ಸಿದ್ದರಾಮಯ್ಯ,ಪ್ರಧಾನಿ ಮೋದಿ ಯಾರೇ ಆಗಲಿ ದುರಹಂಕಾರ ಬಿಡಬೇಕು-ಜನಾರ್ದನ ಪೂಜಾರಿ

23

Mangalore (itskannada) ಮಂಗಳೂರು: ಸಿದ್ದರಾಮಯ್ಯ,ಪ್ರಧಾನಿ ಮೋದಿ ಯಾರೇ ಆಗಲಿ ದುರಹಂಕಾರ ಬಿಡಬೇಕು-ಜನಾರ್ದನ ಪೂಜಾರಿ : ಯಾರೇ ಇರಲಿ ದುರಹಂಕಾರ ಬಿಡದೇ ಇದ್ದರೆ, ಅವರ ರಾಜಕೀಯ ಜೀವನ ಮುಗಿಯುತ್ತದೆ’ ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ.

ಮಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆಯೂ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದೇನೆ. ಅವರು ಜನರ ಪರ ಕೆಲಸ ಮಾಡಿದ್ದಾರೆ ಅದು ಎಲ್ಲರಿಗೂ ಗೊತ್ತು. ಆದರೆ, ಅವರ ದುರಹಂಕಾರ ಹೋಗಬೇಕು. ಯಾರೇ ಆಗಲಿ ದುರಹಂಕಾರ ತೋರಿಸಬಾರದು, ಅವಕಾಶ ಬಂದಾಗ ತಪ್ಪನ್ನು ತಿದ್ದಿಕೊಳ್ಳದೇ ಹೋದರೆ, ಅವರು ರಾಜಕೀಯವಾಗಿ ಮುಂದುವರಿಯುವುದು ಎಂದಿಗೂ ಸಾಧ್ಯವಿಲ್ಲ ಎಂದಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ  ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ತಪ್ಪು ಯಾರೇ ಮಾಡಲಿ ಅದನ್ನು ಹೇಳುವುದು ನನ್ನ ಧರ್ಮ ಎಂದರು.

ಪ್ರಧಾನಿ ಮೋದಿ, ಶಾ, ಯಾರೇ ಬರಲಿ ಕಾಂಗ್ರೆಸ್ ಅನ್ನು ಸೋಲಿಸಲು ಸಾಧ್ಯವಿಲ್ಲ ಎಂದರು . /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Mangalore News Online – Politics -Karnataka Politics

Open

error: Content is protected !!