ಮಹಿಳಾ ಪೋಲಿಸ್ ಪೇದೆಯ ಪರ್ಸ್ ಕಳ್ಳತನ

Woman police constable's purse stolen

0 13

Crime News (itskannada) ಬೆಂಗಳೂರು: ಮತ್ತಿಕೆರೆಯಲ್ಲಿ ಮಹಿಳಾ ಪೋಲಿಸ್ ಪೇದೆಯ ಪರ್ಸ್ ಕಳ್ಳತನ ವಾಗಿರುವ ಬಗ್ಗೆ ಯಶವಂತಪುರ ಪೋಲಿಸ್  ಠಾಣೆಯಲ್ಲಿ ವರದಿಯಾಗಿದೆ. ಮತ್ತಿಕೆರೆಯ PG ಯಲ್ಲಿ ವಾಸವಾಗಿದ್ದ ಜ್ಯೋತಿರವರ ಪರ್ಸ್ ಕಳುವಾಗಿದೆ , ಘಟನೆ ನಡೆಯುವ ಎರಡು ದಿನಗಳ ಹಿಂದೆಯಷ್ಟೇ PG ಗೆ ಅಳವಡಿಸಲಾಗಿದ್ದ ಸಿ.ಸಿ.ಟಿ.ವಿ. ಸ್ಥಗಿತಕೊಂಡಿದ್ದು ಆ ಬಗ್ಗೆ ಅನುಮಾನ ಮೂಡಿದೆ.

ಏಪ್ರಿಲ್ 10 ರಂದು ಕಳ್ಳತನ ಸಂಭವಿಸಿದೆ, ಆದರೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತಿ ಬಿ.ಎ. 29, ಏಪ್ರಿಲ್ 26 ರಂದು ಯಶವಂತಪುರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ತಡವಾಗಿ ದೂರು ನೀಡುತ್ತಿರುವ ಕಾರಣ ತಿಳಿಸಿರುವ ಅವರು ಚುನಾವಣೆ ಸಮೀಪಿಸುತ್ತಿರುವುದರಿಂದ ಕೆಲಸದ ಒತ್ತಡ ಇತ್ತು ಆದ್ದರಿಂದ ದೂರು ನೀಡಲು ತಡವಾಯಿತೆಂದು ತಿಳಿಸಿದ್ದಾರೆ.

ಅವರು ತನ್ನ ಪರ್ಸ್ ನಲ್ಲಿ ಐಡಿ ಕಾರ್ಡ್, ಆಧಾರ್ ಕಾರ್ಡ್, ಡೆಬಿಟ್ ಕಾರ್ಡ್, ಚಿನ್ನದ ಸರ , ಒಟ್ಟಾರೆ ರೂ. 45,000.ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ತಪಾಸಣೆಗಾಗಿ ಪಿಜಿಗೆ ಹೋದ ಪೊಲೀಸರು ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದ್ದಾರೆ.ವೈರಿಂಗ್ ಸಮಸ್ಯೆಯ ಕಾರಣ ಸಿ.ಸಿ.ಟಿ.ವಿ ಕಾರ್ಯಾಚರಣೆ ಸ್ಥಗಿತಗೊಂಡಿದೆ, “ಕಳ್ಳತನ ಮಾಡಲು ಯಾರಾದರೂ ಸಿ.ಸಿ.ಟಿ.ವಿ. ಸಂಪರ್ಕ ಕಡಿತಗೊಳಿಸಿರಬಹುದಾದ ಸಾಧ್ಯತೆಯಿದೆ” ಎಂದು ಪೊಲೀಸರು ಹೇಳಿದ್ದಾರೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ – Karnataka Crime News – Kannada News – Karnataka News – Bengaluru Urban News Online

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!