ದಳದಲ್ಲಿ ಭುಗಿಲೆದ್ದ ಭಿನ್ನಮತ-ಅಚ್ಚರಿ ಮೂಡಿದೆ ರಾಮಲಿಂಗಾರೆಡ್ಡಿ ಭೇಟಿ | ಕನ್ನಡ ನ್ಯೂಸ್

0 72

Kannada News (itskannada) Politics : ದಳದಲ್ಲಿ ಭುಗಿಲೆದ್ದ ಭಿನ್ನಮತ-ಅಚ್ಚರಿ ಮೂಡಿದೆ ರಾಮಲಿಂಗಾರೆಡ್ಡಿ ಭೇಟಿ : ಬೆಂಗಳೂರು : ಜೆಡಿಎಸ್  ಮೈತ್ರಿ ಸರ್ಕಾರ ರಚಿಸಿಕೊಂಡ ಹಿನ್ನೆಲೆಯಲ್ಲಿ ಯಾರಿಗೆ ಸಚಿವ ಸ್ಥಾನ ಹಂಚಬೇಕು ಎಂಬ ಗೊಂದಲದಲ್ಲಿ ಜೆಡಿಎಸ್ ಪಕ್ಷದಲ್ಲಿ ಭಿನ್ನಮತ ಸ್ಪೋಟಗೊಂಡಂತೆ ಅನಿಸುತ್ತಿದೆ. ಯಾಕಂದರೆ ಎ.ಟಿ ರಾಮಸ್ವಾಮಿ. ಹೆಚ್.ವಿಶ್ವನಾಥ ಹಾಗೂ ಬಸವರಾಜ್ ಹೊರಟ್ಟಿ ಅಸಮಾಧಾನಗೊಂಡಿದ್ದಾರೆ.  ಈಗ ಮಂತ್ರಿ ಸ್ಥಾನ ಸಿಗಲ್ಲ ಎಂದು ಲಿಸ್ಟನಲ್ಲಿ ಸ್ಥಾನ ಇಲ್ಲ ಎಂದು ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹೆಚ್.ವಿಶ್ವನಾಥ ಅವರು ನಾನು ಸಚಿವ ಸ್ಥಾನದ ಆಕಾಂಕ್ಷಿ ನನಗೂ ಬೇಕು ಎಂದು ಪಟ್ಟು ಹಿಡಿದಿದ್ದಾರೆ.

ದಳದಲ್ಲಿ ಭುಗಿಲೆದ್ದ ಭಿನ್ನಮತ-ಅಚ್ಚರಿ ಮೂಡಿದೆ ರಾಮಲಿಂಗಾರೆಡ್ಡಿ ಭೇಟಿ | ಕನ್ನಡ ನ್ಯೂಸ್

ಲ್ಲದೆ ಈಗಾಗಲೇ ಸಿಎಂ ಕುಮಾರಸ್ವಾಮಿ ಜೆಡಿಎಸ್ ನಲ್ಲಿ ೯ ಮಾತ್ರ ಸಚಿವ ಸ್ಥಾನ ನೀಡಲು ನಿರ್ಧರಿಸಿದ್ದಾರಂತೆ. ನಾಳೆ ಪೂರ್ಣ ಪ್ರಮಾಣದ ಸಂಪುಟ ರಚನೆ ಆಗೋದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಇದರಿಂದ ಶಾಸಕರಲ್ಲಿ ತಳಮಳ ಉಂಟಾಗಿದೆ. ಹೀಗಿರುವಾಗ ಜೆಡಿಎಸ್ ವರಿಷ್ಟರಾದ ಹೆಚ್.ಡಿ ದೇವೆಗೌಡ ಅವರಿಗೆ ತಲೆನೋವಾಗಿದೆ. ಅದರಲ್ಲೂ ಹಿರಿಯ ಹಾಗೂ ಕಿರಿಯ ಶಾಸಕರಲ್ಲಿ ಯಾರಿಗೆ ಯಾವ ಖಾತೆ ನೀಡಬೇಕು ಎಂಬ ಗೊಂದಲವುಂಟಾಗಿದೆ. ಇದರಿಂದ ಹಲವು ನಾಯಕರು ಪರೋಕ್ಷ ಟಾಂಗ್ ನೀಡುತ್ತಿದ್ದಾರೆ . ಇದರಿಂದ ಪಕ್ಷ ಹಿತ ಜೊತೆ ಶಾಸಕರನ್ನು ಯಾವ ರೀತಿ ನಿಭಾಯಿಸುತ್ತಾರೆ ಎಂಬುದನ್ನು ನಾಳೆ ನೋಡಬೇಕಾಗುತ್ತದೆ.
ಅಚ್ಚರಿ ಮೂಡಿದೆ ರಾಮಲಿಂಗಾರೆಡ್ಡಿ ಭೇಟಿ
ಪದ್ಮನಾಭನಗರದಲ್ಲಿರುವ ಎಚ್.ಡಿ.ಡಿ ನಿವಾಸಕ್ಕೆ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಭೇಟಿ ನೀಡಿದ್ದು ಇದು ಅಚ್ಚರಿ ತಂದಿದ್ದು ಯಾವ ಕಾರಣಕ್ಕಾಗಿ ದೇವೆಗೌಡರ ಮನೆಗೆ ಬಂದಿದ್ದಾರೆ ಎಂದು ತಿಳಿದು ಬಂದಿಲ್ಲ ಅದನ್ನು ಕಾದು ನೋಡಬೇಕಾಗಿದೆ.
-ಶಶಿಧರ ಚಂ ಬಿಕ್ಕಣ್ಣವರ

/// ಈ ವಿಭಾಗದ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ಕಿಸಿ – Karnataka Crime news – Kannada News – ಕನ್ನಡ ನ್ಯೂಸ್

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!