ಸಿಎಂ ಹೇಳಿಕೆಗೆ ಸಿ.ಟಿ.ರವಿ ಫುಲ್ ಗರಂ

CT Ravi is angry about the CM's statement

0

ಸಿಎಂ ಹೇಳಿಕೆಗೆ ಸಿ.ಟಿ.ರವಿ ಫುಲ್ ಗರಂ

ಚಿಕ್ಕಮಗಳೂರು : ದತ್ತಭಕ್ತರು ಭಿಕ್ಷಾಟನೆ ಮಾಡ್ತಾರೆಂಬ ಸಿಎಂ ಹೇಳಿಕೆಗೆ ಸಿ.ಟಿ.ರವಿ ಕಿಡಿಕಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಮಾತನಾಡಿ, ಯಾರೆ ಆದ್ರು ಮತ್ತೊಬ್ಬರ ಭಾವನೆಗೆ ಅಗೌರವದ ರೀತಿಯಲ್ಲಿ  ಮಾತಾನಾಡಬಾರದು,

ನೋಯಿಸುವ ಮಾತು ಅವರಿಗೆ ಸಂತೋಷ ತಂದ್ರು, ಇನ್ನೊಬ್ಬರಿಗೆ ನೋವು ತರುತ್ತೆ ಎಂದರು.
ವೋಟಿನ ಆಸೆಗೆ ಜೊಲ್ಲು ಸುರಿಸಿ, ದತ್ತಪೀಠ ಆಂದೋಲನಕ್ಕೆ ಅವಹೇಳನ ಮಾಡುವುದ ಜನ ಸಹಿಸಲ್ಲ ಎಂದರು.

ಅಲ್ಲದೇ , ಕುಮಾರಸ್ವಾಮಿ ಅವಹೇಳನ ಮಾಡುವಂತಹ ಕೆಲಸ ಮಾಡಬಾರದು, ನೀವು ಸ್ವಾರ್ಥದಿಂದ  ದೇವಸ್ಥಾನಕ್ಕೆ ಹೋಗಬಹುದು. ನಾವು ಸಮಾಜದ ಹಿತ ಹಾಗೂ ದತ್ತಪೀಠವನ್ನ ಪಡೆಯುವ ಸಂಕಲ್ಪದಿಂದ ಹೋಗ್ತೀವಿ ಎಂದಿದ್ದಾರೆ.
ಅಪಮಾನ ಮಾಡುವುದರಿಂದ ನಿಮಗೆ ಯಾವ ರೀತಿ ಸಂತೃಪ್ತಿ ಸಿಕುತ್ತೆ ನೀವೇ ಯೋಚನೆ ಮಾಡಿ ಎಂದು ಮುಖ್ಯಮಂತ್ರಿಗೆ ತಿರುಗೇಟು ನೀಡಿದರು.////

WebTitle : ಸಿಎಂ ಹೇಳಿಕೆಗೆ ಸಿ.ಟಿ.ರವಿ ಫುಲ್ ಗರಂ-CT Ravi is angry about the CM’s statement

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್  : Kannada Politics News  ।  Karnataka Politics News