ಗುರೂಜಿ ಪಾದಪೂಜೆ ಮಾಡಿದ ಸ್ಪೀಕರ್ ರಮೇಶಕುಮಾರ್

Kannada News (itskannada) Politics ಚಿಕ್ಕಮಗಳೂರು : ಗುರೂಜಿ ಪಾದಪೂಜೆ ಮಾಡಿದ ಸ್ಪೀಕರ್ ರಮೇಶಕುಮಾರ್ : ಮೌಢ್ಯವಿರೋಧಿ ಬಗ್ಗೆ ವಿಧಾನ ಸಭೆಯಲ್ಲಿ ಗಂಟೆಗಟ್ಟಲೇ ಭಾಷಣ ಬಿಗಿಬಿದಿದ್ದ ಸ್ಫೀಕರ್ ಕೆ.ಆರ್. ರಮೇಶಕುಮಾರ ಅವರು ಚಿಕ್ಕಮಗಳೂರು ಜಿಲ್ಲೆಯ ಗೌರಿ ಗದ್ದೆ ಗ್ರಾಮದಲ್ಲಿರುವ ವಿನಯ ಗುರೂಜಿ ಪಾದಪೂಜೆ ನೆರವೇರಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ರಮೇಶಕುಮಾರ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಶಾಸಕರಾಗಿದ್ದು, ಚುನಾವಣೆ ಪೂರ್ವದಲ್ಲಿ ವಿನಯ ಗುರುಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು.

ಆಗ ನೀವು ಈ ಬಾರಿ ಖಂಡಿತ ಗೆಲ್ಲುತ್ತೀರಿ ಎಂದು ಭವಿಷ್ಯ ನುಡಿದಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಭೇಟಿ ಮಾಡಿ ಪಾದಪೂಜೆ ಸಲ್ಲಿಸಿದ್ದಾರೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ವಿನಯ ಗುರೂಜಿಯವರನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಸಿಎಂ ಕುಮಾರಸ್ವಾಮಿ ಕೂಡ ಚುನಾವಣೆ ಪೂರ್ವದಲ್ಲಿ ಸಹೋದರ ರೇವಣ್ಣ ಜೊತೆಗೆ ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಅನೇಕ ರಾಜಕಾರಣಿಗಳು ಇವರನ್ನು ಭೇಟಿ ಮಾಡಿ ತಮ್ಮ ಭವಿಷ್ಯ ತಿಳಿದುಕೊಂಡಿದ್ದರು ಎನ್ನಲಾಗಿದೆ. ಇದೀಗ ವಿನಯ ಗುರೂಜಿಯವರ ಬಗ್ಗೆ ನಾಡಿನಲ್ಲಡೆ ಭಾರೀ ಕುತೂಹಲ ಕೆರಳಿಸಿದೆ. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Karnataka Politics News – Karnataka News

Pada pooja performed by Karnataka Assembly Speaker-Ramesh Kumar