ಬಿ.ಎಂ.ಫಾರೂಕ್ ಗೆ ಸಚಿವ ಸ್ಥಾನ ಸಿಗೋದು ಡೌಟ್ | ಕನ್ನಡ ನ್ಯೂಸ್

Kannada News (itskannada) Politics : ಬೆಂಗಳೂರು – ಬಿ.ಎಂ.ಫಾರೂಕ್ ಗೆ ಸಚಿವ ಸ್ಥಾನ ಸಿಗೋದು ಡೌಟ್ : ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಸಚಿವ ಸಂಪುಟ ವಿಸ್ತರಣೆ ಬುಧವಾರ ನಡೆಯಲಿದೆ. ಈಗಾಗಲೇ ಯಾರಿಗೆ ಯಾವ ಖಾತೆ ನೀಡಬೇಕು, ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಚರ್ಚೆ ಎರಡೂ ಪಕ್ಷಗಳಲ್ಲಿ ನಡೆಯುತ್ತಿದೆ. ಜೆಡಿಎಸ್ ನಿಂದ ಈ ಹಿಂದೆ ಕುಮಾರಸ್ವಾಮಿ ಅವರ ಸಂಪುಟದಲ್ಲಿ ದಕ್ಷಿಣ ಕನ್ನಡ ಭಾಗದ ಮುಸ್ಲಿಂ ಸಮುದಾಯಕ್ಕೆ ಸೇರಿದ ಉದ್ಯಮಿ ಬಿ. ಎಂ. ಫಾರೂಕ್ ಅವರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ.

ಎರಡು ಬಾರಿ ರಾಜ್ಯಸಭೆ ಚುನಾವಣೆಗೆ ನಿಂತು ಸೋಲೊಪ್ಪಿಕೊಂಡಿದ್ದ  ಫಾರೂಕ್ ಅವರನ್ನು ಜೆಡಿಎಸ್ ವಿಧಾನ ಪರಿಷತ್ ಸದಸ್ಯರನಾಗಿ ಮಾಡಿದೆ. ಒಂದು ಹುದ್ದೆ ನೀಡಿ ಇದೀಗ ಮತ್ತೊಂದು ಸ್ಥಾನ ನೀಡಲು ಜೆಡಿಎಸ್ ಮುಖಂಡರು ಹಿಂದೇಟು ಹಾಕುತ್ತಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಭಾಗಗಳನ್ನು ಒಳಗೊಂಡ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಜೆಡಿಎಸ್ ಒಂದೇ ಒಂದು ಸ್ಥಾನವನ್ನು ಗೆದ್ದಿಲ್ಲ. ಈ ಭಾಗಕ್ಕೆ ಸೇರಿರುವ ಏಕೈಕ ಶಾಸಕ ಎಂದರೆ ಬಿ. ಎಂ. ಫಾರೂಕ್ ಮಾತ್ರ. ಜೊತೆಗೆ ರಾಜ್ಯಮಟ್ಟದಲ್ಲಿ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿರುವ ಏಕೈಕ ನಾಯಕ ಬಿ. ಎಂ. ಫಾರೂಕ್.
ಹೀಗಾಗಿ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಲೆಕ್ಕಾಚಾರಗಳಿತ್ತು. ಆದರೆ ಅವರೀಗ ಕೇವಲ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ. ///
ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Karnataka Politics News – Karnataka News

WebTitle  : ಬಿ.ಎಂ.ಫಾರೂಕ್ ಗೆ ಸಚಿವ ಸ್ಥಾನ ಸಿಗೋದು ಡೌಟ್…!  Keyword : ಕನ್ನಡ ನ್ಯೂಸ್ , ಕನ್ನಡ ಸುದ್ದಿ , ಕನ್ನಡ ರಾಜಕೀಯ , ರಾಜಕೀಯ ಸುದ್ದಿ , Rajakiya news ,Rajakeeya News ,