ಚುನಾವಣಾ ಭವಿಷ್ಯ ಮೊದಲೇ ನುಡಿದಿದ್ದ ಕೋಡಿಶ್ರೀಗಳು

Politics (itskannada) ಚುನಾವಣಾ ಭವಿಷ್ಯ ಮೊದಲೇ ನುಡಿದಿದ್ದ ಕೋಡಿಶ್ರೀಗಳು : ಕೆಲವು ಬಾರಿ ಮಾರ್ಮಿಕ ಮಾತುಗಳು ಆ ಕ್ಷಣಕ್ಕೆ ಅರ್ಥೈಯಿಸುವುದಿಲ್ಲವಾದರು, ಅವುಗಳು ಗಳಿಸಿದಾಗ ಅದರ ಮರ್ಮ ತಿಳಿಯಲಾಗುತ್ತದೆ. ಇಂದಿನ ಈಗಿನ ರಾಜಕೀಯ ಬೆಳವಣಿಗೆಗಳ ಬಗೆಗೆ ವರುಷದ ಹಿಂದೆಯೇ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು.

ತಾಳೇಗರಿ ಆಧಾರದಲ್ಲಿ ಕೋಡಿಶ್ರೀಗಳು ಅಂದು ಹೇಳಿದ ಭವಿಷ್ಯ ಇದೀಗ ಗಳಿಸಿದೆ. ಕುಮಾರಸ್ವಾಮಿ ಸಿಎಂ ಆಗಲಿದ್ದಾರೆಂದು ಶ್ರೀಗಳು ಪರೋಕ್ಷವಾಗಿ ಹೇಳಿದ್ದರಾದರೂ ಅವರು ಹೇಳಿದ ಭವಿಷ್ಯ ಸತ್ಯವಾಗಿದೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ಲೆಕ್ಕಾಚಾರ ತಪ್ಪಲಿದೆ ಎಂದು ಹೇಳಿದ್ದರು.
ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹಿನ್ನಡೆ ಅನುಭವಿಸಲಿದೆ, ಅನಿರೀಕ್ಷಿತ ವ್ಯಕ್ತಿ ರಾಜ್ಯದ ಅರಸನಾಗಲಿದ್ದಾನೆಂದು ಶ್ರೀಗಳು ಭವಿಷ್ಯ ನುಡಿದಿದ್ದರು. ಅದರಂತೇ, ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ,ಬಹುಮತ ಸಿಗದೇ, ಅತಂತ್ರ ಸ್ಥಿತಿಯಲ್ಲಿ ಸರ್ಕಾರ ರಚನೆ ಸಾದ್ಯವಾಗಲಿಲ್ಲ. ಇನ್ನು ಕಾಂಗ್ರೆಸ್ 78ಸ್ಥಾನ ಪಡೆದು, ಬಿಜೆಪಿಯನ್ನು ದೂರವಿಡಲು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆಗೆ ಬಿದ್ದು ಒಂದಾಗಿದೆ. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ- ಕರ್ನಾಟಕ ರಾಜಕೀಯ ಸುದ್ದಿ ಗಳು-Karnataka Politics News-Kannada News