ಜಯನಗರ ವಿಧಾನಸಭಾ ಚುನಾವಣೆ-ಯಾರಿಗೆ ಜಯದ ಮಾಲೆ

0 31

Kannada News (itskannada) Politics ಬೆಂಗಳೂರು: ಜಯನಗರ ವಿಧಾನಸಭಾ ಚುನಾವಣೆ-ಯಾರಿಗೆ ಜಯದ ಮಾಲೆ : Jayanagar Assembly Elections 2018 – ಜಿದ್ದಾಜಿದ್ದಿಯಿಂದ ಕುತೂಹಲದಿಂದ ಕೂಡಿರುವ  ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ  ನಡೆಯುತ್ತಿದ್ದು. ಶಾಸಕ ವಿಜಯ ಕುಮಾರ್ ಅವರ ಸಾವಿನಿಂದ  ಮುಂದೂಡಲಾಗಿತ್ತು. ಜಯನಗರ ಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಪ್ರತಿಷ್ಠೆಯ ಕಣವಾಗಿದ್ದು ಯಾರಿಗೆ ವಿಜಯದ ಮಾಲೆ ಎಂಬುದು ನೋಡಬೇಕಾಗಿದೆ .

ಜಯನಗರ ವಿಧಾನಸಭಾ ಚುನಾವಣೆ 2018-ಯಾರಿಗೆ ಜಯದ ಮಾಲೆ

ಆರ್.ಆರ್ ನಗರದಲ್ಲಿ ಬಿಜೆಪಿ ಸೋಲು ಅನುಭವಿಸಿದ್ದರಿಂದ ಇಲ್ಲಿ ಗೆಲುವಿನ ಲೆಕ್ಕಾಚಾರ ಹೊಂದಿದೆ. ಅದಕ್ಕೆ ಪೂರಕವಾಗಿ ಕೈ ಹಾಗೂ ಮೈತ್ರಿಯಿಂದ  ಇಬ್ಬರು ಪಕ್ಷದ ನಡುವೆ ಕಾಂಗ್ರೆಸ್ ಅಭ್ಯರ್ಥಿಯನ್ನು ಮಾತ್ರ ನಿಲ್ಲಿಸಿದ್ದಾರೆ. ಅದರಂತೆ  ಒಟ್ಟಾರೆ ಜಯನಗರ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಈ ಪೈಕಿ 9 ಮಂದಿ ಪಕ್ಷೇತರರಿದ್ದಾರೆ.

ಜಯನಗರ ವಿಧಾನಸಭಾ ಚುನಾವಣೆ ಯಲ್ಲಿ- ಅರಳಬಹುದೇ ಕಮಲ 

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯಿಂದ  ಪ್ರಹ್ಲಾದ್ ಬಾಬುಗೆ ಟಿಕೆಟ್ ನೀಡಿದ್ದರಿಂದ ಸ್ಥಳೀಯ ಕಾರ್ಪೊರೇಟರ್‌ಗಳು ಬಂಡಾಯ ಎದ್ದಿದ್ದರು. ಆಗ  ರಾಜ್ಯ ಬಿಜೆಪಿ ನಾಯಕರ ಮೂಲಕ ಬಿಜೆಪಿ ಪಾಲಿಕೆ ಸದಸ್ಯರ ಮನವೊಲಿಸಲು ಸಫಲರಾಗಿದ್ದರು. ಈ ಬಾರಿ ಹೇಗಾದರೂ ಮಾಡಿ  ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿರುವ ಬಿಜೆಪಿ  ಭರ್ಜರಿ ಪ್ರಚಾರ ಕಾರ್ಯ ನಡೆಸಿತ್ತು. ಕೇಂದ್ರ ಸಚಿವ ಅನಂತ ಕುಮಾರ್, ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, ಆರ್.ಅಶೋಕ್ ಸೇರಿದಂತೆ ಹಲವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಆದರೆ ಮೇಲ್ನೋಟಕ್ಕೆ ಅತೃಪ್ತಿ ಶಮನಗೊಂಡಂತೆ ಕಂಡುಬಂದರೂ ಬಿಜೆಪಿಗೆ ಹಿನ್ನಡೆಯಾಗಬಹುದು ಎಂಬ ಸಂಶಯವ ಕಾಡುತ್ತಿದೆ .

ಜಯನಗರ ವಿಧಾನಸಭಾ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಪ್ರಬಲ ಪೈಪೋಟಿ

ಇತ್ತ ಕಾಂಗ್ರೆಸ್ ಸಹ ಸುಮ್ಮನೆ ಕುತ್ತಿಲ್ಲ . ಮಾಜಿ ಸಚಿವ ರಾಮಲಿಂಗಾರೆಡ್ಡಿ ತಮ್ಮ ಪುತ್ರಿ ಪರವಾಗಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಜಯನಗರ ಕ್ಷೇತ್ರ ರಾಮಲಿಂಗಾ ರೆಡ್ಡಿಯವರ ಭದ್ರಕೋಟೆಯಾಗಿತ್ತು. ಸತತ ನಾಲ್ಕು ಬಾರಿ ಅವರು ಜಯನಗರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಅವರ ಜನಪ್ರಿಯತೆ, ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಸೌಮ್ಯ ರೆಡ್ಡಿ ಅಖಾಡಕ್ಕಿಳಿದಿದ್ದಾರೆ. ಇತ್ತ ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದಕ್ಕೆ ಸರಿದು ಕಾಂಗ್ರೆಸ್‍ಗೆ ಬೆಂಬಲ ನೀಡಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.
ಬೆಳಗ್ಗೆ ಏಳರಿಂದ ಆರಂಭವಾಗಿದ್ದು ಸಂಜೆ ಆರು ಗಂಟೆ ವರೆಗೆ ಮತದಾನ ಪ್ರಕ್ರಿಯೆ ನಡೆಯುತ್ತದೆ.  ಶಾಂತಿಯುತವಾಗಿ ಮತದಾನ ನಡೆಯುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, 10 ಸಿಆರ್‌ಪಿಎಫ್‌ ತುಕಡಿಯನ್ನು ನಿಯೋಜಿಸಲಾಗಿದೆ. ////Karnataka Politics News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!