ಬಂಡಾಯವೆದ್ದಿರುವ ಶಾಸಕರಲ್ಲಿ MTB ಸೇರಿದಂತೆ 20 ಜನ, ಯಾರ್ ಗೊತ್ತಾ ?

Kannada News (itskannada) Politics ಬೆಂಗಳೂರು: ಬಂಡಾಯವೆದ್ದಿರುವ ಶಾಸಕರಲ್ಲಿ MTB ಸೇರಿದಂತೆ 20 ಜನ, ಯಾರ್ ಗೊತ್ತಾ ? – ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರದಲ್ಲಿ ಬಂಡಾಯ ತಣ್ಣಗಾಗಿಲ್ಲ. ಮೊದಲ ಸುತ್ತಿನಲ್ಲಿ ಸಚಿವ ಸ್ಥಾನ ಸಿಗದೆ ಇರೋದಕ್ಕೆ ಬೆಂಕಿಯಂತಾಗಿರೋ ಎಂ.ಬಿ.ಪಾಟೀಲ್ ಇಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಬಂಡಾಯವೆದ್ದಿರುವ ಶಾಸಕರಲ್ಲಿ MTB ಸೇರಿದಂತೆ 20 ಜನ, ಯಾರ್ ಗೊತ್ತಾ ?

ಹೈಕಮಾಂಡ್ ಸೂಚನೆ ಮೇರೆಗೆ ಉಪಮುಖ್ಯಮಂತ್ರಿ ಪರಮೇಶ್ವರ್, ಸಚಿವರಾದ ಡಿಕೆಶಿ, ಜಾರ್ಜ್, ದೇಶಪಾಂಡೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅತ್ಯಾಪ್ತ ಮಹದೇವಪ್ಪ ಅವರು ಮನವೊಲಿಕೆ ಯತ್ನ ಮಾಡಿದ್ರು. ಸದಾಶಿವನಗರದ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ರು. ಚರ್ಚೆ ವೇಳೇ ನಾನು ಒಬ್ಬಂಟಿ ಅಲ್ಲ, ನನ್ನ ಜೊತೆಗೆ 20 ಮಂದಿ ಶಾಸಕರಿದ್ದಾರೆ. ನಾವು ಸಭೆ ನಡೆಸೋಕೆ ಯಾರ ಅಪ್ಪಣೆಯೂ ಬೇಕಿಲ್ಲ ಅಂತ ಪಾಟೀಲರು ಗುಡುಗಿದ್ದಾರೆ ಅಂತ ತಿಳಿದು ಬಂತು.
ಎಂ.ಬಿ. ಪಾಟೀಲರೇ ಹೇಳುವಂತೆ ಅವರ ಬಳಿ 15ರಿಂದ 20 ಶಾಸಕರ ಬೆಂಬಲ ಇದೆ ಅಂದಿದ್ದಾರೆ. ಹಾಗಾದ್ರೆ, ಅಷ್ಟು ದೊಡ್ಡ ಸಂಖ್ಯೆಯಲ್ಲಿ ಅವರ ಜೊತೆಗೆ ಇರೋ ಶಾಸಕರು ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದ್ದು, ಆ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಎಂಬಿ ಪಾಟಿಲ್ ಬಣ್ಣದಲ್ಲಿರೋ ಶಾಸಕರು:
* ಎಚ್.ಕೆ.ಪಾಟೀಲ್, ಗದಗ
* ರಾಮಲಿಂಗಾರೆಡ್ಡಿ, ಬಿಟಿಎಂ ಲೇಔಟ್
* ಸತೀಶ್ ಜಾರಕಿಹೊಳಿ, ಯಮಕನಮರಡಿ
* ಹ್ಯಾರಿಸ್, ಶಾಂತಿನಗರ
* ರೋಷನ್ ಬೇಗ್, ಶಿವಾಜಿನಗರ
* ಬಿ.ಸಿ.ಪಾಟೀಲ್, ಹಿರೇಕೆರೂರು
* ಎಂಟಿಬಿ ನಾಗರಾಜ್, ಹೊಸಕೋಟೆ
* ಡಾ. ಸುಧಾಕರ್, ಚಿಕ್ಕಬಳ್ಳಾಪುರ
* ತನ್ವೀರ್ ಸೇಠ್, ನರಸಿಂಹರಾಜ
* ಎಚ್.ಎಂ.ರೇವಣ್ಣ, ಎಂಎಲ್‍ಸಿ
* ಸಿ.ಎಸ್.ಶಿವಳ್ಳಿ, ಕುಂದಗೋಳ
* ಸಂಗಮೇಶ್, ಭದ್ರಾವತಿ
* ಈಶ್ವರ್ ಖಂಡ್ರೆ, ಭಾಲ್ಕಿ
* ಲಕ್ಷ್ಮಿ ಹೆಬ್ಬಾಳ್ಕರ್, ಬೆಳಗಾವಿ ಗ್ರಾ.
* ರಹೀಂ ಖಾನ್, ಬೀದರ್
* ನಾರಾಯಣ ರಾವ್, ಬಸವ ಕಲ್ಯಾಣ
* ರಘುಮೂರ್ತಿ, ಚಳ್ಳಕೆರೆ
* ಬಿ.ನಾಗೇಂದ್ರ, ಬಳ್ಳಾರಿ ಗ್ರಾ.
* ತುಕಾರಾಂ, ಸಂಡೂರು
/// ಈ ವಿಭಾಗದ ಎಲ್ಲಾ ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Politics News – Karnataka News