ಇದು ಶ್ರೀರಾಮುಲು ಸವಾಲ್

sriramulu-challenge | itskannada

0 10

Politics : ( itskannada) ಬಾಗಲಕೋಟೆ: ರಾಜಕೀಯ ತಂತ್ರಗಳು , ಒಬ್ಬರಿಗೊಬ್ಬರ ಕೆಸರೆರಚಾಟ ದಿನೆದಿನಕ್ಕೆ ಹೆಚ್ಚುತ್ತಲೇ ಇದೆ, ಚುನಾವಣೆಯ ಕಾವು ಇದೀಗ ಇನ್ನಷ್ಟು ಹೆಚ್ಚಿದೆ. ಇದೇ ಸಮಯದಲ್ಲಿ ಒಂದು ಪಕ್ಷದವರು ಇನ್ನೊಂದು ಪಕ್ಷದ ವಿರುದ್ದ ಕಿಡಿಕಾರೋದು ನಡೆಯುತ್ತಲೇ ಇದೆ. ಅಂತೆಯೇ ಇದೀಗ ಬಿಜೆಪಿ ನಾಯಕ ಶ್ರೀರಾಮುಲು ಸಿಎಂ ಸಿದ್ದರಾಮಯ್ಯ ಗೆ ಬಹಿರಂಗ ಸವಾಲು ಹಾಕಿದ್ದಾರೆ.

ಬಿ.ಜೆ.ಪಿ ಸರ್ಕಾರದ ವಿರುದ್ದ ಮಾತನಾಡಿದ್ದ ಹಾಗೂ ಮೋದಿ ಸರ್ಕಾರ ಭ್ರಷ್ಟ ಸರ್ಕಾರ ಎಂದಿದ್ದ ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಚರ್ಚೆಗೆ ಬರುವಂತೆ ಬಾದಾಮಿಯಲ್ಲಿ ಚುನಾವಣಾ ಕಣಕ್ಕಿಳಿದಿರುವ ಶ್ರೀರಾಮುಲು ಸವಾಲು ಹಾಕಿದ್ದಾರೆ. ಮನಬಂದಂತೆ ಮಾತನಾಡುವುದು ಬಿಟ್ಟು     ಬಹಿರಂಗ ಚರ್ಚೆಯಾಗಲಿ ಯಾವುದು ಭ್ರಷ್ಟ ಸರ್ಕಾರ ತಿಳಿಯುತ್ತದೆ. ಎಂದಿದ್ದಾರೆ.

ಅಲ್ಲದೆ ಕಾಂಗ್ರೆಸ್ ಅವಧಿಯಲ್ಲಿ ಎಷ್ಟು ಹಗರಣವಾಗಿದೆ ಎಂದು ಹೊರಬೀಳುತ್ತದೆ. ಸುಮ್ಮನೆ ಮಾತನಾಡುವುದು ಬಿಟ್ಟು ಬಹಿರಂಗವಾಗಿ ಚರ್ಚೆಯಾಗಲಿ. ಅದಕ್ಕೆ ಪ್ರಧಾನಿ ಮೋದಿ ಬೇಡ. ನಾನೇ ಬರುತ್ತೇನೆ. ಚರ್ಚೆ ಮಾಡೋಣ ಎಂದು ರಾಮುಲು ಸವಾಲು ಹಾಕಿದ್ದಾರೆ.

ಇದೇ ವೇಳೆ ಸಿಎಂ ಸಿದ್ದರಾಮಯ್ಯಗೆ ಅಧಿಕಾರದ ಅಮಲು ಈಗೆಲ್ಲಾ ಮಾತನಾದಿಸುತ್ತಿದೆ. ಅಧಿಕಾರದಿಂದ  ಅಹಂಕಾರ ಹೆಚ್ಚಿದೆ.       ಸೋಲುವಭೀತಿಯಿಂದ ಅವರು ಈಗೆಲ್ಲಾ ಮಾತನಾಡುತ್ತಿದ್ದಾರೆ , ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸ ಬಹುದೆಂಬ ಅವರ ಕನಸು ಸಾಧ್ಯವಿಲ್ಲ. ಅದು ಇನ್ನು ಕೆಲವೇ ದಿನಗಳಲ್ಲಿ ಅವರಿಗೆ ಮನವರಿಕೆಯಾಗಲಿದೆ,ಎಂದಿದ್ದಾರೆ.// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Politics News – Kannada News – Karnataka NewsBagalkot – Bagalkot News Online

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!