ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಿ-ಅಮಿತ್ ಶಾ ಕರೆ

0 14

 Koppal (itskannada) ಕೊಪ್ಪಳ :  ಕರ್ನಾಟಕದಲ್ಲಿ  ಬಾರಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿ ಆಡಳಿತಕ್ಕೆ ಒಂದು ಉತ್ತಮ ಪಕ್ಷಕ್ಕೆ ಅನುವು ಮಾಡಿ ಕೊಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಕ್ಷದ ಮುಖಂಡರು,ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಕರೆ ನೀಡಿದರು.

ನಗರದ ಶಿವಚಿತ್ರಮಂದಿರದಲ್ಲಿ ಶುಕ್ರವಾರ ಬಿಜೆಪಿಯ ಸಂಘಟನಾತ್ಮಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಚುನಾವಣೆ ಅಲ್ಲದೆ ಮುಂದಿನ ಚುನಾವಣೆಗೂ ಗೆಲುವು ಬಿಜೆಪಿ ಪಕ್ಷದ್ದೇ ಆಗಿರುತ್ತದೆ , ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆತರಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರುಅಭಿಮಾನಿಗಳುಶ್ರಮಿಸುವಂತೆ ಕರೆ ನೀಡಿದರು,ನಂತರ ಪಕ್ಷದ ಮುಖಂಡರು,ಕಾರ್ಯಕರ್ತರೊಂದಿಗೆ ಪಕ್ಷದ ಬೂತ್ ಮಟ್ಟದ ಚಟುವಟಿಕೆಗಳುಕಾರ್ಯಕ್ರಮಗಳ ಕುರಿತು ಸಂವಾದ ನಡೆಸಿದರು. ಚುನಾವಣೆಯ ಈ ಸಮಯದಲ್ಲಿ ಪಕ್ಷದ ಕಾರ್ಯಕರ್ತರ ಚಟುವಟಿಕೆಗಳ ಬಗ್ಗೆ ವಿಚಾರಿಸಿದರು.

ಬಿಜೆಪಿಯ ಸಂಘಟನಾತ್ಮಕ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಸಂಸದ ಸಂಗಣ್ಣ ಕರಡಿ ಮಾತನಾಡಿ  ಬಾರಿ ಕೊಪ್ಪಳ ಜಿಲ್ಲೆಯ ಐದುಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯಕಾರ್ಯದರ್ಶಿ ಸಂತೋಷಜೀಬಿಜೆಪಿ ಜಿಲ್ಲಾಧ್ಯಕ್ಷವಿರೂಪಾಕ್ಷಪ್ಪ ಸಿಂಗನಾಳಕೊಪ್ಪಳವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಅಮರೇಶ ಕರಡಿಮುಖಂಡರಾದಸಿ.ವಿ.ಚಂದ್ರಶೇಖರಚಂದ್ರಶೇಖರ ಕವಲೂರುರಾಜು ಬಾಕಳೆ ಮತ್ತೀತರರು ಉಪಸ್ಥಿತರಿದ್ದರು. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Koppal News OnlinePoliticsKarnataka Politics News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada