ಈ ರಾಜಕೀಯ ವ್ಯವಸ್ಥೆಯನ್ನು ಕಿತ್ತೊಗೆದು-ಪ್ರಜಾಕೀಯ ಸ್ಥಾಪಿಸೋಣ-ನಟ ಉಪೇಂದ್ರ

22

Politics (itskannada) ಕರ್ನಾಟಕ ವಿಧಾನಸಭೆ ಚುನಾವಣೆ ಬಿರಿಸು ಇನ್ನೇನೂ ಕೊನೆಯ ಹಂತಕ್ಕೆ ಬಂದು ನಿಂತಿದೆ  , ಇದೀಗ ನಟ ಉಪೇಂದ್ರ ಅವರ ಹೊಸ ಪಕ್ಷ ‘ಉತ್ತಮ ಪ್ರಜಾಕೀಯ ಪಕ್ಷ’ಕ್ಕೆ ಕೇಂದ್ರ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ನೀಡಿದೆ. ಈ ಮೊದಲು ಉಪೇಂದ್ರ ಅವರೇ ಸ್ಥಾಪಿಸಿದ್ದ ಕೆಪಿಜೆಪಿ (ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ) ದಿಂದ ಉಪೇಂದ್ರ ಅವರು ಹೊರ ಬಂದ ನಂತರ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಹೇಳಿದ್ದರು ಅಂತೆಯೇ ಇಂದು ಅವರ ಹೊಸ ಪಕ್ಷ ‘ಉತ್ತಮ ಪ್ರಜಾಕೀಯ ಪಕ್ಷ’ ಕೇಂದ್ರ ಚುನಾವಣಾ ಆಯೋಗಕ್ಕೆ ನೊಂದಾವಣಿ ಆಗಿದೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಹಾಕಿರುವ ಉಪೇಂದ್ರ ಅವರು, ನಮ್ಮ ‘ಉತ್ತಮ ಪ್ರಜಾಕೀಯ ಪಕ್ಷ ಚುನಾವಣಾ ಆಯೋಗದಲ್ಲಿ ನೊಂದಾವಣಿ ಆಗಿದೆ. ನಾವೆಲ್ಲರೂ ಸೇರಿ ಈಗಿಂದಲೇ ಈ ರಾಜಕೀಯ ವ್ಯವಸ್ಥೆಯನ್ನು ಕಿತ್ತೊಗೆದು ” ಪ್ರಜಾಕೀಯ ” ಸ್ಥಾಪಿಸಲು ಮುಂದಾಗೋಣ’ ಎಂದಿದ್ದಾರೆ.
//// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Karnataka Politics News -Kannada News

 

Open

error: Content is protected !!