ಕನ್ನಡರಿಗೆ ಕ್ಷಮೆ ಕೋರಿದ ಜಮೀರ್ ಅಹಮದ್ !

Kannada News (itskannada) Politics News ತುಮಕೂರು : ಕನ್ನಡರಿಗೆ ಕ್ಷಮೆ ಕೋರಿದ ಜಮೀರ್ ಅಹಮದ್ !  : ಚಾಮರಾಜಪೇಟೆಯ ಶಾಸಕ ಜಮೀರ್ ಅಹಮದ್ ಮೊನ್ನೆ ಸಚಿವ ಸಂಪುಟ ಸಮಾರಂಭದಲ್ಲಿ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದರಿಂದ ಕನ್ನಡಿಗರು ಅಭಿಮನಕ್ಕೆ ಧಕ್ಕೆ ಯಾಗಿದೆ ಎಂದು ತುಮಕೂರುನಲ್ಲಿ ಕ್ಷಮೆ ಕೇಳಿದರು.

 ಕನ್ನಡರಿಗೆ ಕ್ಷಮೆ ಕೋರಿದ ಜಮೀರ್ ಅಹಮದ್

ಇಂದು ಅವರು ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ  ಆಶೀರ್ವಾದ ಪಡೆದರು. ನಂತರ ಮಾಧ್ಯಮದೊಂದಿಗೆ ಮಾತನಾಡಿ, ನನಗೆ ಕನ್ನಡ ಸರಿಯಾಗಿ ಬರುವುದಿಲ್ಲ. ಅಲ್ಲದೆ ನನ್ನ ತಂದೆ ತಾಯಿಗಳು ನನಗೆ ಕನ್ನಡ ಕಲಿಸಲಿಲ್ಲ.
ಅದಕ್ಕಾಗಿ ನಾನು ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದೆ. ಆದ್ದರಿಂದ ನನ್ನನ್ನು ಕ್ಷಮಿಸಿ ಎಂದರು.  ಅಲ್ಲದೇ ನಾನು ಮೊದಲು ಭಾರತೀಯ ನಂತರ ಕನ್ನಡಿಗ ಆಮೇಲೆ ಮುಸ್ಲಿಂ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಜೆಡಿಎಸ್ ಜೊತೆ ಮಿಂಗಲ್!

ನಾನು ಜೆಡಿಎಸ್ ಶಾಸಕರು ಚೆನ್ನಾಗಿದೇವೆ. ಈಗಾಗಲೇ ಸಿಎಂ ಕುಮಾರಸ್ವಾಮಿ ಜೊತೆ ಮಾತನಾಡಿದ್ದೇನೆ.  ಅಗತ್ಯ ಬಿದ್ದರೆ ದೇವೆಗೌಡರ ಬಳಿ ರಾಜಕೀಯ ವಿಷಯ ಚರ್ಚಿಸುವೆ. ಯಾರ ಜೊತೆ ಅಸಮಾಧಾನ ಇಲ್ಲ. ಅಸಮಾಧಾನ ಹೇಗೆ ಬರುತ್ತೆ ಹೊಂದಿಕೊಂಡು ಹೋಗಬೇಕು.  ಮೈತ್ರಿ ಸರ್ಕಾರದಲ್ಲಿ ನನಗೆ ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಕಲ್ಯಾಣ ನೀಡಿದ್ದಾರೆ.  ಆದರೆ ಅನುಭವಿಲ್ಲದಿದ್ದರು ಅದರಲ್ಲಿ ನಂಬರ 1 ಆಗಿ ಕೆಲಸ ಮಾಡಿ ತೋರಿಸುವೇನು ಎಂದು ಹೇಳಿದರು . //// Karnataka Politics News – Karnataka News –  Tumkur News Online

 

Webtitle  : ಕನ್ನಡರಿಗೆ ಕ್ಷಮೆ ಕೋರಿದ ಜಮೀರ್ ಅಹಮದ್