ಸಚಿವ ಸಂಪುಟ ರಚನೆ ಅಂತು ಇಂತೂ ಪೈನಲ್ !

0 22

Politics (itskannada) ಬೆಂಗಳೂರು: ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ  ಯಾವುದೇ ಪಕ್ಷಕ್ಕೆ ಪೂರ್ಣ ಬಹುಮತ ಬರದ ಹಿನ್ನೆಲೆಯಲ್ಲಿ ಕೈ ಮತ್ತು ದಳ ಸೇರಿ ಹಗ್ಗ ಜಗ್ಗಾಟದಿಂದ ಸರ್ಕಾರ ರಚಿಸಿದರು. ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನ ನೀಡಿ ಬಿಜೆಪಿಗೆ ಅಧಿಕಾರ ಸಿಗದಂತೆ ಮಾಡಿದರು. ಆದರೆ ಮೈತ್ರಿ ವಿಚಾರವಾಗಿ ಕಳೆದ ವಾರದಿಂದಲೂ ಖಾತೆ ವಿಷಯವಾಗಿ ಗೊಂದಲವುಂಟಾಗಿದ್ದು ಇಂದು ಅದಕ್ಕೆ ತೆರೆ ಎಳೆಯಲಾಯಿತು.

ಸಚಿವ ಸಂಪುಟ ವಿಸ್ತರಣೆ ವಿಷಯವಾಗಿ  ಇಂದು ಮಧ್ಯಾಹ್ನ ರಾಜ್ಯಪಾಲರನ್ನು ರಾಜಭವನದಲ್ಲಿ  ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ  ಹಾಗೂ ಉಪಮುಖ್ಯಮಂತ್ರಿ ಪರಮೇಶ್ವರ ಬುಧವಾರ ಅಥವಾ ಗುರುವಾರ ಸಂಪುಟ ರಚನೆ ಪಕ್ಕಾ ಎಂದು ತಿಳಿಸಿದರು.

ಎರಡು ಪಕ್ಷದ ನಡುವೆ  ಖಾತೆ ಹಂಚಿಕೆ ವಿಚಾರವಾಗಿ ನಾಯಕರ ಮುಂದೆ ಲಾಬಿ ಕೆಲಸ ಚುರುಕಾಗಿದೆ. ಅದರಲ್ಲೂ ಹಣಕಾಸು ಖಾತೆ ವಿಷಯವಾಗಿ ಕೈ ಮತ್ತು ದಳ ಪಟ್ಟು ಹಿಡಿದಿದ್ದವು. ಅದರಂತೆ ಜೆಡಿಎಸ್ ಹಣಕಾಸು ಸೇರಿತು. ಅದರಂತೆ ಅಬಕಾರಿ ,ಕೃಷಿ, ಮಾಹಿತಿ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ, ಇಂಧನ,  ಲೋಕೋಪಯೋಗಿ ಖಾತೆ  ಸೇರಿದಂತೆ ಹಲವು ಖಾತೆ ಜೆಡಿಎಸ್ ಪಾಲದವು. ಅದರಂತೆ ಗೃಹ, ಆಹಾರ ಮತ್ತು ನಾಗರಿಕ ಸರಬರಾಜು,  ಸಾರಿಗೆ, ಅರಣ್ಯ,  ನಗರಾಬಿವೃದ್ಧಿ, ಸಮಾಜ ಕಲ್ಯಾಣ,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,  ಕಂದಾಯ,  ಮುಜರಾಯಿ, ಗಣಿ ಮತ್ತು ಭೂ ವಿಜ್ಞಾನ,  ವೈದ್ಯಕೀಯ ಸೇರಿದಂತೆ ಇನ್ನಿತರವು ಕಾಂಗ್ರೆಸ್ ಹಂಚಿಕೊಂಡರು.
 ಇದರಿಂದ ಹೊಸ ಶಾಸಕರಿಗೆ ತಲೆ ನೋವಾಗಿದೆ. ಯಾಕೆಂದರೆ ಖಾತೆ ಹಂಚಿಕೆ ವಿಷಯವಾಗಿ ಪಕ್ಷದ ಹಿರಿಯ ನಾಯಕರಿಗೆ  ಮಣೆ ಹಾಕುತ್ತಾರೆ ಎಂಬ ಸುದ್ದಿಯಿಂದ ನಿರಾಸೆ ಒಂದೆಡೆ ಹೊಸ ಶಾಸಕರಿಗೆ  ಮೂಡುತ್ತಿದೆ. ಮೈತ್ರಿ ಸರ್ಕಾರ ಹಿನ್ನೆಲೆಯಲ್ಲಿ ಜೆಡಿಎಸ್ ಗೆ ೧೨ ಕಾಂಗ್ರೆಸ್ ಗೆ ೨೨ ಶಾಸಕರಿಗೆ ಸಚಿವ ಪಟ್ಟ ಸಿಕ್ಕಿವೆ. ಆದರೆ ಇದರಲ್ಲಿ ಯಾರು ಯಾರಿಗೆ ಯಾವ ಖಾತೆ ನೀಡಬೇಕು ಎಂಬ ಗೊಂದಲದಲ್ಲಿ ಪಕ್ಷದ ವರಿಷ್ಠರಿಗೆ ತಲೆ ನೋವಾಗಿ ಪರಣಮಿಸಿದೆ. ಮತ್ತು ಮೈತ್ರಿ ಸರ್ಕಾರ ಹಿನ್ನೆಲೆಯಲ್ಲಿ  ಎಲ್ಲರಿಗೂ ಖಾತೆ ಸಿಗುವುದಿಲ್ಲ ಇದರಿಂದ ಬಂಡಾಯ ಶಮನವಾಗದಂತೆ ಪಕ್ಷದ ನಾಯಕರಿಗೆ ಸೂಚಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾದ ಶಾಮನೂರು ಶಿವಶಂಕ್ರಪ್ಪ, ಡಿ.ಕೆ ಶಿವಕುಮಾರ, ಎಂ.ಬಿ ಪಾಟೀಲ,  ದಿನೇಶ್ ಗುಂಡೂರಾವ್ ಇನ್ನಿತರರು ಸೇರಿದಂತೆ ಖಾತೆ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಅಲ್ಲದೆ ಜೆಡಿಎಸ್ ಪಕ್ಷ ಕೂಡಾ ಹಿರಿಯರಿಗೆ ಮಣೆ ಹಾಕಬಹುದು ಎನ್ನಲಾಗಿದೆ. ಶಾಸಕ ಜಿ.ಟಿ ದೇವೆಗೌಡ, ಎಚ್.ಡಿ ರೇವಣ್ಣ ಹಲವರಿಗೆ ಸಚಿವರಾಗುವ ಭಾಗ್ಯ ಇದೆ ಎನ್ನಲಾಗಿದ್ದು ಯಾರಿಗೆ ಯಾವ ಖಾತೆ ಸಿಗಬಹುದು ಎಂದು ಬುಧವಾರ ಅಥವಾ ಗುರುವಾರ ಸ್ಪಷ್ಟ ರಚನೆ ಸಿಗಲಿದೆ /// Karnataka Politics News – Kannada News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!