ನೀವು ದೊಡ್ಡ ದೊಡ್ಡ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬೇಕೆ ? ಈ ಸುದ್ದಿ ಓದಿ.

0 164

Kannada News (itskannada) ನೀವು ದೊಡ್ಡ ದೊಡ್ಡ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬೇಕೆ ? ಈ ಸುದ್ದಿ ಓದಿ.

ಯೂನಿವರ್ಸಲ್ ಹೆಲ್ತ್ ಕಾರ್ಡ್

ಈ ಕಾರ್ಡ್ ಇದ್ದರೆ ಸಾಕು ಇನ್ಮುಂದೆ ಆಸ್ಪತ್ರೆಗಳಲ್ಲಿ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ. ಇನ್ಮುಂದೆ ಉಚಿತವಾಗಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆಯನ್ನು ಪಡೆಯಬಹುದು. ಆಸ್ಪತ್ರೆಗಳಲ್ಲಿ ಲಕ್ಷಗಟ್ಟಲೆ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ. ಕರ್ನಾಟಕ ಸರ್ಕಾರದಿಂದ ಆರೋಗ್ಯ ಭಾಗ್ಯ ಸ್ಕೀಮ್ ನಿಂದ ಆರೋಗ್ಯ ಭಾಗ್ಯ ಕಾರ್ಡನ್ನು ಪಡೆಯಿರಿ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ, ಕಾರ್ಡ್ ಪಡೆಯಲು ಆಧಾರ್ ಕಾರ್ಡ್, ಬಿ ಪಿ ಲ್ ಕಾರ್ಡ್, ವೋಟರ್ ಐಡಿ ದಾಖಲೆ ಅಗತ್ಯವಿದ್ದು, ಬಿ ಪಿ ಲ್ ಇಲ್ಲದವರು ಎ ಪಿ ಲ್ ಕಾರ್ಡ್ ಕೊಂಡೊಯ್ಯಬೇಕು ಹಾಗು *₹10/- ಶುಲ್ಕ* ಪಡೆದು ಕಾರ್ಡ್ ನೀಡಲಾಗುತ್ತದೆ. ಈ ಯೋಜನೆಯಡಿ ಬಿ ಪಿ ಲ್ ಕಾರ್ಡ್  ಇರುವವರಿಗೆ ಸಂಪೂರ್ಣ ಚಿಕಿತ್ಸೆ ಸಿಗಲಿದ್ದು. ಎ ಪಿ ಲ್ ಹೊಂದಿದವರು ಶೇ.30 ರ ರಿಯಾಯಿತಿ ಪಡೆದು ಚಿಕಿತ್ಸೆ ಪಡೆಯಬಹುದಾಗಿದೆ. *ಯೂನಿವರ್ಸಲ್ ಹೆಲ್ತ್ ಕಾರ್ಡ್* ಪಡೆದ ಕ್ಷಣದಿಂದಲೇ ಕಾರ್ಡ್ ಚಾಲ್ತಿಗೆ ಬರಲಿದ್ದು. ಮರುದಿನದಿಂದಲೇ ಚಿಕಿತ್ಸೆ ಪಡೆಯಲು ಬಳಸಬಹುದಾಗಿದೆ. * ನಿಮಗೆ ಅನಾರೋಗ್ಯವಾದಾಗ ಸರ್ಕಾರಿ ಆಸ್ಪತ್ರೆಗೆ ಬನ್ನಿ .
 • ಯೋಜನೆಯಡಿಯಲ್ಲಿ ಒಂದು ಬಾರಿ ರೋಗಿಗಳ ನೋಂದಣಿ ಮಾಡಲಾಗುತ್ತದೆ.
 • ನೋಂದಣಿ ಮಾಡಲು ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ತಪ್ಪದೆ ತನ್ನಿ.
 • ಆಸ್ಪತ್ರೆಯ ನೋಂದಣಿ ಕೇಂದ್ರದಲ್ಲಿ ನೋಂದಣಿ ಮಾಡಿಸಿ. ಹೆಲ್ತ್ ಕಾರ್ಡ್ ಪಡೆದುಕೊಳ್ಳಿ.
 • ನಂತರದ ಸಂದರ್ಭಗಳಲ್ಲಿ ಆಸ್ಪತ್ರೆಗೆ ಬರುವಾಗ ಕಾರ್ಡ್ ತಪ್ಪದೆ ತನ್ನಿ.
 • ನೋಂದಣಿ ಪ್ರಕ್ರಿಯೆ ನಿರಂತರವಾಗಿರುತ್ತದೆ. ಇದಕ್ಕಾಗಿ ಸಾಲುಗಟ್ಟಿ ನಿಂತು ಹಿಂಸೆ ಪಡಬೇಡಿ * ನೋಂದಣಿ ಪ್ರಕ್ರಿಯೆ ಅತ್ಯಂತ ಸರಳ ಹಾಗೂ ತ್ವರಿತ ವಿಧಾನದಲ್ಲಿ ನಡೆಯುತ್ತದೆ. * ಈ ಹೆಲ್ತ್ ಕಾರ್ಡ್ ನಿಮ್ಮ ಆರೋಗ್ಯದ ರಕ್ಷಾ ಕವಚ  ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. ಹತ್ತಿರದ ಸರ್ಕಾರಿ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಹಾಗೂ ಜಿಲ್ಲಾ ಆಸ್ಪತ್ರೆಗಳು.
 • ಆರೋಗ್ಯ ಕರ್ನಾಟಕ ಯೋಜನೆಯ ವೈಶಿಷ್ಟತೆ  * ಕರ್ನಾಟಕ ರಾಜ್ಯದ ಎಲ್ಲ ನಾಗರಿಕರಿಗೆ ಅರೋಗ್ಯ ಒದಗಿಸುವ ಕ್ರಾಂತಿಕಾರಿ ಯೋಜನೆ.
 • ಎಲ್ಲ ನಾಗರಿಕರಿಗೂ ವಿಶಿಷ್ಟ ಗುರುತಿನ ಸಂಖ್ಯೆಯ ಹೆಲ್ತ್ ಕಾರ್ಡ್  * ವಿವಿಧ ಯೋಜನೆಗಳನ್ನು ಒಗ್ಗೂಡಿಸಿ. ಒಂದೇ ಸೂರಿನಡಿ ಎಲ್ಲ ಆರೋಗ್ಯ ಸೇವೆಗಳು. * ಪ್ರಾಥಮಿಕ, ನಿಗದಿತ ದ್ವಿತೀಯ ಹಾಗೂ ತೃತೀಯ ಹಂತದ ಅರೋಗ್ಯ ಸೇವೆ ಲಭ್ಯ
 • ಅನಾರೋಗ್ಯವಾದಾಗ ಹೆಲ್ತ್ ಕಾರ್ಡ ನೊಂದಿಗೆ ಆಸ್ಪತ್ರೆಗೆ ಹೋಗಬೇಕು
 • ವೈದ್ಯರು ತಪಾಸಣೆ ನಡೆಸಿ ಆ ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸೆ ನೀಡುತ್ತಾರೆ.
 • ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ಸಮೀಪದ ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ಹೋಗಲು ಸಲಹೆ ಮಾಡುತ್ತಾರೆ.
 • ಸಂಕೀರ್ಣ ದ್ವಿತೀಯಹಂತದ ಚಿಕಿತ್ಸೆಗಳು ಹಾಗೂ ತೃತೀಯ ಹಂತದ ಚಿಕಿತ್ಸೆಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದಿದ್ದರೆ ನೋಂದಾಯಿತ ಖಾಸಗಿ ಆಸ್ಪತ್ರೆಗಳಗೆ ಸೂಚಿಸುತ್ತಾರೆ.
 • ನಿಗದಿತ ತುರ್ತು ಚಿಕಿತ್ಸೆಗಳಿಗೆ ನೇರವಾಗಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ  ಹತ್ತಿರದ ಸರ್ಕಾರಿ ಆಸ್ಪತ್ರೆಗಳು ತಾಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸ್ಪತ್ರೆಗಳು *ಸಹಾಯವಾಣಿ 104, ಟೋಲ್ ಫ್ರೀ ನ0 :18004258330*  ಸೌಲಭ್ಯಗಳು -: ಅರ್ಹತಾ ರೋಗಿಗಳಿಗೆ ಬಹುಮಟ್ಟಿಗೆ ಉಚಿತ

-:ಸಾಮಾನ್ಯ ರೋಗಿಗಳಿಗೆ ಸಹ -ಪಾವತಿ ಆಧಾರದ ಮೇಲೆ ಚಿಕಿತ್ಸೆ 

ಎಷ್ಟು ಮೊತ್ತದ ಚಿಕಿತ್ಸೆ  -: ನಿಗದಿತ ದ್ವಿತೀಯ ಹಂತದ ಕಾಯಿಲೆಗಳಿಗೆ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ರೂ.30.000/-ಗಳ ಚಿಕಿತ್ಸೆ
-: ನಿಗದಿ ತೃತೀಯ ಹಂತದ ಕಾಯಿಲೆಗಳಿಗೆ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ರೂ.1.50.000/-ಗಳು ಈ ಹಣ ಮುಗಿದ ನಂತರ ತುರ್ತು ಸಂದರ್ಭದಲ್ಲಿ ಹೆಚ್ಚುವರಿ ರೂ.50.000/-ಗಳ ಚಿಕಿತ್ಸೆ,
ಈ ಆರೋಗ್ಯ ಯೋಜನೆಗಳನ್ನು ಒಗ್ಗೂಡಿಸಿ ಒಂದೇ ಯೋಜನೆಯಲ್ಲಿ ಅಡಿಯಲ್ಲಿ ಎಲ್ಲ ಜನರಿಗೂ ಆರೋಗ್ಯ ಸೇವೆಗಳನ್ನು ಒದಗಿಸುವುದು ಆರೋಗ್ಯ ಕರ್ನಾಟಕ ಯೋಜನೆಯ ಉದ್ದೇಶವಾಗಿದೆ. ಮೊದಲ ಹಂತದಲ್ಲಿ 10 ಪ್ರಮುಖ ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳೆಂದರೆ ಕೆ ಸಿ ಜನರಲ್ ಆಸ್ಪತ್ರೆ , ಜಯ ದೇವ, ಪಿ.ಎಂ.ಎಸ್.ಎಸ್.ವೈ ಆಸ್ಪತ್ರೆ,  ವಿಕ್ಟೊರಿಯೋ ಕ್ಯಾಂಪಸ್, ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ. ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳಿ, ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ. ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ. ಬಳ್ಳಾರಿ. ಮುಂದಿನ ಹಂತಗಳಲ್ಲಿ ಇತರ 32 ಪ್ರಮುಖ ಆಸ್ಪತ್ರೆಗಳಲ್ಲಿ ಮತ್ತು ಜಿಲ್ಲಾ ಹಂತದ ಆಸ್ಪತ್ರೆಗಳಲ್ಲಿ ಜಾರಿಗೊಳಿಸಲಾಗುತ್ತದೆ.
*ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಬಂಧು ಮಿತ್ರರಿಗೂ ತಿಳಿಸಿ ಹಂಚಿಕೊಳ್ಳಿ ಯಾಕೆಂದರೆ ದಿನಗಳಲ್ಲಿ ಸಾಮಾನ್ಯ ಜನರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದೆ ದೊಡ್ಡ ಸಮಸ್ಯೆಯಾಗಿದೆ ನಿಮಗೆ ತಿಳಿದಿರುವಂತೆ ಲಕ್ಷಗಟ್ಟಲೆ ಬಿಲ್ ಕಟ್ಟುವುದು ಸುಲಭದ ಮಾತಲ್ಲ. Karnataka News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada