ಕರ್ನಾಟಕ ಸರ್ಕಾರ ರಚನೆ-ಕಾಂಗ್ರೆಸ್,ಜೆಡಿ (ಎಸ್) ಶಾಸಕರು ಬಿಡದಿಯಿಂದ ಕೊಚ್ಚಿಗೆ ಸ್ಥಳ ಬದಲಾವಣೆ

Karnataka Government Formation-Congress, JDS MLAs moved to Kochi

44
ಚಿತ್ರ ಕೃಪೆ : ANI

Politics (itskannada) ಕರ್ನಾಟಕ ಸರ್ಕಾರ ರಚನೆ-ಕಾಂಗ್ರೆಸ್,ಜೆಡಿ (ಎಸ್) ಶಾಸಕರು ಬಿಡದಿಯಿಂದ ಕೊಚ್ಚಿಗೆ ಸ್ಥಳ ಬದಲಾವಣೆ -ಬಿಜೆಪಿಯ ಪಕ್ಷಾಂತರವನ್ನು ತಡೆಗಟ್ಟಲು, ಕುದುರೆ ವ್ಯಾಪಾರದಿಂದ ದೂರವಿರಲು ಕಾಂಗ್ರೆಸ್ ಪಕ್ಷ ಮತ್ತು ಜೆಡಿ (ಎಸ್) ಪಕ್ಷ ಗುರುವಾರ ರಾತ್ರೋ ರಾತ್ರಿ ತಮ್ಮ ಶಾಸಕರನ್ನು ರಾಮನಗರದ ಬಿಡದಿಯ ಈಗಲ್ಟನ್ ರೆಸಾರ್ಟ್ ನಿಂದ ಬೇರೆ ಸ್ಥಳಗಳಿಗೆ ಸ್ಥಳಾಂತರಿಸಿದೆ. ಬಿಜೆಪಿ ಕಾರ್ಯಕರ್ತರು ರೆಸಾರ್ಟ್ ಗೆ ಪ್ರವೇಶಿಸಲು ಮತ್ತು ಎಂಎಲ್ಎಗಳಿಗೆ ಹಣವನ್ನು ನೀಡಲು ಪ್ರಯತ್ನಿಸಿದ ಬಳಿಕ ಎಂಎಲ್ಎಗಳನ್ನು ಬಹಿರಂಗಪಡಿಸದ ಸ್ಥಳಕ್ಕೆ ಕರೆದೊಯ್ಯಲಾಗಿದೆ.

ಸುಪ್ರೀಂ ಕೋರ್ಟ್ ನ ರಾತ್ರಿಯ ಕಾನೂನಿನ ಯುದ್ಧದ ಬಳಿಕ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಕರ್ನಾಟಕದ 23 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಕರ್ನಾಟಕ ರಾಜ್ಯಪಾಲ ವಾಜುವೈ ವಾಲಾ ಬಿಜೆಪಿಗೆ ಅವಕಾಶ ನೀಡಿರುವ ನಂತರ, ಬಹುಮತವನ್ನು ಸಾಬೀತುಮಾಡುವ ಮೊದಲ ಅವಕಾಶ ಅಧಿಕೃತವಾಗಿ ಘೋಷಿಸಿದೆ.

ಎಚ್ಚರಗೊಂಡ ಕಾಂಗ್ರೆಸ್, ಜೆಡಿ (ಎಸ್) ಪಕ್ಷಗಳು ಕುದುರೆ ವ್ಯಾಪಾರವನ್ನು ನಿಲ್ಲಿಸಲು ಎಲ್ಲಾ ಶಾಸಕರು ಬಿಡದಿಯಿಂದ ಕೊಚ್ಚಿಗೆ ಸ್ಥಳ ಬದಲಾವಣೆ ಮಾಡಿದ್ದಾರೆ. ////  ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಅಥವಾ ಕರ್ನಾಟಕ ರಾಜಕೀಯ ಸುದ್ದಿ ಗಾಗಿ ತಪ್ಪದೆ ಕ್ಲಿಕ್ಕಿಸಿ – – Karnataka Politics News – Kannada News – Karnataka News

Open

error: Content is protected !!