskannada) Politics ವಿಧಾನಸೌಧ ಅಂದರೆ ನನಗೆ ಭಯ-ಸಿಎಂ ಅಚ್ಚರಿ ಹೇಳಿಕೆ.

ವಿಧಾನಸೌಧದಲ್ಲಿ ನಡೆಯುವ ಭ್ರಷ್ಟಾಚಾರ ವ್ಯವಸ್ಥೆ ಕಂಡು ಸಿಎಂ ಕುಮಾರಸ್ವಾಮಿ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ ಟ್ರಾನ್ಸ್ ಪರ್ ಮಾಡಲು 10 ಲಕ್ಷ ರೂ ವರೆಗೂ ವ್ಯವಹಾರ ನಡೆಯುತ್ತಿದೆ ಎಂಬ ಹೇಳಿಕೆ ಈಗ ಆಶ್ಚರ್ಯ ವ್ಯಕ್ತಪಡಿಸುವಂತಾಗಿದೆ. ಅಲ್ಲದೆ ತಾವೇ ನೀಡಿದ ಹೇಳಿಕೆ ಈಗ ಅವರಿಗೆ ತಲೆನೋವಾಗಿ ಪರಿಣಮಿಸಿದೆ.
“ಇವತ್ತು ವಿಧಾನಸೌಧದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಪರಿಸ್ಥಿತಿಯನ್ನು ನೋಡಿದರೆ ಇದನ್ನು ಯಾವ ರೀತಿ ನಿಲ್ಲಿಸಲು ಸಾಧ್ಯ ಎಂದು ಯೋಚನೆ ಮಾಡುತ್ತೇನೆ. ನಾನು ಮೂರನೇ ಬಾರಿ ಈ ಭ್ರಷ್ಟಾಚಾರ ನಿಲ್ಲಿಸಲು ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡಲು ಅಷ್ಟು ಸುಲಭವಲ್ಲ. ಆದರೆ ನನ್ನ ಕೈಯಲ್ಲಿ ಆದಷ್ಟು ಪ್ರಯತ್ನ ಮಾಡುತ್ತೇನೆ” ಎಂದು ಕುಮಾರಸ್ವಾಮಿ ಹೇಳಿದ್ದರು.

ಸಿಎಂಗೆ ಮಾಜಿ ಸಿಎಂ ಟಾಂಗ್ !

ವಿಧಾನಸೌಧದಲ್ಲಿ ಭ್ರಷ್ಟಾಚಾರದ ಬಗ್ಗೆ ಹೇಳಿದ ಸಿಎಂ ಕುಮಾರಸ್ವಾಮಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ, “ನನ್ನ ಅವಧಿಯಲ್ಲಿ ನಡೆದಿಲ್ಲ,  ನಡೆಯುತ್ತಿದ್ದರೆ ತಡೆದು ಭ್ರಷ್ಟಾಚಾರ ಮುಕ್ತಗೊಳಿಸಲಿ” ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಈ ಎಲ್ಲ ಬೆಳವಣಿಗೆ ಸೂಕ್ಷ್ಮವಾಗಿ ಗಮನಿಸಿದಾಗ ಭ್ರಷ್ಟಾಚಾರದ ವ್ಯವಸ್ಥೆ ಬಯಲಿಗೆಳೆಯಲು ಪ್ರಯತ್ನಿಸಬೇಕಾಗಿದೆ. ರಾಜ್ಯದ ಮುಖ್ಯಮಂತ್ರಿ ಈ ರೀತಿ ಹೇಳಿದ ಪರಿಣಾಮ ದೇಶದಲ್ಲಿ ಕರ್ನಾಟಕ ಅವ್ಯವಸ್ಥೆ ಎಂದು ಬಿಂಬಿವಂತಾಗಿದೆ. ತಾವೇ ಈಗ ಅಕ್ರಮ ಬಯಲಿಗೆಳೆದು ಭ್ರಷ್ಟಾಚಾರ ಮುಕ್ತ ಕರುನಾಡು ಮಾಡಬೇಕಾದ ಸವಾಲು ಎದುರಾಗಿದೆ.  / //