ಕಬ್ಬನ್‌ ಪಾರ್ಕ್‌-ಅನೈತಿಕ ಚಟುವಟಿಕೆಗಳಿಗೆ ಬ್ರೇಕ್‌

0 342

Kannada News (itskannada) ಕಬ್ಬನ್‌ ಪಾರ್ಕ್‌-ಅನೈತಿಕ ಚಟುವಟಿಕೆಗಳಿಗೆ ಬ್ರೇಕ್‌ :  ಬೆಂಗಳೂರಿನ ಅತಿದೊಡ್ಡ ಕೇಂದ್ರ ಭಾಗ ಜನಪ್ರಿಯ ಪಿಕ್ನಿಕ್ ತಾಣ ಸ್ಥಳವೆಂದರೆ ಕಬ್ಬನ್ ಪಾರ್ಕ್ ,  ಇದೀಗ 120 ಸಿಸಿಟಿವಿ ಕ್ಯಾಮೆರಾಗಳನ್ನು ಪಡೆಯುತ್ತಿದೆ. ಇನ್ಮುಂದೆ ಕದ್ದು ಮುಚ್ಚಿ ಪಿಸುಗುಡುತ್ತಿದ್ದ ಪ್ರೇಮಿಗಳು ಬೇರೊಂದು ಜಾಗ ಹುಡುಕಿಕೊಳ್ಳೋದು ಉತ್ತಮ, ಹೌದು ಇದೀಗ ಕಬ್ಬನ್‌ ಪಾರ್ಕ್‌ ಗೆ ನೂರಾರು ಸಿಸಿ ಕ್ಯಾಮರಾಗಳು ಮತ್ತು 700 ಕ್ಕೂ ಹೆಚ್ಚು ಲೈಟ್‌ಗಳು ಬರಲಿವೆ.

ಕಬ್ಬನ್‌ ಪಾರ್ಕ್‌-ಅನೈತಿಕ ಚಟುವಟಿಕೆಗಳಿಗೆ ಬ್ರೇಕ್‌

ಅನೈತಿಕ ಚಟುವಟಿಕೆಗಳು , ಸರಗಳ್ಳತನ ಹಾಗೂ ಮಹಿಳೆಯರನ್ನು ಚುಡಾಯಿಸುವ ಘಟನೆಗಳು ಆಗಾಗ ನಡೆಯುತ್ತಿದ್ದ ಕಬ್ಬನ್‌ ಪಾರ್ಕ್‌ ಈಗ ಹೊಸ ರೂಪ ಪಡೆಯಲಿದೆ.

ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜೋಡಿಗಳು ಅಸಭ್ಯ ನಡವಳಿಕೆಯ ಬಗ್ಗೆ ದೂರುಗಳು ಬಂದ ಹಿನ್ನೆಲೆ ಹಾಗೂ ನಾಗರೀಕರಿಗೆ ಹೆಚ್ಚಿನ ರಕ್ಷಣೆ ಒದಗಿಸುವ ಸಲುವಾಗಿ ರಾಜ್ಯ ತೋಟಗಾರಿಕೆ ಇಲಾಖೆ ಹಾಗೂ ಬೆಸ್ಕಾಂ ಸಹಯೋಗದೊಂದಿಗೆ ಲೈಟ್‌ಗಳು ಮತ್ತು ಕ್ಯಾಮರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.

ಕಬ್ಬನ್‌ಪಾರ್ಕ್‌ಗೆ ದಿನನಿತ್ಯ ಹಲವಾರು ಜನರು ನಾನಾ ಕಾರಣಗಳಿಗೆ ಬೇಟಿನೀಡುತ್ತಾರೆ ಅದರಲ್ಲೂ ಇಲ್ಲಿ ಸಾಮಾನ್ಯವಾಗಿ ಗಿಡಮರಗಳು ಪೊದೆಗಳು, ಕಲ್ಲು ಬಂಡೆಗಳು, ಬಿದಿರು ಪೊದೆಗಳು ಹೆಚ್ಚಾಗಿರುವುದರಿಂದ ಪ್ರೇಮಿಗಳ ಏಕಾಂತದ ಸ್ವರ್ಗ ಲೋಕ ಈ ಕಬ್ಬನ್‌ಪಾರ್ಕ್‌. ಅಷ್ಟೇ ಅನ್ಕೊಂಡ್ರೆ ಅದು ತಪ್ಪು , ಜತೆಗೆ ಇಲ್ಲಿ ಅನೈತಿಕ ಚಟುವಟಿಕೆಗಳಿಗೇನು ಕಡಿಮೆಯಿಲ್ಲ, ಏನಾದ್ರೂ ಮಾಡಿಕೊಳ್ಳಲಿ ಅಂತ ಸುಮ್ಮನಿದ್ರೆ ಆಗುತ್ತಾ ? ವಾಯುವಿಹಾರಿಗಳು ಸಭ್ಯರು ಇದನ್ನೆಲ್ಲಾ ನೋಡ್ಕೊಂಡು ಮುಜುಗರದಿಂದ ಇತ್ತ ಬರುವುದನ್ನೇ ಬಿಟ್ಟಿರುವುದೂ ಉಂಟು.

ಕಬ್ಬನ್ ಪಾರ್ಕ್ ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಸಿಸಿ ಕ್ಯಾಮರಾ ಮತ್ತು ಸ್ಮಾರ್ಟ್‌ ಲೈಟ್‌ಗಳಿಂದ ಉದ್ಯಾನ ಮತ್ತೊಂದು ರೂಪು ಪಡೆಯಲಿದೆ.

2015 ರಲ್ಲಿ ಸುಮಾರು 34 ವರ್ಷದ ಮಹಿಳೆಯ ಮೇಲೆ ಅಲ್ಲಿನ ಭದ್ರತಾ ಸಿಬ್ಬಂದಿಯೇ ಅತ್ಯಾಚಾರ ನಡೆಸಿದ್ದನ್ನು ಇಲ್ಲಿ ನೆನೆಯಬಹುದು. ಪ್ರಕರಣದಿಂದ ಉದ್ಯಾನವನ ಸಾಕಷ್ಟು ಟೀಕೆಗಳಿಗೆ ಒಳಗಾಗಿತ್ತು. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Kannada News – Karnataka News

Webtitle : ಕಬ್ಬನ್‌ ಪಾರ್ಕ್‌-ಅನೈತಿಕ ಚಟುವಟಿಕೆಗಳಿಗೆ ಬ್ರೇಕ್‌

 

 

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!