ಜಯನಗರ ಕೈಗೆ ಜೈ ಅಂದ ಜೆಡಿಎಸ್ | ಕನ್ನಡ ನ್ಯೂಸ್

JDS Support Congress Candidate Sowmya Reddy | Kannada News

Kannada News (itskannada) Politics ಬೆಂಗಳೂರು : ಜಯನಗರ ಕ್ಷೇತ್ರದ ಉಪಚುನಾವಣೆ ಜೂನ 11 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಸರ್ಕಾರ ರಚಿಸಿಕೊಂಡ ಹಿನ್ನೆಲೆಯಲ್ಲಿ  ಜಯನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಹಿಂದೆ ಸರಿದಿದ್ದಾರೆ.

ಜಯನಗರ ಕೈಗೆ ಜೈ ಅಂದ ಜೆಡಿಎಸ್ | ಕನ್ನಡ ನ್ಯೂಸ್-itskannada ಜಯನಗರ ಕೈಗೆ ಜೈ ಅಂದ ಜೆಡಿಎಸ್ | ಕನ್ನಡ ನ್ಯೂಸ್

ಯಾಕೆಂದರೆ ಆರ್.ಆರ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಜಯ ಗಳಿಸಿದ್ದರು. ಇದರಲ್ಲಿ ಜೆಡಿಎಸ್ ಅಭ್ಯರ್ಥಿ ಸೋತಿದ್ದರು. ಆದ್ದರಿಂದ ಇಲ್ಲು ಸೋಲಾಗಬಹುದು ಎಂಬ ಕಾರಣದಿಂದ ಜೆಡಿಎಸ್ ವರಿಷ್ಠ ಎಚ್.ಡಿ ದೇವೆಗೌಡ ಅವರು ಹಿಂದೆ ಸರಿ ಎನ್ನುತ್ತಿದ್ದಂತೆ ಕಾಳೇಗೌಡ ಜಯನಗರ ಕ್ಷೇತ್ರದಿಂದ ಹಿಂದೆ ಸರಿದಿದ್ದಾರೆ.  ಈ ಹಿನ್ನೆಲೆಯಲ್ಲಿ ಜೆಡಿಎಸ್ ಕೈ ಗೆ ಜೈ ಅಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿಗೆ ಬೆಂಬಲ ಸೂಚಿಸಿದ್ದಾರೆ. ಸೌಮ್ಯರೆಡ್ಡಿ ಕಾಂಗ್ರೆಸ್ ಪಕ್ಷದ ರಾಮಲಿಂಗಾರೆಡ್ಡಿ ಮಗಳು. ಅವರು ಬಿಜೆಪಿಯ ಅಭ್ಯರ್ಥಿ  ಬಿ.ಎನ್. ವಿಜಯಕುಮಾರ ನೇರ ನೇರವಾಗಿ ಎದುರಿಸಲಿದ್ದಾರೆ.ಇದೇ ಬರುವ ಜೂನ್ ೧೧ ರಂದು ಚುನಾವಣೆ ನಡೆಯಲಿದ್ದು ಯಾರ ಕೊರಳಿಗೆ ವಿಜಯ ಮಾಲೆ ಎಂಬುದನ್ನು ಕಾದು ನೋಡಬೇಕಾಗಿದೆ.

-ಶಶಿಧರ ಬಿಕ್ಕಣ್ಣವರ 

ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Karnataka Politics News – Karnataka News – ಕನ್ನಡ ರಾಜಕೀಯ ಸುದ್ದಿ – ರಾಜಕೀಯ – ಕರ್ನಾಟಕ ರಾಜಕೀಯ ಸುದ್ದಿ , ರಾಜಕೀಯ ನ್ಯೂಸ್ ,