ಚುನಾವಣಾ ಆಯೋಗ ಅಧಿಕಾರಿಗಳಿಂದ 58 KG ಚಿನ್ನ ವಶ

Election Commission officials seized 58 kg gold | itskannada

0 16

Devanahalli ( itskannada ) ಬೆಂಗಳೂರು: ಏಪ್ರಿಲ್ 27 ರಂದು ದೇವನಹಳ್ಳಿ ವಿಧಾನಸಭೆಯ ಬಾಲೆಪುರಾ ಚೆಕ್-ಪೋಸ್ಟ್ ನಲ್ಲಿ ದಿನನಿತ್ಯದಂತೆ ವಾಹನ ತಪಾಸಣೆ ವೇಳೆ 58 ಕಿಲೋ ತೂಕದ ಚಿನ್ನದ ಆಭರಣವನ್ನು ಚುನಾವಣಾ ಆಯೋಗ (ಇಸಿ) ಅಧಿಕಾರಿಗಳು ಮತ್ತು ಪೊಲೀಸರು ಚಿನ್ನದ ಆಭರಣವನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯದಾದ್ಯಂತ ಮತದಾರರನ್ನು ಸೆಳೆಯುವು ಉದ್ದೇಶದಿಂದ ಇದನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಚುನಾವಣಾ ಆಯೋಗ ಅಧಿಕಾರಿಗಳಿಂದ 58 KG ಚಿನ್ನ ವಶ

ಚುನಾವಣಾ ಆಯೋಗದ ಅಧಿಕಾರಿಗಳು ಮತ್ತು ಪೊಲೀಸರು ರಾಜ್ಯದಲ್ಲಿ ನೀತಿಸಂಹಿತೆ ಜಾರಿಗೆ ಬಂದ ನಂತರ ಹಲವಾರು ಚೆಕ್-ಪೋಸ್ಟ್ ಳನ್ನು  ಹೆಚ್ಚುವರಿ ಚೆಕ್ ಪಾಯಿಂಟ್ ಳನ್ನು ಸ್ಥಾಪಿಸಿದ್ದರು.

ಎಂದಿನಂತೆ ಅಧಿಕಾರಿಗಳು ಬಾಲೆಪುರಾ ಚೆಕ್ ಪೋಸ್ಟ್ ಬಳಿ ವಾಹನಗಳನ್ನು ತಪಾಸಣೆ ಮಾಡುವಾಗ ಬ್ಲೂ ಡಾರ್ಟ್ ಕೊರಿಯರ್ ಸರಕು ವಾಹನವನ್ನು ಕೂಡ ತಡೆಯಲಾಯಿತು , ಆ ವೇಳೆ 58 ಕಿಲೋ ತೂಕದ ಚಿನ್ನದ ಆಭರಣವನ್ನು ಮಾನ್ಯ ದಾಖಲೆಗಳಿಲ್ಲದೆ ರವಾನೆ ಮಾಡುತ್ತಿದ್ದ ಕಾರಣ ವಶಪಡಿಸಿಕೊಳ್ಳಲಾಗಿದೆ. ತಾನಿಷ್ಕ್ (ಟಾಟಾ ಗ್ರೂಪ್ ಕಂಪೆನಿ) ತಯಾರಿಸಿದ ಆಭರಣಗಳು ತಮಿಳುನಾಡಿನ ಹೊಸೂರು ಕಡೆಗೆ ಬೋಲೆರೊ ವಾಹನದಲ್ಲಿ ಸಾಗಿಸಲಾಗುತ್ತಿದ್ದು, ದೇವನಹಳ್ಳಿಯ ಬಾಲೆಪುರಾ ಚೆಕ್-ಪೋಸ್ಟ್ ಬಳಿ ಚುನಾವಣಾ ಆಯೋಗ ಅಧಿಕಾರಿಗಳು ಮತ್ತು ಪೊಲೀಸರು ಕೈಗೆ ಸಿಕ್ಕಿಬಿದ್ದಿದ್ದಾರೆ.

ದೊಡ್ಡಬಳ್ಳಾಪುರ ಉಪ ಪೊಲೀಸ್ ಅಧೀಕ್ಷಕ ಮೋಹನ್ ಕುಮಾರ್, ವಿಜಯಪುರಾ ಸರ್ಕಲ್ ಇನ್ಸ್ ಪೆಕ್ಟರ್ ಆಫ್ ಪೋಲಿಸ್ (ಸಿಐ) ಮಂಜುನಾಥ್, ಚನ್ನಾರಾಯಪಟ್ಟಣ ಸಬ್-ಇನ್ಸ್ ಪೆಕ್ಟರ್ ಆನಂದ್, ಚುನಾವಣಾ ಅಧಿಕಾರಿ ಸಿ.ಎನ್.ಮಂಜುನಾಥ, ತಹಸೀಲ್ದಾರ್ ರಾಜಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. | ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Crime NewsKarnataka Crime NewsDevanahalli News Kannada

WebTitle : ಚುನಾವಣಾ ಆಯೋಗ ಅಧಿಕಾರಿಗಳಿಂದ 58 KG ಚಿನ್ನ ವಶ-Election Commission officials seized 58 kg gold

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!