ಇನ್ನೂ ಮುಗಿಯದ ಖಾತೆಯ ಖ್ಯಾತೆ

0 107

Kannada News (itskannada) Politics : ಇನ್ನೂ ಮುಗಿಯದ ಖಾತೆಯ ಖ್ಯಾತೆ – ಬೆಂಗಳೂರು – ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ  ಬಂದು ಇನ್ನೂ ಒಂದು ತಿಂಗಳು ಕೂಡ ಗತಿಸಿಲ್ಲ ಇದರ ಮಧ್ಯದಲ್ಲಿ  ಶತಾಯಗತಾಯ ವಾಗಿ  ಸಂಪುಟ  ರಚನೆ ಮಾಡಿ   ಸಚಿವ ಸ್ಥಾನ ನೀಡಿ ಖಾತೆ ಹಂಚಿಕೆ ಮಾಡಿದರೂ ಕೂಡ ಖ್ಯಾತೆ  ಮಾತ್ರ ಇನ್ನೂ ನಿಂತಿಲ್ಲ.

ಇನ್ನೂ ಮುಗಿಯದ ಖಾತೆಯ ಖ್ಯಾತೆ

  ಮೈತ್ರಿ ಸರ್ಕಾರದ ಜೆಡಿಎಸ್ ಪಕ್ಷದ   ಹಿರಿಯ ಶಾಸಕರಾದ  ಜಿ. ಟಿ. ದೇವೇಗೌಡ (  ಉನ್ನತ ಶಿಕ್ಷಣ ),  ಮೇಲುಕೋಟೆ ಶಾಸಕ ಸಿ. ಎಸ್. ಪುಟ್ಟರಾಜು (ಸಣ್ಣ  ನೀರಾವರಿ) ಅವರಿಗೆ ಖಾತೆಗಳನ್ನು   ನೀಡಿದರೂ ಕೂಡ ಪಕ್ಷದಲ್ಲಿ  ಅಸಮಾಧಾನ  ವ್ಯಕ್ತಪಡಿಸಿದ್ದಾರೆ.
ತಮಗಿಷ್ಟವಿಲ್ಲದ  ಖಾತೆ ಸಿಕ್ಕಿದೆ ಎಂದು ಜಿ. ಟಿ. ದೇವೇಗೌಡ ಅವರು ತಮಗೆ ನೀಡಿದ ಸರ್ಕಾರಿ ವಾಹನ ವನ್ನು ಕೂಡ ಹಿಂದಿರುಗಿಸಿದ್ದರು. ಮರಳಿ ವಾಹನವನ್ನು ನೀಡಲಾಯಿತು.
ಸಿ. ಎಂ. ಎಚ್ ಡಿ ಕೆ  ಗರಂ:– ಖಾತೆಯ ಖ್ಯಾತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಸರ್ಕಾರದಲ್ಲಿ  ಹಲವಾರು ಇಲಾಖೆಗಳಿಗೆ ಮೊದಲೆ ಹೇಳಬೇಕಿತ್ತು. ಕೆಲಸ ಮಾಡಲು ಯಾವ  ಖಾತೆ ಆದರೆನು ಎಂದು ಹೇಳಿದರು.
ಮಂಡ್ಯ ಜಿಲ್ಲೆ  ಉಸ್ತುವಾರಿ ಗಾಗಿ ಪೈಪೋಟಿ:- ಮದ್ದೂರು ಶಾಸಕ ಮತ್ತು ಸಾರಿಗೆ ಸಚಿವ ಡಿ. ಸಿ. ತಮ್ಮಣ್ಣ ಹಾಗೂ ಮೇಲುಕೋಟೆ ಶಾಸಕ, ಸಣ್ಣ ನೀರಾವರಿ ಸಚಿವ ಸಿ. ಎಸ್ ಪುಟ್ಟರಾಜು  ನಡುವೆ   ಪೈಪೋಟಿ ನಡೆದಿದ್ದು ಇದರ ವಿಚಾರವಾಗಿ ಜೆಡಿಎಸ್ ಹೈಕಮಾಂಡ್ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. /// Karnataka Politics NewsKarnataka News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!