ನಾನು ಸೆಕೆಂಡ್ ಕ್ಲಾಸ್ ಸಿಟಿಜನ್ ಅಲ್ಲ. ಸಿಡಿದೆದ್ದ ಎಂ.ಬಿ ಪಾಟೀಲ್

Kannada News (itskannada) Politics : ನಾನು ಸೆಕೆಂಡ್ ಕ್ಲಾಸ್ ಸಿಟಿಜನ್ ಅಲ್ಲ. ಸಿಡಿದೆದ್ದ ಎಂ.ಬಿ ಪಾಟೀಲ್ : ಬೆಂಗಳೂರು: ಸಚಿವ ಸ್ಥಾನ ತಪ್ಪಿದ್ದರಿಂದ ಅಸಮಾಧಾನ ಗೊಂಡ ವಿಜಯಪುರ ಜಿಲ್ಲೆಯ ಬಬಲೇಶ್ವರ ಶಾಸಕ ಎಂ.ಬಿ ಪಾಟೀಲ್ ಕಾಂಗ್ರೆಸ್ ಪಕ್ಷದ ವಿರುದ್ಧ ನೇರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಸೆಕೆಂಡ್ ಕ್ಲಾಸ್ ಸಿಟಿಜನ್ ಅಲ್ಲ. ಸಿಡಿದೆದ್ದ ಎಂ.ಬಿ ಪಾಟೀಲ್

 ಮಾಜಿ ಸಚಿವರಾದ ಎಂ.ಬಿ.ಪಾಟೀಲ್ ಈ ಬಾರಿ ಉತ್ತರ ಕರ್ನಾಟಕಕ್ಕೆ ಉಪಮುಖ್ಯಮಂತ್ರಿ ಸ್ಥಾನ ಕೊಡುತ್ತಾರೆ ಅಲ್ಲದೇ ನಾನು ಆ ಸ್ಥಾನ ಪಡೆಯಬೇಕೆಂಬ ಆಸೆ ಇತ್ತು. ಆದರೆ ಪಕ್ಷ ನನಗೆ ಯಾವುದೇ ಖಾತೆ ನೀಡಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಮಾಜದ ಅಭಿವೃದ್ಧಿ ಮತ್ತು ಪಕ್ಷಕ್ಕಾಗಿ ಶ್ರಮಿಸಿದ್ದ ನನ್ನನ್ನು ಕಡೆಗಣಿಸಿದ್ದಾರೆ. ನಾನು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ನನ್ನ ನಿಷ್ಠೆ ಯಾರಿಗೂ ಕಾಣಲಿಲ್ಲವೆಂದು ಆಕ್ರೋಶ ಗೊಂಡರು.ನೂತನ ಸಚಿವರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲವೆಂದು ಗೊತ್ತಾದ ಕೂಡಲೇ ಎಂ.ಬಿ.ಪಾಟೀಲ್ ಸಾರ್ವಜನಿಕವಾಗಿ ಪಕ್ಷದ ವಿರುದ್ಧ ಆಕ್ರೋಶವನ್ನು ಹೊರಹಾಕಿದರು.ನಾನು ಲಿಂಗಾಯತ ಪ್ರತ್ಯೇಕ ಧರ್ಮ ಮಾಡುತ್ತಿದ್ದ ನನಗೆ ಹಾಗೂ ಸಿಎಂ ಆಪ್ತರಾಗಿರುವ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲ ಇದು ಸೇಡಿನ ರಾಜಕಾರಣ ಎಂದು ಗುಡುಗಿದ್ದಾರೆ.
ಅಷ್ಟೇ ಅಲ್ಲದೇ ಅವರ ಮನವೊಲಿಸಲು ಸದಾಶಿವನಗರ ಮನೆಗೆ ಸಚಿವ ಡಿಕೆಶಿ, ಕೃಷ್ಣ ಬೈರೆಗೌಡ ಹಾಗೂ, ಗುಂಡೂರಾವ್ ಸೇರಿ ಇನ್ನಿತರರು ಭೇಟಿ ನೀಡಿದರು. ಆದರೆ ಎಂ.ಬಿ ಪಾಟೀಲ್ ಸಮಾಧಾನಗೊಳ್ಳಲಿಲ್ಲ . ಅವರು ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಈಗ ಸಚಿವ ಸ್ಥಾನ ಕೊಟ್ಟರೂ ನನಗೆ ಬೇಡ ಯಾಕೆಂದರೆ ನಾನು ಯಾವತ್ತೂ ಸೆಕೆಂಡ್ ಕ್ಲಾಸ್ ಸಿಟಿಜನ್ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಆದರೆ ಇಲ್ಲಿ ಅವರಿಗೆ ಯಾಕೆ ಹಿನ್ನಡೆ ಆಯ್ತು ಎಂಬ ಪ್ರಶ್ನೆ ತಲೆದೋರಿದೆ.

ನಾನು  ಏಕಾಂಗಿ ಅಲ್ಲ. ನನಗೂ ಶಾಸಕರ ಬೆಂಬಲ ಇದೆ – ಎಂ.ಬಿ ಪಾಟೀಲ್ 

ಮಾಜಿ ಮುಖ್ಯಮಂತ್ರಿ ಸಿದ್ದು ಆಪ್ತರಾಗಿದಕ್ಕೆ ಸಚಿವ ಸ್ಥಾನ ತಪ್ಪಿತ್ತಾ ಅಥವಾ ಪ್ರತ್ಯೇಕ ಧರ್ಮ ಮುಂದಾಳತ್ವ ವಹಿಸಿದಕ್ಕೆ ತಪ್ಪಿತಾ ಎಂಬ ಹಲವು ಪ್ರಶ್ನೆ ಮೂಡುತ್ತಿವೆ.ಆದರೆ ಎಂ.ಬಿ ಅವರು ರಾಜೀನಾಮೆ ನೀಡ್ತಾರಾ?ಹಾಗಾದರೆ ಎಂ.ಬಿ ಪಾಟೀಲರ ಮುಂದಿನ ನಡೆ ಏನೆಂಬುದನ್ನು ಕಾದು ನೋಡಬೇಕಾಗಿದೆ.
ಇಂದು ಉಪಮುಖ್ಯಮಂತ್ರಿ ಡಾ.ಜಿ ಪರಂ ಭೇಟಿ ನೀಡಿ ಮನವೊಲಿಸಲು ಪ್ರಯತ್ನಿಸಿದರು. ಆದರೆ ಇದಕ್ಕೂ ಎಂ.ಬಿ.ಪಾಟೀಲ್ ಬಗ್ಗಲಿಲ್ಲ. ಅಲ್ಲದೆ ಸಿಎಂ ಕುಮಾರಸ್ವಾಮಿ ಅವರು ಭೇಟಿ ನೀಡಿ ಸಮಾಧಾನ ಪಡಿಸಿದರು. ಅವರು ಮಾಧ್ಯಮಕ್ಕೆ ಕಾಂಗ್ರೆಸ್ ನಾಯಕರು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಸಿಎಂ ಬಳಿಕ ನಂತರ ಮಾತನಾಡಿದ ಎಂ.ಬಿ ಪಾಟೀಲ್ ನಾನು  ಏಕಾಂಗಿ ಅಲ್ಲ. ನನಗೂ ಶಾಸಕರ ಬೆಂಬಲ ಇದ್ದಾರೆ.ಎಲ್ಲರ ನಿರ್ಧಾರ ನಂತರ ಮಾತು ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ////
-ಶಶಿಧರ ಬಿಕ್ಕಣ್ಣವರ
 
ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ- Karnataka Politics – Karnataka News – ಕನ್ನಡ ರಾಜಕೀಯ ಸುದ್ದಿ
Webtitle : ನಾನು ಸೆಕೆಂಡ್ ಕ್ಲಾಸ್ ಸಿಟಿಜನ್ ಅಲ್ಲ. ಸಿಡಿದೆದ್ದ ಎಂ.ಬಿ ಪಾಟೀಲ್