ಕುಮಾರಸ್ವಾಮಿ ಸರ್ಕಾರ ಅಸ್ತಿತ್ವದ ನಂತರ ಶಾಸಕರ ಖರೀದಿ ಪ್ರಕರಣ ತನಿಖೆ-ರಾಮಲಿಂಗಾ ರೆಡ್ಡಿ

Politics (itskannada) ಬೆಂಗಳೂರು : ಕುಮಾರಸ್ವಾಮಿ ಸರ್ಕಾರ ಅಸ್ತಿತ್ವದ ನಂತರ ಶಾಸಕರ ಖರೀದಿ ಪ್ರಕರಣ ತನಿಖೆ-ರಾಮಲಿಂಗಾ ರೆಡ್ಡಿ : ಮುಖ್ಯಮಂತ್ರಿಯಾಗಿ ಹೆಚ್. ಡಿ. ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕಾರ ಮಾಡಿ ತಕ್ಷಣ ಶಾಸಕರ ಖರೀದಿ ಯತ್ನದ ಬಗ್ಗೆ ತನಿಖೆಗೆ ಆದೇಶಿಸುವಂತೆ ಮನವಿ ಮಾಡಿಕೊಳ್ಳುವೆ ಎಂದು ಮಾಜಿ ಗೃಹಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಇದು ನಕಲಿ ವೀಡಿಯೋ ಎಂದು ಬಿಜೆಪಿಯವರು ಹೇಳುತ್ತಲಿದ್ದಾರೆ. ಆದರೆ ಅವರೇನು ಹರಿಶ್ಚಂದ್ರನಾ ಎಂದು ಪ್ರಶ್ನಿಸಿದರು.

ಶಾಸಕರ ಖರೀದಿ ಬಗ್ಗೆ ನಡೆದಿರುವಂತಹ ಆಡಿಯೋಗಳು ನಕಲಿ. ಇದರ ಬಗ್ಗೆ ತನಿಖೆಯಾಗಬೇಕೆಂದು ನಾನು ಸಿಎಂ ಅವರಿಗೆ ಮನವಿ ಮಾಡುತ್ತೇನೆ ಎಂದರು. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – ಕರ್ನಾಟಕ ರಾಜಕೀಯ ಸುದ್ದಿಗಳು – Karnataka Politics News- Kannada News