ನರೇಂದ್ರ ಮೋದಿಯನ್ನು ಹೊಗಳಿದ ಸಿ.ಎಂ-ಏನಿದು

name missed from siddaramaiah

Mandya (itskannada) ಮಂಡ್ಯ: ನರೇಂದ್ರ ಮೋದಿಯನ್ನು ಹೊಗಳಿದ ಸಿ.ಎಂ-ಏನಿದು ? ಮಂಡ್ಯದಲ್ಲಿ ಕಾಂಗ್ರೇಸ್ ಪರ ಪ್ರಚಾರ ಮಾಡುತ್ತಿದ್ದ ಸಿದ್ದರಾಮಯ್ಯ ಒಮ್ಮೆಲ್ಲೆ ನರೇಂದ್ರ ಮೋದಿಯನ್ನು ಹೊಗಳಲು ಆರಂಭಿಸಿದಾಗ ಎಲ್ಲರಿಗೂ ಆಶ್ವರ್ಯವಾಗಿತ್ತು. “ನಿಮ್ಮ ರಸ್ತೆಗಳು, ಚರಂಡಿಗಳು ಹಾಗೂ ಎಲ್ಲ ಅಭಿವೃದ್ದಿ ಕೆಲಸಗಳಿಗೆ ನರೇಂದ್ರ ಮೋದಿ ಕಾರಣ ಎಂದು ಹೇಳಿದಾಗ ಎಲ್ಲರಿಗೂ ಶಾಕ್! ಆದರೆ ಇದು ಬಾಯಿ ತಪ್ಪಿ ಹೇಳಿದ ಸಿದ್ದು ನರೇಂದ್ರ ಮೋದಿಯಲ್ಲ ನರೇಂದ್ರ ಸ್ವಾಮಿಯೆಂದು ಸರಿ ಪಡಿಸಿಕೊಂಡರು. ಅವರು ಮಂಡ್ಯದ ಮಾವಳ್ಳಿಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ನರೇಂದ್ರ ಸ್ವಾಮಿ ಪರ ಪ್ರಚಾರ ಮಾಡುತ್ತಿದ್ದರು.

ನರೇಂದ್ರ ಮೋದಿ ಗುಜರಾತಿನ ಸುಳ್ಳು, ಆದರೆ ನಿಮ್ಮ ಕ್ಷೇತ್ರದ ನರೇಂದ್ರ ಸ್ವಾಮಿ ನಿಜ ಎಂದು ಹೇಳಿ ಕೂಡಲೇ ತಮ್ಮ ತಪ್ಪನ್ನು ಸರಿ ಪಡಿಸಿಕೊಂಡರು. ಕಳೆದ ಬಾರಿ ಅಮಿತ‍್ ಶಾ ಬಾಯಿ ತಪ್ಪಿ ಯಡಿಯೂರಪ್ಪರನ್ನು ಭ್ರಷ್ಟ ವೆಂದು ಹೇಳುವ ಮೂಲಕ ಸುದ್ದಿಯಾಗಿದ್ದರು. ಇದೀಗ ಸಿದ್ದರಾಮಯ್ಯ ಮೋದಿಯನ್ನು ಬಾಯಿ ತಪ್ಪಿ ಹೊಗಳಿ ಸುದ್ದಿಯಲ್ಲಿದ್ದಾರೆ./// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ –  Mandya News Online – Politics – Karnataka Politics News – Kannada News