ಮೈತ್ರಿ ಸರ್ಕಾರ ಪತನ – ಬಿಎಸ್ ವೈ ಮತ್ತೆ ಸಿಎಂ . . !

Kannada News (itsKannada) Politics : ಮೈತ್ರಿ ಸರ್ಕಾರ ಪತನ – ಬಿಎಸ್ ವೈ ಮತ್ತೆ ಸಿಎಂ :  ಕರ್ನಾಟಕದಲ್ಲಿ ಮೈತ್ರಿ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆ ರಾಜಕೀಯ ಗೊಂದಲಗಳು ಪ್ರಾರಂಭವಾಗಿದೆ. ಇನ್ನು ಸಚಿವ ಸಂಪುಟ ವಿಸ್ತರಣೆಯ ನಂತರ ಮೈತ್ರಿ ಸರ್ಕಾರದ ಪರಿಸ್ಥಿತಿ ಹೇಳಿಕೊಳ್ಳಲಾರದ ಸ್ಥಿತಿಗೆ ಬಂದು ನಿಂತಿದೆ.

ಮೈತ್ರಿ ಸರ್ಕಾರ ಪತನ – ಬಿಎಸ್ ವೈ ಮತ್ತೆ ಸಿಎಂ ಆಗ್ತಾರ.

ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿ ಈಗ ಕಾಂಗ್ರೆಸ್ ಜೆಡಿಎಸ್ ಪಕ್ಷದೊಳಗೆ ಭಾರೀಗೊಂದಲವನ್ನು ಸೃಷ್ಟಿ ಮಾಡಿದೆ. ಸಚಿವ ಸ್ಥಾನ ತಪ್ಪಿದ ಹಲವು ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಸ್ಫೋಟಕ ಮಾಹಿತಿಯೂ ಬಹಿರಂಗವಾಗಿದೆ.
ಕೆಲವೇ ದಿನಗಳಲ್ಲಿ ಸರಕಾರ ಪತನ ಬಿಎಸ್ ವೈ ಮತ್ತೆ ಸಿಎಂ, ಈ ಎಲ್ಲಾ ರಾಜಕೀಯ ಚದುರಂಗದಾಟದ ಮಧ್ಯೆ ಮೈತ್ರಿ ಸರಕಾರ ಪತನವಾಗಿ ಮತ್ತೆ ಯಡಿಯೂರಪ್ಪನವರು ಸಿಎಂ ಆಗುತ್ತಾರೆ ಎಂಬುದು ಪಕ್ಕ ಆಗುತ್ತಿದೆ. ಕಾಂಗ್ರೆಸ್ ನ ಕೆಲವು Mla ಗಳು ಯಡಿಯೂರಪ್ಪನವರ ಸಂಪರ್ಕದಲ್ಲಿ ಇದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು. ಕರ್ನಾಟಕದಲ್ಲಿ ಭಾರೀ ರಾಜಕೀಯ ಬದಲಾವಣೆ ಆಗುವ ಸಾಧ್ಯತೆ ಇದೆ.

ಮೈತ್ರಿ ಸರ್ಕಾರ ಪತನ – ಬಿಎಸ್ ವೈ ಮತ್ತೆ ಸಿಎಂ- ಬಿ.ಜೆ.ಪಿ ಸಂಪರ್ಕದಲ್ಲಿ ಕೈ ಶಾಸಕರು

104 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಕೂಡ ಅಧಿಕಾರದಿಂದ ದೂರ ಉಳಿದಿರುವ ಬಿಜೆಪಿಗೆ ಸರ್ಕಾರ ರಚಿಸಲು ಈಗ ಬೇಕಿರುವುದು 8 ಶಾಸಕರ ಬೆಂಬಲವಷ್ಟೆ. ಪ್ರಸ್ತುತ ಕಾಂಗ್ರೆಸ್ ಒಂದರಲ್ಲೇ 20ಕ್ಕೂ ಹೆಚ್ಚು ಪ್ರಮುಖ ನಾಯಕರೇ ಅಸಮಾಧಾನಗೊಂಡಿದ್ದು ಕೆಲವರು ಈಗಾಗಲೇ ಬಿಜೆಪಿಯ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಪ್ರಯತ್ನ ಮಾಡಿದರೆ ಸರ್ಕಾರ ರಚಿಸುವುದು ಕಷ್ಟವೇನಲ್ಲ. ಆದರೆ ಬಿಜೆಪಿಯ ಆಪರೇಷನ್ ಕಮಲಕ್ಕೆ ಕೈ ಹಾಕದೆ ಮೌನಕ್ಕೆ ಶರಣಾಗಿದೆ. ಅವರಾಗಿ ಬರಲಿ ಎಂಬುದು ಬಿಜೆಪಿಯ ಮೌನಕ್ಕೆ ಕಾರಣವಿರಬಹುದು. ಬಿಜೆಪಿಯ ನಡಿಗೆಯು ನಿಗೂಢವಾಗಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡಿದಾಗ ರಾಜ್ಯದಲ್ಲಿ ಮತ್ತೆ ರಾಜಕೀಯ ಬದಲಾವಣೆ ಕಾಣಲಿದ್ದು ಮೈತ್ರಿ ಸರ್ಕಾರ ಪತನವಾಗಲಿದ್ದು ಮತ್ತೆ ಯಡಿಯೂರಪ್ಪ ನವರು ಸಿಎಂ ಆಗುತ್ತಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ. ಬದಲಾಗುತ್ತಿರುವ ರಾಜಕೀಯದ ದೊರೆ ಬಿ.ಎಸ್ .ವೈ ಆಗಬಹುದಾ ಕಾದು ನೋಡಬೇಕಾಗಿದೆ. ಎಲ್ಲಾ ಅತೃಪ್ತ ಶಾಸಕರ ನಿರ್ಣಯ ಬೂದಿ ಮುಚ್ಚಿದ ಕೆಂಡದಂತಿದ್ದು  ಏನಾಗಬಹುದೆಂಬ ಕುತೂಹಲ ರಾಜ್ಯ ರಾಜಕೀಯದಲ್ಲಿ ಹೆಚ್ಚಿದೆ, .////
Karnataka Politics – Karnataka News

Webtitle: ಮೈತ್ರಿ ಸರ್ಕಾರ ಪತನ – ಬಿಎಸ್ ವೈ ಮತ್ತೆ ಸಿಎಂ , ಮೈತ್ರಿ ಸರ್ಕಾರ ಪತನ – ಬಿಎಸ್ ವೈ ಮತ್ತೆ ಸಿಎಂ