ಯಡಿಯೂರಪ್ಪಗಿಂತ-ಸಿದ್ದರಾಮಯ್ಯ ಉತ್ತಮ ಎಂದ ನಟ ಪ್ರಕಾಶ್ ರೈ

0 24

Politics : (itskannada) ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ಅವರು ಮೂರು ತಿಂಗಳು ಆಡಳಿತ ಮಾಡುವುದಿಲ್ಲ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಕಳೆದ ಎರಡು ವರ್ಷಗಳಲ್ಲಿ ಬಿ.ಎಸ್. ಯಡಿಯೂರಪ್ಪ ಅವರಿಗಿಂತಲೂ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಯಡಿಯೂರಪ್ಪಗಿಂತ-ಸಿದ್ದರಾಮಯ್ಯ ಉತ್ತಮ ಎಂದ ನಟ ಪ್ರಕಾಶ್ ರೈ

ಸದ್ಯ ಬಿಜೆಪಿ ವಿರುದ್ಧ ಭಾಷಣಗಳ ಮೂಲಕ ಕೇಸರಿ ಪಡೆಯ ಕೆಂಗಣ್ಣಿಗೆ ಗುರಿಯಾಗಿರುವ ಪ್ರಕಾಶ್ ರೈ ಅವರು ಮತ್ತೆ ಉಡುಪಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ್ದು, ಸದ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್ ಅವರು ಕರ್ನಾಟಕಕ್ಕೆ ಬಂದಾಗ ಬಿ.ಎಸ್.ಯಡಿಯೂರಪ್ಪ ಅವರು ಮೂಕವಾಗಿ ಉಳಿದಿದ್ದರು. ಬಿ.ಎಸ್. ಯಡಿಯೂರಪ್ಪಗೆ ಸ್ವಾಭಿಮಾನ ಇಲ್ಲ. ಅವರು ಮುಖ್ಯಮಂತ್ರಿಯಾದರೆ ಮೂರು ತಿಂಗಳ ಕಾಲ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯ ಅಪಾಯಕಾರಿ ರೋಗಕ್ಕೆ ಬಲಿಯಾದರೆ ಮತ್ತು ಬಿಜೆಪಿ ಆಳ್ವಿಕೆ ನಡೆಸಿದರೆ ಭಾರತ ಇನ್ನೊಂದು ಪಾಕಿಸ್ತಾನವೆನಿಸುತ್ತದೆ. ಉಡುಪಿಯ ಜನರು ಬಿಜೆಪಿಯ ತಂತ್ರಗಾರಿಕೆಯ ಬಗ್ಗೆ ಎಚ್ಚರವಿರಬೇಕು. ಬಿಜೆಪಿ  ಚುನಾವಣೆಗಳ ಮುಂಚೆ ಘರ್ಷಣೆಯನ್ನು ಪ್ರಚೋದಿಸಲು ಪ್ರಯತ್ನಿಸುತ್ತದೆ ಎಂದು ಹೇಳಿದರು.

ನಾವು ಯಾವುದೇ ಧರ್ಮದ ವಿರುದ್ಧ ಇಲ್ಲ. ಬಿಜೆಪಿ ನಾಯಕರು ಹಿಂದೂ ಧರ್ಮದ ಬಗ್ಗೆ ಮಾತುಕತೆ ನಡೆಸಲು ತಜ್ಞರಲ್ಲ. ಜನರನ್ನು ಕೊಲ್ಲುವ ಕುರಿತು ಯಾವುದೇ ಧರ್ಮವು ಹೇಳುವುದಿಲ್ಲ. ನಾನು ಎಡ ಅಥವಾ ಬಲವನ್ನು ಒಪ್ಪುವುದಿಲ್ಲ. ನಾನು ಹಿಂದೂ ಧರ್ಮಕ್ಕೆ ವಿರುದ್ಧವಾಗಿದ್ದೇನೆ ಎಂದು ಗ್ರಹಿಸುವುದು  ತಪ್ಪು. ಧರ್ಮವು ಬೆಳಕು ಚೆಲ್ಲುವ ದೀಪದಂತೆ. ಧರ್ಮವು ಸರ್ಕಾರಗಳನ್ನು ನಿಂತ್ರಿಸಬಾರದು.  ಇದು ಪ್ರಜಾಪ್ರಭುತ್ವದ ಕಲ್ಪನೆಗೆ ವಿರುದ್ಧವಾಗುತ್ತದೆ ಎಂದು ಹೇಳಿದ್ದಾರೆ. || ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ  . .Karnataka Politics NewsKarnataka News

ಮಂಡ್ಯ-ಅಂಬರೀಶ್ ಸ್ಪರ್ಧಿಸಲು ನಿರಾಕರಿಸಿದ್ದು-ಟಿಕೆಟ್ ರವಿಕುಮಾರ್ ಗೌಡ ಗಾಣಿಗರವರಿಗೆ

STAR KANNADA : ನಿರೀಕ್ಷಿಸಿ – ನೂತನ ಅಂತರ್ಜಾಲ ಸುದ್ದಿವಾಹಿನಿ STAR KANNADA – KANNADA NEWS PORTAL Star Kannada ದ ಸಾಮಾಜಿಕ ಜಾಲತಾಣಗಳು – FaceBook – Twitter – Google + – Youtube – Pinterest – InstagramStar Kannada

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada