Karnataka Assembly Election 2018-ಹೆಬ್ಬಾಳದಲ್ಲಿ ಬಿಜೆಪಿ ಕಾರ್ಯಕರ್ತರ ಬಂಧನ

36

Politics (itskannada) ಬೆಂಗಳೂರು: Karnataka Assembly Election 2018-ಹೆಬ್ಬಾಳದಲ್ಲಿ ಬಿಜೆಪಿ ಕಾರ್ಯಕರ್ತರ ಬಂಧನ : ರಾಜ್ಯ ವಿಧಾನಸಭಾ ಚುನಾವಣೆ ಮತದಾನ ಆರಂಭವಾಗಿದೆ. ಕೆಲವೊಂದು ಕಡೆ ಇವಿಎಂನಲ್ಲಿ ದೋಷ ಕಂಡುಬಂದಿದೆ. ಹೊಸಕೋಟೆ ಮತಗಟ್ಟೆ 151ರಲ್ಲಿ ಇವಿಎಂ ಯಂತ್ರದ ದೋಷದಿಂದಾಗಿ ಪರದಾಟ ಶುರುವಾಗಿದೆ, ಇನ್ನೂ ಶುರುವಾಗದ ಮತದಾನ . ಇನ್ನು ಕೆಲವೆಡೆ ಚುನಾವಣಾ ಸಿಬ್ಬಂದಿಗಳು ತಡವಾಗಿ ಬಂದಿರುವ ಕಾರಣ ಮತದಾನ ನಿಧಾನಗತಿಯಲ್ಲಿ ಸಾಗಿದೆ. ಈ ನಡುವೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಗಲಾಟೆ ಆರಂಭವಾಯಿತು.

Karnataka Assembly Election 2018-ಹೆಬ್ಬಾಳದಲ್ಲಿ ಬಿಜೆಪಿ ಕಾರ್ಯಕರ್ತರ ಬಂಧನ

ಹೆಬ್ಬಾಳದಲ್ಲಿ ಬಿಜೆಪಿ ಕಾರ್ಯಕರ್ತರು ಚುನಾವಣಾಧಿಕಾರಿಗೆ ಅವಾಜ್‌ ಹಾಕಿ ಬಂಧನಕ್ಕೊಳಗಾದ ಘಟನೆ ನಡೆದಿದೆ. ಬಿಜೆಪಿ ಶಾಸಕ ಬಂದ ಮೇಲೆ ಮತದಾನ ಮಾಡಬೇಕು ಎಂದು ಮತದಾನವನ್ನು ಬಿಜೆಪಿ ಕಾರ್ಯಕರ್ತರು ತಡೆಹಿಡದಿದ್ದರು ಎನ್ನಲಾಗಿದೆ.

ಬಿಜೆಪಿ ಕಾರ್ಯಕರ್ತರ ಈ ನಡೆ ಚುನಾವಣಾಧಿಕಾರಿ ಹಾಗೂ ಕಾರ್ಯರ್ತರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ನಂತರ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.. ಈ ಕಾರಣದಿಂದಾಗಿ ಮತದಾನ ತಡವಾಗಿ ಆರಂಭವಾಗಿದೆ. / / // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Karnataka Politics News

Open

error: Content is protected !!