ಆರ್ ಆರ್ ನಗರ-ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಭರ್ಜರಿ ಜಯ

0 21

Politics (itskannada) ಬೆಂಗಳೂರು: ಆರ್ ಆರ್ ನಗರ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಸ್ಪಷ್ಟ ಗೆಲುವು ದಾಖಲಿಸಿದ್ದಾರೆ. ಭರ್ಜರಿ ಮತಗಳಿಂದ ಜಯಗೊಂಡ ಮುನಿರತ್ನ ಪರ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ನಕಲಿ ಗುರುತಿನ  ಚೀಟಿಗಳ ಪ್ರಕರಣದಲ್ಲಿ ಹೊಡೆತ ಬೀಳಬಹುದೆಂಬ ನಿರೀಕ್ಷೆಯಲ್ಲಿದ್ದ ಪಕ್ಷಗಳು ಈಗ  ಆಶ್ಚರ್ಯಗೊಂಡಿದ್ದಾರೆ.

ಮುನಿರತ್ನ ಪರ ಕಾರ್ಯಕರ್ತರು ಮಾತನಾಡಿ , ಕ್ಷೇತ್ರದಲ್ಲಿ ಅವರು ಮಾಡಿರುವ ಅಭಿವೃದ್ದಿ ಕಾರ್ಯಗಳು ಅವರು ಇಂದು ಗೆಲುವು ಸಾಧಿಸಲು ನೆರವಾಯಿತು ಎಂದರು.
ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ ಅವರನ್ನು 40 ಸಾವಿರಕ್ಕೂ ದೊಡ್ಡ ಅಂತರದಿಂದ ಸೋಲಿಸಿದ ಮುನಿರತ್ನ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮುನಿರತ್ನಗೆ 1,03,195 ಮತಗಳು ಬಂದಿವೆ. ಮುನಿರಾಜು ಗೌಡ 69,769 ಮತಗಳನ್ನು ಗಳಿಸಿದ್ದಾರೆ.
ಇನ್ನು ನೋಟಾದಡಿಯಲ್ಲಿ 1286 ಹೆಚ್ಚು ಮತಗಳು ಬಂದಿರುವುದು ವಿಶೇಷ. ಜೆಡಿಎಸ್ ಅಭ್ಯರ್ಥಿ ರಾಮಚಂದ್ರ 54,285 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ////   ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ- Karnataka Politics News – Kannada News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!