ಕಾಂಗ್ರೆಸ್ ನಲ್ಲಿ ಕೆಪಿಎಲ್ 20-20 ಮ್ಯಾಚ್

Kannada News (itskannada) Politics : ಕಾಂಗ್ರೆಸ್ ನಲ್ಲಿ ಕೆಪಿಎಲ್ 20-20 ಮ್ಯಾಚ್ : ಬೆಂಗಳೂರು : ಮೈತ್ರಿ ಸರ್ಕಾರದಲ್ಲಿ  ಸಚಿವ ಸಂಪುಟ ರಚಿಸಿದ್ದೆ ತಡ ರಾಜ್ಯ ರಾಜಕೀಯದಲ್ಲಿ ದೊಂಬರಾಟ ಶುರುವಾಗಿದೆ.  ಅತೃಪ್ತ ಶಾಸಕರ ಅಸಮಾಧಾನ ಒಂದೆಡೆಯಾದರೆ, ಇನ್ನೊಂದೆಡೆ ಸಂಧಾನ ಮಾಡುವ ಪ್ರಯತ್ನದಲ್ಲಿ ಸಚಿವರು, ಮತ್ತೊಂದೆಡೆ ಸಚಿವ ಸ್ಥಾನ ನೀಡಲಿಲ್ಲ ಎಂಬುದಕ್ಕೆ ಆಕ್ರೋಶಗೊಂಡ ಕಾರ್ಯಕರ್ತರು ಪ್ರತಿಭಟನೆ ಬಿಸಿ,ರೋಶ್, ಆಕ್ರೋಶ ಕಂಡು ಸಾರ್ವಜನಿಕ ಪರದಾಟ ಹೀಗೆ ಹತ್ತು ಹಲವು ಆಶ್ಚರ್ಯ ಸಂಗತಿ ಕರ್ನಾಟಕದಲ್ಲಿ ಕಂಡುಬರುತ್ತಿವೆ.

ಕಾಂಗ್ರೆಸ್ ನಲ್ಲಿ ಕೆಪಿಎಲ್ 20-20 ಮ್ಯಾಚ್

 ಹೀಗಿರುವಾಗ ಮೈತ್ರಿ ಸರ್ಕಾರಕ್ಕೆ ಕಂಟಕವಾದ್ರಾ ಎಂ.ಬಿ ಪಾಟೀಲ ಎಂಬ ಮಾತು ಕೇಳಿ ಬರುತ್ತಿವೆ.
 ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ನ 20 ಶಾಸಕರು ಈಗ ಬಂಡಾಯದ ಬಿಸಿ ನೀಡಲು ಮುಂದಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಲ್ಲಿ ಆಪ್ತರಾಗಿ ಕಾಣಿಸಿಕೊಂಡಿದಕ್ಕೆ  ಶಾಸಕರಿಗೆ ಸಚಿವ ಸ್ಥಾನ ಕೊಡಲಿಲ್ಲ  ಆರೋಪ ಕೇಳಿ ಬರುತ್ತಿವೆ. ಅದರಲ್ಲೂ ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಮಾಜಿ ಸಚಿವ  ಎಂ.ಬಿ ಪಾಟೀಲ್ ಈಗ ಸಿಟ್ಟಿಗೆದ್ದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.  ಅದರಂತೆ ಸೈಲೆಂಟ್ ಕಿಂಗ್ ಸತೀಶ್ ಜಾರಕಿಹೊಳಿ ಈಗ ವೈಲೆಂಟ್ ಆಗಿದ್ದಾರೆ. ಅದರಂತೆ ಎಚ್.ಎಂ ರೇವಣ್ಣ. ಹ್ಯಾರೀಸ್, ಎಚ್.ಕೆ ಪಾಟೀಲ,  ಬಿ.ಸಿ ಪಾಟೀಲ, ಮುಂತಾದ ಸೇರಿ ಒಟ್ಟಾರೆ 20 ಶಾಸಕ ಬಂಡಾಯ ಎದ್ದಿದ್ದಾರೆ.
ಆದರೆ ಇಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಅವರ ಮನೆಗೆ ಸಚಿವ ಭೇಟಿ ನೀಡಿದ್ದೆ ನೀಡಿದ್ದು. ಅತೃಪ್ತ ಗೊಂಡ ಶಾಸಕರಲ್ಲಿ ಒಬ್ಬರಾದ ಎಂ.ಬಿ.ಪಿ ಸಮಾಧಾನ ಗೊಳಿಸಲು ಸಿಎಂ ಕುಮಾರಸ್ವಾಮಿ , ಡಿಸಿಎಂ ಪರಮೇಶ್ವರ,  ಡಿಕೆಶಿ, ಸೇರಿದಂತೆ ಇನ್ನಿತರರು ಬಂದು ಸಮಾಧಾನ ಪಡಿಸಿದರು ಎಂ.ಬಿ.ಪಾಟೀಲ್ ವಿಕೆಟ್ ಬೀಳಲಿಲ್ಲ. ಹೀಗಿರುವಾಗ ಅವರು ಮಾಧ್ಯಮ ಕ್ಕೆ ಮಾತನಾಡಿ ನಾನು ಒಬ್ಬಂಟಿಯಲ್ಲ . ನನ್ನ ಜೊತೆ 20 ಶಾಸಕರು ಇದ್ದಾರೆ.  ನನಗೆ ಯಾವ ಸಚಿವ ಸ್ಥಾನ ಬೇಡ. ಉಪಮುಖ್ಯಮಂತ್ರಿ ಸ್ಥಾನ ಮಾತ್ರ ಬೇಕು ಎಂದು ನೇರ ಹೇಳಿದರು. ಅಲ್ಲದೆ ಎಲ್ಲರೂ ಜೊತೆಗೂಡಿ ಮುಂದಿನ  ತೀರ್ಮಾನ ಅಂದರು. ಆದರೆ ಇದರ ಮುನ್ನೆಚ್ಚರಿಕೆ ಕಂಡ ಹೈಕಮಾಂಡ್ ಎಂ.ಬಿ ಪಾಟೀಲ ಅವರನ್ನು ದೆಹಲಿ ಕರೆದಿದ್ದಾರೆ.
ಈಗಾಗಲೇ ದೆಹಲಿಗೆ ತೆರಳಿದ ಶಾಸಕ ಎಂ.ಬಿ.ಪಾಟೀಲ್ ಅವರಿಗೆ ಹೈ ಕಮಾಂಡ್ ಯಾವ ನಿರ್ಧಾರ ಸೂಚಿಸಿತ್ತದೆ ಎಂದು ಕಾದು ನೋಡಬೇಕಾಗಿದೆ. ಆದರೆ ಎಂ.ಬಿ.ಪಾಟೀಲ್ ಸುಮ್ಮನಾದರೂ ಉಳಿದ ಶಾಸಕರು ಸುಮ್ಮನಿರುತ್ತಾರಾ? ಅಲ್ಲದೇ ಕರ್ನಾಟಕದಲ್ಲಿ ಕಾಂಗ್ರೆಸ್ 20 -20 ಮ್ಯಾಚ್ ಮುಂದೆ ಬೇರೆ ಆಗುತ್ತಾ ಕಾದುನೋಡೊಣ… /////Politics News – Karnataka Politics News – Karnataka News

WebTitle : ಕಾಂಗ್ರೆಸ್ ನಲ್ಲಿ ಕೆಪಿಎಲ್ 20-20 ಮ್ಯಾಚ್ ,