ಕುರುಬ ಸಮುದಾಯಕ್ಕಿಲ್ಲ ಮಂತ್ರಿ ಗಿರಿ, ಸಿದ್ದರಾಮಯ್ಯ ಸೇರಿ ಎಲ್ಲಾ ರಾಜೀನಾಮೆ !

0 426

Kannada News (itskannada) Politics : ಕುರುಬ ಸಮುದಾಯಕ್ಕಿಲ್ಲ ಮಂತ್ರಿ ಗಿರಿ, ಸಿದ್ದರಾಮಯ್ಯ ಸೇರಿ ಎಲ್ಲಾ ರಾಜಿನಾಮೆ : ಕುರುಬ ಸಮುದಾಯದ ಶಾಸಕರಿಗೆ  ಮಂತ್ರಿ ಗಿರಿ ಕೊಟ್ಟಿಲ್ಲಾ ಎಂದು ರಾಜ್ಯ ಹಾಲು ಮತ ಮಹಾ ಸಭಾ ಅಕ್ರೋಶ ವ್ಯಕ್ತಪಡಿಸಿದೆ. ಈಗಾಗಲೇ ಪ್ರತಿಭಟನೆಗಳು ಪ್ರಾರಂಭವಾಗಿದ್ದು , ಕುರುಬ ಸಮುದಾಯವು ಕಾಂಗ್ರೆಸ್ ನ ಎಲ್ಲಾ ತಮ್ಮ ಸಮುದಾಯದವರು ಮತ್ತು ಸಿದ್ದರಾಮಯ್ಯ ಸೇರಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ.

ಕುರುಬ ಸಮುದಾಯಕ್ಕಿಲ್ಲ ಮಂತ್ರಿ ಗಿರಿ, ಸಿದ್ದರಾಮಯ್ಯ ಸೇರಿ ಎಲ್ಲಾ ರಾಜೀನಾಮೆ

ಸಮುದಾಯವು ಪಕ್ಷವನ್ನು ಬೆಂಬಲಿಸಿದರೂ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡದೆ ಇರುವುದು ನಮಗೆ ಬೇಸರ ತಂದಿದೆ , ಈ ಕೂಡಲೇ ಎಲ್ಲರೂ ರಾಜೀನಾಮೆ ನೀಡಬೇಕೆಂದು, ರಾಜ್ಯ ಹಾಲು ಮತ ಮಹಾ ಸಭಾ ರಾಜ್ಯಾಧ್ಯಕ್ಷರು ಒತ್ತಾಯಿಸಿದ್ದಾರೆ. ಶೇಕಡಾ 90 ರಷ್ಟು ಕುರುಬ ಮತವಿದ್ದು ಆದರೂ ಕುರುಬ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹಾಲು ಮತ ಸಮುದಾಯದವರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಎಲ್ಲಾ ಸಮುದಾಯದ ಶಾಸಕರನ್ನು ಗುರುಯಾಗಿರಿಸಿಕೊಂಡು ಸಚಿವ ಸ್ಥಾನ ಹಂಚಿಕೆಯಾಗಿದೆ , ನಮ್ಮ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದ ಅವರು , ಈ ಬಗ್ಗೆ ನಮ್ಮ ಎಲ್ಲಾ ಸದಸ್ಯರು ಹಾಗೂ ಹಾಲು ಮತ ಸಮಾಜಕ್ಕೆ ಬೇಸರತಂದಿದೆ ಎಂದಿದ್ದಾರೆ.

ಒಂದೆಡೆ ಇದಾದರೆ , ಇನ್ನೊಂದೆಡೆ ಪ್ರತಿಭಟನೆಗಳು ನಡೆಯುತ್ತಲೇ ಇವೆ , ಕೆಲವು ಶಾಸಕರು ಈ ಬಗ್ಗೆ ಅದಾಗಲೇ ಮಾಧ್ಯಮದೊಂದಿಗೆ ಮಾತನಾಡಿದ್ದು ತಮಗೆ ಸಚಿವ ಸ್ಥಾನ ಸಿಗದಿದ್ದರೆ ರಾಜಿನಾಮೆ ನೀಡುತ್ತೇವೆ ಎಂದಿದ್ದಾರೆ.. ಕೊನೆಯ ಗಲಿಗೆಯ ಸಮಯದಲ್ಲೂ ಬಾರಿ ಸರ್ಕಸ್ ನಡೆಯುತ್ತಿದ್ದು , ಹಲವು ಶಾಸಕರು ನಾವು ಸ್ಥಾನ ವಂಚಿತರು ಎಂದು ಹೇಳಿಕೊಂಡಿದ್ದಾರೆ. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Karnataka Politics NewsKarnataka News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada