ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ | ಕನ್ನಡ ನ್ಯೂಸ್

Kannada News (itskannada) politics : ಬೆಂಗಳೂರು : ಇಂದು ರಾಜಭವನದಲ್ಲಿ ನೂತನ  25 ಶಾಸಕರು ಸರ್ಕಾರದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಿ. ಆರ್ ವಾಲಾರವರು ಪ್ರತಿಜ್ನಾವಿಧಿ ಬೋಧಿಸಿದರು.

ಮೊದಲು ವೇದಿಕೆಗೆ ಆಗಮಿಸಿದ ಜೆಡಿಎಸ್ ಶಾಸಕರಾದ ಎಚ್. ಡಿ. ರೇವಣ್ಣ(ಹೊಳೆನರಸೀಪುರ) ರವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಆರ್. ವಿ. ದೇಶಪಾಂಡೆ(ಹಳಿಯಾಳ), ಜಿ. ಟಿ. ದೇವೇಗೌಡ(ಚಾಮುಂಡೇಶ್ವರಿ), ಡಿ. ಕೆ. ಶಿವಕುಮಾರ್(ಕನಕಪುರ), ಡಿ. ಸಿ. ತಮ್ಮಣ್ಣ(ಮದ್ದೂರು), ಕೃಷ್ಣಭೈರೇಗೌಡ(ಬ್ಯಾಟರಾಯನಪುರ), ಎಂ. ಸಿ. ಮನಗುಳಿ(ಸಿಂಧಗಿ), ಕೆ. ಜೆ.  ಜಾರ್ಜ್(ಸರ್ವಜ್ಞ ನಗರ) ಎನ್.ಎಚ್. ಶಿವಶಂಕರ್ ರೆಡ್ಡಿ(ಗೌರಿಬಿದನೂರು),  ಎಸ್. ಆರ್. ಶ್ರೀನಿವಾಸ್(ಗುಬ್ಬಿ),  ಬಂಡೆಪ್ಪ ಕಾಶೆಂಪುರ್(ಬೀದರ್ ದಕ್ಶಿಣ),

ರಮೇಶ್ ಜಾರಕಿಹೊಳಿ(ಗೋಕಾಕ್), ವೆಂಕಟರಾವ್ ನಾಡಗೌಡ(ಸಿಂಧನೂರು), ಪ್ರಿಯಾಂಕ್ ಖರ್ಗೆ(ಚಿತ್ತಾಪುರ), ಸಿ. ಎಸ್. ಪುಟ್ಟರಾಜು(ಮೇಲುಕೋಟೆ), ಯು. ಟಿ. ಖಾದರ್(ಮಂಗಳೂರು ನಗರ),  ಸಾ. ರಾ. ಮಹೇಶ್(ಕೆ. ಆರ್. ನಗರ),  ಜಮೀರ್ ಅಹ್ಮದ್ ಖಾನ್(ಚಾಮರಾಜಪೇಟೆ),  ಎನ್. ಮಹೇಶ್(ಕೊಳ್ಳೇಗಾಲ),  ಶಿವಾನಂದ ಪಾಟೀಲ್(ಬಸವನ ಬಾಗೇವಾಡಿ),  ವೆಂಕಟರಮಣಪ್ಪ(ಪಾವಗಡ),  ರಾಜಶೇಖರ್ ಪಾಟೀಲ್(ಹುಮ್ನಬಾದ್),  ಸಿ. ಪುಟ್ಟರಂಗಶೆಟ್ಟಿ(ಚಾಮರಾಜನಗರ),  ಆರ್. ಶಂಕರ್(ರಾಣೇಬೆನ್ನೂರು) ಮತ್ತು  ಡಾ. ಜಯಮಾಲಾ(ಎಂ ಎಲ್ ಸಿ) ರವರು ಕರ್ನಾಟಕದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. /// Karnataka Politics News – Karnataka News