ರಾಜರಾಜೇಶ್ವರಿ ನಗರ-9740 ಅಕ್ರಮ ವೋಟರ್ ಐಡಿ ಪತ್ತೆ

illigal 9740 voter ID cards seizes from RR Nagar flat

31

Politics : (itskannada) ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅಪಾರ್ಟಮೆಂಟ್ ಒಂದರಲ್ಲಿ ನಿನ್ನೆ ರಾತ್ರಿ ಸುಮಾರು 9740 ವೋಟರ್ ಐಡಿಗಳು ಸಿಕ್ಕಿದ್ದು ಇಲ್ಲಿ ಚುನಾವಣಾ ಅಕ್ರಮ ನಡೆಯುತ್ತಿರುವುದಾಗಿ ಖಚಿತ ಪಡಿಸಿಕೊಂಡ ಚುನಾವಣಾ ಆಯೋಗ ರಾತ್ರಿಯೇ ತನಿಖೆಗೆ ಆದೇಶಿಸಿದೆ.

ಇನ್ನು ಈ ಅಪಾರ್ಟಮೆಂಟ್ ಬಿಜೆಪಿಯರಿಗರೆ ಸೇರಿದ್ದು ಎಂದು ಆರೋಪ ಮಾಡಿರುವ ಕಾಂಗ್ರೆಸ್‍ನ ರಣದೀಪ್ ಸರ್ಜೆವಾಲ ಈ ಎಲ್ಲ ಹಗರಣಕ್ಕೆ ಬಿಜೆಪಿಯೇ ನೇರ ಹೊಣೆ ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಆದರೆ ಮಧ್ಯರಾತ್ರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರು ಈ ಪ್ರಕರಣವನ್ನು ಕಾಂಗ್ರೆಸ್ ಬಿಜೆಪಿ ಮೇಲೆ ಹಾಕಲು ನೋಡುತ್ತಿದೆ. ಎಸ್ ಎಲ್ ವಿ ಅಪಾಟ್ ಮೆಂಟ್ ಮಾಲಿಕರಿಗೂ ಮತ್ತು ಬಿಜೆಪಿಗೂ ಯಾವುದೇ ಸಂಬಂಧವಿಲ್ಲ, ಅವರು ಆರು ವರ್ಷದಿಂದ ಕಾಂಗ್ರೆಸ್‍ನಲ್ಲಿ ಗುರ್ತಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಆದರೆ ಚುನಾವಣಾ ಅಕ್ರಮ ನಡೆದಿರುವುದಂತು ಸತ್ಯ ಹಾಗಾಗಿ ರಾಜರಾಜೇಶ್ವರಿ ನಗರದ ಚುನಾವಣೆಯ್ನನ ಮುಂದೂಡಿ ತನಿಖೆಯ ನಂತರ ಚುನಾವಣೆ ನಡೆಸಬೇಕೆಂದು ಕೇಂದ್ರ ಸಚಿವ ಅನಂತ್ ಕುಮಾರ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ ನಿನ್ನೆ ರಾತ್ರಿಯಿಂದ ರಾಜಕೀಯ ಹೈಡ್ರಾಮ ನಡೆಯುತ್ತಿದ್ದರೆ, ಜೆಡಿಎಸ್ ನಿಸ್ಪಕ್ಷಪಾತ ತನಿಖೆ ನಡೆಸಬೇಕೆಂದು ಮನವಿ ಮಾಡಿಕೊಂಡಿದೆ. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Karnataka Politics News – Kannada News – Karnataka News – Crime News-Karnataka Crime News


ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ

Stay Updated with itsKannada, to know more Latest Kannada News - Read Kannada News Today Updates Kannada News Online - Get Latest News Headlines Breaking News in Kannada


.
error: Content is protected !!