ಬಂಡಾಯವೆದ್ದ ಬಿ.ಸಿ ಪಾಟೀಲ್,ರಾಜೀನಾಮೆ ನೀಡ್ತಾರ ?

Kannada News (itskannada) Politics ಹಾವೇರಿ: ಬಂಡಾಯವೆದ್ದ ಬಿ.ಸಿ ಪಾಟೀಲ್,ರಾಜೀನಾಮೆ ನೀಡ್ತಾರ ? ಹಾವೇರಿ ಜಿಲ್ಲೆಯ ಹಿರೇಕೆರೂರ ಶಾಸಕ ಬಿ.ಸಿ.ಪಾಟೀಲ್  ಜಯ ಗಳಿಸಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಉತ್ತರ ಕರ್ನಾಟಕ ಲಿಂಗಾಯತ ಶಾಸಕರಲ್ಲಿ  ಕೇವಲ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿದ್ದಾರೆ. ಇದರಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬಂಡಾಯವೆದ್ದ ಬಿ.ಸಿ ಪಾಟೀಲ್,ರಾಜೀನಾಮೆ ನೀಡ್ತಾರ ?

ಸಚಿವ ಸ್ಥಾನ ಸಿಗಬಹುದು ಎಂಬ ಖುಷಿಯಲ್ಲಿದ್ದ ಪಾಟೀಲರಿಗೆ ನಿರಾಶೆಯಾಗಿದೆ. ಹೀಗಾಗಿ ಹೈ ಕಮಾಂಡ್ ಮೇಲೆ ಅಸಮಾಧಾನ ಮಾಡಿ ಕೊಂಡಿದ್ದಾರೆ. ಅಲ್ಲದೆ ಇವರು ಸಿದ್ದರಾಮಯ್ಯ ಆಪ್ತರಾಗಿ ಕಾಣಿಸಿಕೊಂಡಿದ್ದರು. ಹೀಗಿರುವಾಗ ಪಕ್ಷದಲ್ಲಿರುವ ನಿಯತ್ತಿಗೆ ಬೆಲೆ ಇಲ್ವಾ? ಎಂದು ಅಸಮಾಧಾನ ಗೊಂಡಿದ್ದಾರೆ. ಹಣವಿಲ್ಲದವರಿಗೆ ಪಕ್ಷ ಸಚಿವ ಸ್ಥಾನ ನೀಡುವದಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ಹೀಗಿರುವಾಗ ಆಕ್ರೋಶ ಗೊಂಡಿರುವ ಹಿರೇಕೆರೂರ ಶಾಸಕ ಬಿ.ಸಿ ಪಾಟೀಲ್ ಬಂಡಾಯ ಏಳುವ ಸಾಲಿನಲ್ಲಿದ್ದಾರೆ ಎಂಬ ಊಹಾಪೋಹ ಹರಿದಾಡುತ್ತಿವೆ. ಈಗಾಗಲೇ ಪಾಟೀಲರ ಬೆಂಬಲಿಗರು ಹಾವೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.  ಪಕ್ಷದ ಕಾರ್ಯಕರ್ತರ ಜೊತೆಗೂಡಿ ರಾಜೀನಾಮೆ ನೀಡುವ ನಿರ್ಧಾರ ತಿಳಿಸುತ್ತಾರಂತೆ. ಹಾಗಾದರೆ ಬಿ.ಸಿ ಪಾಟೀಲರ ಮುಂದಿನ ನಡೆ ಏನು ಎಂಬುದನ್ನು   ಕಾದುನೋಡಬೇಕು. /// Karnataka Politics News –  Haveri News Online