ಯಾವುದೇ ಗುಂಡಿ ಒತ್ತಿದರೂ ಅದು ಕಮಲಕ್ಕೇ ಮತ

Press Any button its Register Only Kamala Says Brijesh Kalappa

32

Politics (itskannada) ಬೆಂಗಳೂರು : ಯಾವುದೇ ಗುಂಡಿ ಒತ್ತಿದರೂ ಅದು ಕಮಲಕ್ಕೇ ಮತ-Press Any button its Register Only Kamala Says Brijesh Kalappa: ದೇಶದ್ಯಾಂತ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಇಂದು ರಾಜ್ಯಾದ್ಯಂತ ನಡೆಯುತ್ತಿದೆ. ಆದರೆ ರಾಜ್ಯದ ಹಲವೆಡೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷ ಪತ್ತೆಯಾಗಿದೆ ಎಂದು ಹೇಳಿರುವ ಕಾಂಗ್ರೆಸ್ ವಕ್ತಾರ ಬೃಜೇಶ್ ಕಾಳಪ್ಪ, ಈ ಬಗ್ಗೆ ಟ್ವೀಟೊಂದನ್ನು ಮಾಡಿ “ಬೆಂಗಳೂರಿನ ಮತದಾನ ಕೇಂದ್ರವೊಂದರಲ್ಲಿರುವ  ಇವಿಎಂನಲ್ಲಿ ಯಾವುದೇ ಗುಂಡಿ ಒತ್ತಿದರೂ ಅದು ಕಮಲಕ್ಕೇ ಹೋಗುತ್ತಿದೆ, ಆಕ್ರೋಶಿತ ಮತದಾರರು ಮತದಾನ ಮಾಡದೆ ಹಿಂದಿರುಗುತ್ತಿದ್ದಾರೆ,” ಎಂದು ಟ್ವೀಟ್ ಮಾಡಿದ್ದಾರೆ.

ಯಾವ ಬಟನ್ ಒತ್ತಿದರೂ ಕಮಲದ ಹೂವಿಗೆ ಮತ ಎಂಬ ಗಂಭೀರ ಆರೋಪವನ್ನು ಸುಪ್ರೀಂಕೋರ್ಟ್ ವಕೀಲ, ಕಾಂಗ್ರೆಸ್ ಮಾಧ್ಯಮ ವಕ್ತಾರ ಬ್ರಿಜೇಶ್‌ ಕಾಳಪ್ಪ ಮಾಡಿದ್ದಾರೆ. ಬೆಂಗಳೂರಿನ ಆರ್‌ಎಂವಿ 2ನೇ ಹಂತದ 2ನೇ ಮತಗಟ್ಟೆಯಲ್ಲಿ ಈ ದೋಷ ಕಂಡು ಬಂದಿದೆ, ಯಾವ ಬಟನ್ ಒತ್ತಿದರೂ ಕಮಲದ ಹೂವಿಗೆ ಮತ ಬೀಳುತ್ತಿದೆ, ಹಾಗಾಗಿ ಜನರು ಅಸಮಾಧಾನಗೊಂಡು ಮತ ಚಲಾಯಿಸದೇ ಹಿಂದಕ್ಕೆ ತೆರಳುತ್ತಿದ್ದಾರೆ ಎಂದು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇವಿಎಂಗಳಲ್ಲಿ ದೋಷ ಇದ್ದ ಕಾರಣ ಅಲ್ಲಿ ಮತದಾನ ಸ್ಥಗಿತವಾಗಿದ್ದು, ಇನ್ನೂ ಮತದಾನ ಪ್ರಕ್ರಿಯೆ ಪುನರಾರಂಭ ಆಗಿಲ್ಲ, ನನ್ನ ಮತವೂ ಇದೇ ಬೂತ್ ನಲ್ಲಿ ಇದೆ ಎಂದು ಅವರು ಮತ್ತೊಂದು ಟ್ವೀಟ್ ಮಾಡಿ ತಿಳಿಸಿದರು. ಮತ್ತು ರಾಮನಗರ, ಚಾಮರಾಜಪೇಟೆ, ಹೆಬ್ಬಾಳ ಸೇರಿದಂತೆ ರಾಜ್ಯಾದ್ಯಂತ ಮೂರು ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ, ಕಾಂಗ್ರೆಸ್ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿ ಮಾತುಕತೆ ನಡೆಸಲಿದೆ ಎಂದು ಅವರು ಸರಣಿ ಟ್ವೀಟ್ ಮಾಡಿ ತಿಳಿಸಿದ್ದಾರೆ. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Politics News

Open

error: Content is protected !!