ನನ್ನ ರಾಜಕೀಯ ಆದಿಯೂ ಇಲ್ಲೇ ಅಂತ್ಯವೂ ಇಲ್ಲೇ-ಸಿ ಎಸ್ ಪುಟ್ಟರಾಜು

Kannada News(itskannada) Politics – ನನ್ನ ರಾಜಕೀಯ ಆದಿಯೂ ಇಲ್ಲೇ ಅಂತ್ಯವೂ ಇಲ್ಲೇ-ಸಿ ಎಸ್ ಪುಟ್ಟರಾಜು –

ಮಂಡ್ಯ :  ಸಣ್ಣ ನೀರಾವರಿ ಸಚಿವರಾಗಿ ಅಧಿಕಾರ ಸ್ವೀಕರಿಸಿರುವುದು ನನಗೆ ತುಂಬಾ ಸಂತಸ ತಂದಿದೆ. ನನಗೆ ಬೆಂಬಲ ನೀಡಿದ ಮೇಲುಕೋಟೆ ಕ್ಷೇತ್ರದ ಜನತೆ, ಮಂಡ್ಯ ಜನತೆ, ಪಕ್ಷದ ಕಾರ್ಯಕರ್ತರಿಗೆ, ಶ್ರೀ ಎಚ್ ಡಿ ದೇವೇಗೌಡರಿಗೆ ಹಾಗೂ ಶ್ರೀ ಎಚ್ ಡಿ ಕುಮಾರಸ್ವಾಮಿಯವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ನಾನು ಮಂತ್ರಿ ಮಾಡಿ ಎಂದು ಬೇಡಿಕೆ ಇಟ್ಟಿರಲಿಲ್ಲ, ಅಂತಹದರಲ್ಲೂ ನಮ್ಮ ನಾಯಕರು ನನ್ನ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ಕೊಟ್ಟಿದಾರೆ. ರಾಜ್ಯದ ಅಭಿವೃದ್ಧಿಗಾಗಿ ದುಡಿಯುದೊಂದೇ ನನ್ನ ಗುರಿ. ಕೊಟ್ಟಿರೋ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ರಾಜ್ಯವನ್ನು ಅಭಿವೃದ್ಧಿ ಕಡೆಗೆ ಸಾಗಿಸಲು ದುಡಿಯುತ್ತೇನೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನ ರಾಜಕೀಯ ಆದಿಯೂ ಇಲ್ಲೇ..ಅಂತ್ಯವೂ ಇಲ್ಲೇ.
ಮಾಧ್ಯಮಗಳು ವರದಿಯಲ್ಲಿ ವಿವಿಧ ಖಾತೆಗಳನ್ನು ತೋರಿಸಿದ್ದರಿಂದ ಜನರಲ್ಲಿ ಗೊಂದಲ ಉಂಟಾಗಿದೆ. ಮಾಧ್ಯಮ ಮಿತ್ರರಲ್ಲಿ ನಮ್ಮ ವಿನಂತಿಯೇನೆಂದರೆ, ಈ ವಿಚಾರದಲ್ಲಿ ದಯವಿಟ್ಟು ಜಾಗರೂಕತೆ ವಹಿಸಬೇಕು ಎಂದು ವಿನಂತಿಸಿದರು.
ಇನ್ನು ನಿನ್ನೆ ಖಾತೆ ಹಂಚಿಕೆ ವಿಷಯದಲ್ಲಿ ಅಸಮಾಧಾನಗೊಂಡಿದ್ದ ಸಚಿವ ಪುಟ್ಟರಾಜು ರವರನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಯವರು ಮಾತುಕತೆ ಮೂಲಕ ಸಂಧಾನ ನಡೆಸುವ ಮೂಲಕ ಸಚಿವರಲ್ಲಿದ್ದ ಭಿನ್ನಮತವನ್ನು ಶಮನಗೊಳಿಸಿದ್ದರು. /// Karnataka Politics News