ಉಪಸಭಾಪತಿ ಹುದ್ದೆಯನ್ನು ಒಪ್ಪಿಕೊಳ್ಳುವುದಿಲ್ಲ : ಎ ಟಿ ಆರ್ | ಕನ್ನಡ ನ್ಯೂಸ್

Kannada News (itskannada) Politics : ಹಾಸನ :  ಉಪ ಸಭಾಪತಿಯಾದರೆ ಕೆಲವು ವಿಷಯಗಳ ಬಗ್ಗೆ ಮೌನ ವಹಿಸಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಆ ಹುದ್ದೆಯನ್ನು ಒಪ್ಪಿಕೊಳ್ಳಲಾರೆ ಎಂದು ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕ ಎ. ಟಿ. ರಾಮಸ್ವಾಮಿ ಹೇಳಿದರು. ಉಪ ಸಭಾಪತಿಯಾದರೆ ಪ್ರಮುಖ ವಿಷಯಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಲು ಆಗುವುದಿಲ್ಲ. ನಾನು ಜನರ ನಡುವೆ ನಿಂತು ಕೆಲಸ ಮಾಡುವವನು, ಆದ್ದರಿಂದ ಆ ಹುದ್ದೆ ನನಗೆ ಬೇಡ ಎಂದು ಅರಕಲಗೂಡಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನನಗೆ ಸಚಿವ ಸ್ಥಾನ ನೀಡಿದರೆ ನಿಭಾಯಿಸುವ ಸಾಮರ್ಥ್ಯ ನನಗಿದೆ. ಆದರೆ ಅದಕ್ಕಾಗಿ ಲಾಬಿ ನಡೆಸುವುದಿಲ್ಲ. ಜೆಡಿಎಸ್ ಪಕ್ಷಕ್ಕೆ ಸಿಕ್ಕಿರುವ ಸಚಿವ ಸ್ಥಾನಗಳ ಸಂಖ್ಯೆ ಕಡಿಮೆ. ನಾವು ಪಕ್ಷದ ವರಿಷ್ಠರಿಗೆ ಸರಾಗವಾಗಿ ಸರ್ಕಾರದ ಕೆಲಸ ಮಾಡಲು ಬಿಡಬೇಕು. ಹಿರಿತನ ಆಧರಿಸಿ ಹಂಚಿಕೆಯಾಗಬೇಕಾಗುತ್ತದೆ ಎಂದರು.
ನನಗೆ ನನ್ನ ಕ್ಷೇತ್ರದ ಜನರೇ ಪ್ರಭುಗಳು, ಅವರ ಸ್ಥಾನದಲ್ಲಿ ಮಂತ್ರಿಯಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಒಬ್ಬ ಸಚಿವನಿಗಿಂತಲೂ ಹೆಚ್ಚು ಕೆಲಸ ಮಾಡಿ ತೋರಿಸುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದರು. ///
Karnataka Politics News – Karnataka News