ಬಿಎಸ್ ಯಡಿಯೂರಪ್ಪ ರಾಜೀನಾಮೆ-ಅಟಲ್ ಬಿಹಾರಿ ವಾಜಪೇಯಿಯನ್ನು ನೆನಪಿಸಿದ ಘಟನೆ

0 17

Politics (itskannadaಬೆಂಗಳೂರು : ಬಿಎಸ್ ಯಡಿಯೂರಪ್ಪ ರಾಜೀನಾಮೆ-ಅಟಲ್ ಬಿಹಾರಿ ವಾಜಪೇಯಿಯನ್ನು ನೆನಪಿಸಿದ ಘಟನೆ : ರಾಜಕೀಯ ಐತಿಹಾಸಿಕ ತಿರುವಿನಲ್ಲಿ, ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯ ಹುದ್ದೆಗೆ ತಮ್ಮ ರಾಜೀನಾಮೆ ನೀಡಿದ್ದಾರೆ.

ಬಿಎಸ್ ಯಡಿಯೂರಪ್ಪ ರಾಜೀನಾಮೆ-ಅಟಲ್ ಬಿಹಾರಿ ವಾಜಪೇಯಿಯನ್ನು ನೆನಪಿಸಿದ ಘಟನೆ

ಮೇ 15 ರಂದು ವಿಧಾನಸಭೆಯಲ್ಲಿ 104 ಮತಗಳೊಂದಿಗೆ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ಬಹುಮತವನ್ನು ಸಾಬೀತುಪಡಿಸುವುತು ಅಗತ್ಯವಾಯಿತು. ಗವರ್ನರ್ ಬಿಜೆಪಿಗೆ 15 ದಿನಗಳ ಕಾಲಾವಕಾಶ ನೀಡಿ ತಮ್ಮ ಬಹುಮತವನ್ನು ಸಾಬೀತುಪಡಿಸಬೇಕೆಂದು ಹೇಳಿತು, ಆದರೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಶನಿವಾರ, ಮೇ 19 ರಂದು 4 ಗಂಟೆಗೆ ಬಿಜೆಪಿ ತನ್ನ ಬಹುಮತವನ್ನು ಸಾಬೀತುಪಡಿಸಲು ಮುಂದಾಗ ಬೇಕಾಯಿತು.

ವಿಧಾನಸೌಧಕ್ಕೆ ಬಿಜೆಪಿಯು ಬಂದಿದ್ದರೂ, ಬಹುಮತ ಪರೀಕ್ಷೆಗೆ ಹೋಗುವುದನ್ನು ನಿರಾಕರಿಸಿತು.

ಕರ್ನಾಟಕದ ರಾಜಕಾರಣದಲ್ಲಿ ಸಂಭವಿಸಿದ ಈ ಘಟನೆಯು 1999 ರಲ್ಲಿ ಸಂಸತ್ತಿನಲ್ಲಿ ಬಹುಮತ ಸಾಬೀತು ಪಡೆಸಬೇಕಾಗಿದ್ದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯನ್ನು ನೆನಪಿಸಿತು. ಈ ಘಟನೆಯು ಇತಿಹಾಸದ ಪುಟಗಳನ್ನು ಸೇರಿತ್ತು.

ವಾಜಪೇಯಿ ಅವರು ರಾಜೀನಾಮೆ ಸಲ್ಲಿಸುವ ಮೊದಲು ತೀವ್ರ ಭಾಷಣ ಮಾಡಿದ್ದರು. ಬಹುಮತವನ್ನು ಸಾಬೀತುಪಡಿಸಲು ಕೇವಲ ಒಂದು ಸಂಸದರ ಬೆಂಬಲ ವಾಜಪೇಯಿಗೆ ಬೇಕಾಗಿತ್ತು, ಆದರೆ ಆ ರೀತಿಯಲ್ಲಿ ಹೋಗಲು ಅವರು ನಿರಾಕರಿಸಿದ್ದರು.

ಭಾವನಾತ್ಮಕವಾಗಿ ಭಾಷಣ ಮಾಡಿದ, ಬಿಎಸ್ ಯಡಿಯೂರಪ್ಪ ಅವರು ಜನಸಾಮಾನ್ಯರ ಹೋರಾಟವನ್ನು ಮುಂದುವರೆಸಲಿದ್ದಾರೆ ಮತ್ತು ಮುಂಬರುವ ಸಂಸತ್ತಿನ ಚುನಾವಣೆಗಳಲ್ಲಿ 28 ​​ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ .

ದೀರ್ಘ ಭಾಷಣದ ನಂತರ ಬಿಎಸ್ ವೈ ಮತ್ತು ಬಿಜೆಪಿ ಶಾಸಕರು ಮತ್ತು ಮುಖಂಡರು ಗವರ್ನರ್ ಅವರನ್ನು ಭೇಟಿ ಮಾಡಲು ವಿಧಾನ ಸೌಧದಿಂದ ಹೊರ ನಡೆದರು. ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ತಪ್ಪದೇ ಕ್ಲಿಕ್ಕಿಸಿ – Karnataka Politics News

ಉರುಳಿದ ಸರ್ಕಾರ-ಕೇವಲ ಭಾಷಣ ಮಾಡಿ ಹೊರನಡೆದ ಯಡಿಯೂರಪ್ಪ

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!