ಎಚ್.ಡಿ.ಕೆ ಗೆ ಮೋದಿ ಹಾಕಿದ ಆ ಚಾಲೆಂಜ್ ಏನು ? ಎಚ್.ಡಿ.ಕೆ ಅಂದದ್ದೇನು ?

ಎಚ್ ಡಿ ಕುಮಾರಸ್ವಾಮಿಯವರಿಗೆ ಮೋದಿ ಫಿಟ್ನೆಸ್ ಚಾಲೆಂಜ್ - ಮೋದಿ ಚಾಲೆಂಜ್​​​ಗೆ ಕುಮಾರಸ್ವಾಮಿ ಕೊಟ್ಟ ಉತ್ತರ

0 55

Kannada News(itskannada) Politics ಎಚ್.ಡಿ.ಕೆ ಗೆ ಮೋದಿ ಹಾಕಿದ ಆ ಚಾಲೆಂಜ್ ಏನು ? ಎಚ್.ಡಿ.ಕೆ ಅಂದದ್ದೇನು ?

ನವದೆಹಲಿ :ವಿಶ್ವ ಯೋಗ ದಿನ  ಹತ್ತಿರವಾಗುತ್ತಿದ್ದಂತೆ ಫಿಟ್ನೆಸ್ ಚಾಲೆಂಜ್ ಗಳು ಹೆಚ್ಚುತ್ತಿವೆ. ಕಳೆದ 10 ದಿನಗಳ ಹಿಂದೆ ವಿರಾಟ್ ಕೊಹ್ಲಿ ಮೋದಿ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕಿ ಕೂತುಹಲ ಕೆರಳಿಸಿದ್ದರು.
    ಈಗ ಪ್ರಧಾನಿ ನರೇಂದ್ರ ಮೋದಿ ಅವರು “ಹಮ್ ಪಿಟ್ ತೋ ಇಂಡಿಯಾ ಪಿಟ್” ಅಭಿಯಾನದಲ್ಲಿ ತಮ್ಮ ಟ್ವಿಟ್ಟರ್ ನಲ್ಲಿ ಕರ್ನಾಟಕ ದ ಮುಖ್ಯಮಂತ್ರಿ ಎಚ್  ಡಿ ಕುಮಾರಸ್ವಾಮಿ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕಿ ಕೂತುಹಲ ಕೆರಳಿಸಿದ್ದಾರೆ. ಇದಕ್ಕೆ ಸಿಎಂ ಎಚ್  ಡಿ ಕೆ   ಪ್ರತಿಕ್ರಿಯೆ ನೀಡಿದ್ದಾರೆ.
ಅಷ್ಟೇ ಅಲ್ಲದೆ 2018ರ ಕಾಮನ್‌ವೆಲ್ತ್ ಕ್ರೀಡಾಕೂಟದ ಟೆಬಲ್ ಟೆನಿಸ್  ಆಟಗಾರ ಮಾಣಿಕ್ಯ ಬಾತ್ರಾ ಸೇರಿದಂತೆ 40ವರ್ಷ ದಾಟಿದ ಎಲ್ಲ IPS ಅಧಿಕಾರಿಗಳಿಗೂ  ಚಾಲೆಂಜ್ ಹಾಕಿ ಅಚ್ಚರಿ ಮೂಡಿಸಿದ್ದಾರೆ.
       ಪ್ರಧಾನಿ ಮೋದಿಯವರ ಟ್ವೀಟ್‌ಗೆ ರಿಟ್ವೀಟ್‌ ಮಾಡಿದ ಹೆಚ್.ಡಿ.ಕುಮರಸ್ವಾಮಿ, ನನ್ನ ಆರೋಗ್ಯದ ಕುರಿತು ನಿಮಗಿರುವ ಕಾಳಜಿಗೆ ಧನ್ಯವಾದ. ಯಾವುದೇ ಕೆಲಸ ಮಾಡಲು ಫಿಸಿಕಲ್ ಫಿಟ್ನೆಸ್ ಬೇಕು.
ದಿನನಿತ್ಯದ ನನ್ನ ಚಟುವಟಿಕೆಗಳಲ್ಲಿ ಯೋಗವನ್ನೂ ಸೇರಿಸಿದ್ದೇನೆ. ಅದಕ್ಕಿಂತಲೂ ನಾನು ಅಭಿವೃದ್ಧಿಯ ಫಿಟ್ನೆಸ್ ಕಾಯ್ದುಕೊಳ್ಳುವ ಕನಸಿದೆ. ಅದಕ್ಕೆ ನಿಮ್ಮ ಸಪೋರ್ಟ್ ಅಗತ್ಯ ಇದೆ ಎಂದು ಪರೋಕ್ಷವಾಗಿ ಮೋದಿಯ ಫಿಟ್ನೆಸ್ ಟ್ವೀಟ್ ಗೆ ಟಾಂಗ್ ಕೊಟ್ಟಿದ್ದಾರೆ. ///
Keyword – Karnataka CM Kumaraswamy responds to PM Modi’s challenge –HD Kumaraswamy responds to PM Narendra Modi’s fitness challenge – PM Modi Challenge to Karnataka CM HD Kumaraswamy On Fitness Issue – ಪ್ರಧಾನಿ ಮೋದಿಯಿಂದ ಎಚ್‍ಡಿಕೆಗೆ ಸವಾಲ್ – ಎಚ್ ಡಿ ಕುಮಾರಸ್ವಾಮಿಯವರಿಗೆ ಮೋದಿ ಫಿಟ್ನೆಸ್ ಚಾಲೆಂಜ್ – ಮೋದಿ ಚಾಲೆಂಜ್​​​ಗೆ ಕುಮಾರಸ್ವಾಮಿ ಕೊಟ್ಟ ಉತ್ತರ – ಫಿಟ್ನೆಸ್ ಸವಾಲು ಹಾಕಿದ ಪ್ರಧಾನಿ ಮೋದಿಗೆ

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!