ಚುನಾವಣೆ ಬಳಿಕ ಸಿದ್ದರಾಮಯ್ಯ,ಮನೆಗೆ ಹೋಗುವುದು ಅನಿವಾರ್ಯ-ಅಮಿತ್ ಶಾ

Politics (itskannada) ಬೆಂಗಳೂರು:ಚುನಾವಣೆ ಬಳಿಕ ಸಿದ್ದರಾಮಯ್ಯ,ಮನೆಗೆ ಹೋಗುವುದು ಅನಿವಾರ್ಯ-ಅಮಿತ್ ಶಾ: ಈ ಚುನಾವಣೆಯ ನಂತರ ಕಾಂಗ್ರೆಸ್ ನ ನಾಯಕರೆಲ್ಲ ಮನೆಗೆ ಹೋಗಬೇಕು, ಜನರೇ ಇವರನ್ನೆಲ್ಲಾ ಮನೆಕಡೆ ಕಳುಹಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದರೆ. ಕೆಜೆ ಜಾರ್ಜ್, ರೋಷನ್ ಬೇಗ್, ಹ್ಯಾರಿಸ್ ರನ್ನು ಮನೆಗೆ ಕಳುಹಿಸಿ ಮುಕ್ತ ಬೆಂಗಳೂರು ನಿರ್ಮಾಣ ಆಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ ಅವರು ಕಾಂಗ್ರೆಸ್ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ನ ಈ ಎಲ್ಲಾ ಶಾಸಕರಿಗೆ ಜನರು ಮನೆ ದಾರಿ ತೋರಿಸಲಿದ್ದಾರೆ ಎಂದು ಟೀಕಿಸಿದ್ದಾರೆ.

ಅದಷ್ಟೇ ಅಲ್ಲದೆ ಚುನಾವಣೆ ಬಳಿಕ ಸಿದ್ದರಾಮಯ್ಯ ಕೂಡಾ ಮನೆಗೆ ಹೋಗುವುದು ಅನಿವಾರ್ಯ ಎಂದಿದ್ದಾರೆ. ಬೆಂಗಳೂರನ್ನು ಹಾಳು ಮಾಡಿರುವ ಬೇಗ್, ಜಾರ್ಜ್, ಹ್ಯಾರಿಸ್ ರನ್ನು ಜನರೇ ಮನೆಗೆ ಕಳುಹಿಸುತ್ತಾರೆ. ಬಿಜೆಪಿ ನೇತೃತ್ವದಲ್ಲಿ ಸ್ವಚ್ಛ ಬೆಂಗಳೂರು ಸ್ಥಾಪನೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಚುನಾವಣೆ ಬಿಜೆಪಿ ಪರವಾಗಿದ್ದು ಗೆಲುವು ನಿಶ್ಚಿತ ಎಂದಿದ್ದಾರೆ… /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Karnataka Politics News