ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ಇನ್ನು ವಾರಕ್ಕೆ ಐದೇ ದಿನ ಕೆಲಸ ?

0 54

Kannada News (itskannada) Politics : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ಇನ್ನು ವಾರಕ್ಕೆ ಐದೇ ದಿನ ಕೆಲಸ ? ರಾಜ್ಯ ಸರ್ಕಾರಿ ನೌಕರರಿಗೆ ಈ ವರ್ಷ ಸಿಹಿ ಸುದ್ದಿಯೊಂದು ಕಾದಿದೆ. ಐಟಿ, ಬಿಟಿ ಕಂಪನಿಯ ನೌಕರರಿಗೆ ಇರುವ ಹಾಗೆ ರಾಜ್ಯ ಸರ್ಕಾರಿ ನೌಕರರಿಗೂ ವಾರದಲ್ಲಿ ಐದು ದಿನಕ್ಕೆ ಮಾತ್ರವೇ ಕೆಲಸವನ್ನು ಸೀಮಿತಗೊಳಿಸಲು ಚಿಂತಿಸಲಾಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ವಾರದಲ್ಲಿ ಐದು ದಿನ ಕೆಲಸಕ್ಕೆ ಸೀಮಿತಗೊಳಿಸುವ ಗಂಭೀರ ಚಿಂತನೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ಇನ್ನು ವಾರಕ್ಕೆ ಐದೇ ದಿನ ಕೆಲಸ ?

ರ್ಕಾರಿ ನೌಕಕರಲ್ಲಿ ಕಾರ್ಯಕ್ಷಮತೆ, ಕ್ರಿಯಾಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಹೊಸ ಚಿಂತನೆ ರೂಪುಗೊಂಡಿದೆ. ಅಭಿವೃದ್ಧಿ ಶೀಲ ರಾಷ್ಟ್ರಗಳು ಹಾಗೂ ಇಲ್ಲಿನ ಬಹುರಾಷ್ಟ್ರೀಯ ಕಂಪನಿಗಳಲ್ಲಿ ವಾರದಲ್ಲಿ ಐದು ದಿನ ಕೆಲಸ ವ್ಯವಸ್ಥೆ ಇದೆ. ವಾರಾಂತ್ಯದ ಎರಡು ದಿನಗಳು ಕೆಲಸಕ್ಕೆ ಬಿಡುವು ನೀಡಲಾಗುತ್ತಿದೆ.
ಅದೇ ರೀತಿ ವಾರದಲ್ಲಿ ಐದು ದಿನ ಮಾತ್ರವೇ ಕೆಲಸದ ದಿನಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಅನ್ವಯಿಸುವ ಚಿಂತನೆಯನ್ನು ಎಚ್‌. ಡಿ. ಕುಮಾರಸ್ವಾಮಿ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕುಟುಂಬದವರೊಂದಿಗೆ ವಾರಾಂತ್ಯದಲ್ಲಿ ಎರಡು ದಿನ ಕಾಲ ಕಳೆಯಬಹುದಾಗಿದೆ. ಪ್ರವಾಸ, ವಿಹಾರ ಕೈಗೊಂಡು ಕೆಲಸಕ್ಕೆ ಮರಳುವಾಗ ಉತ್ತಮ ಮನಸ್ಸಿನಿಂದ ಬರಬಹುದಾಗಿದೆ. ಆದರೆ ಸೋಮವಾರದಿಂದ ಶುಕ್ರವಾದವರೆಗೆ ಕೆಲಸ ಮಾಡಿ ಶನಿವಾರ ಮತ್ತು ಭಾನುವಾರ ಖುಷಿಯಾಗಿರಲು ಕೆಲವು ಷರತ್ತುಗಳನ್ನು ವಿಧಿಸಲಾಗುತ್ತದೆ.
ಕೆಲವು ಜಯಂತಿ ದಿನಗಳಂದು ರಜೆಯನ್ನು ರದ್ದುಗೊಳಿಸಲಾಗುತ್ತದೆ. ಬದಲಿಗೆ ಆಯಾ ಸಮುದಾಯದವರು ಬೇಕಾದರೆ ನಿರ್ಬಂಧಿತ ರಜೆ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಸಾಮಾನ್ಯ ದಿನಗಳ ಕಚೇರಿ ಕೆಲಸದ ಅವಧಿಯನ್ನು ಕನಿಷ್ಠ 1 ತಾಸಿನಿಂದ ಒಂದೂವರೆ ಗಂಟೆ ಕಾಲ ವಿಸ್ತರಣೆ ಮಾಡಲಾಗುತ್ತದೆ. ಸದ್ಯ ರಾಜ್ಯ ಸರ್ಕಾರಿ ನೌಕರರ ಕೆಲಸದ ಸಮಯ ಬೆಳಗ್ಗೆ 10.30ರಿಂದ ಸಂಜೆ 5.30. ಮಧ್ಯಾಹ್ನ ಒಂದು ತಾಸು ಭೋಜನ ವಿರಾಮ. ಅಂದರೆ ದಿನಕ್ಕೆ ಆರು ತಾಸು ತಾಸು ಕೆಲಸ ಮಾಡಬೇಕಿದೆ ಇದನ್ನು ಒಂದರಿಂದ ಒಂದೂವರೆ ತಾಸು ಹೆಚ್ಚಳ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಈ ನಡುವೆ , ಇದೇ ವಿಷಯ ಎತ್ತಿಕೊಂಡಿರುವ ಸಾರ್ವಜನಿಕರು , ವಾರ ಕೆಲಸ ಮಾಡಿ ನಮ್ಮ ಕೆಲಸಗಳು ವರ್ಷವಾದರೂ ಮಾಡಿ ಕೊಡೋಲ್ಲ , ಇನ್ನೂ ವಾರಕ್ಕೆ 5 ದಿನ ಕೆಲಸ ಅಂದರೆ , ನಾವು ಬೇಡಿಕೆ ಇಟ್ಟ ಸರ್ಕಾರಿ ಕೆಲಸಗಳು ನಮ್ಮ ಮಕ್ಕಳಿಗೆ , ನಮ್ಮ ಮಕ್ಕಳು ಬೇಡಿಕೆ ಇಟ್ಟ ಕೆಲಸಗಳು ಮೊಮ್ಮಕ್ಕಳ ಕಾಲಕ್ಕೆ ಆಗುತ್ತವೆ ಎಂದು ಟೀಕಿಸುದ್ದಿದ್ದಾರೆ. /// Karnataka Politics NewsKarnataka News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!