ಸುಂಕದಕಟ್ಟೆ-ವರದಕ್ಷಿಣೆ ಕಿರುಕುಳ-ಗೃಹಿಣಿ ಆತ್ಮಹತ್ಯೆಗೆ ಶರಣು

woman commits suicide in Sunkadakatte

Crime (itskannada)  ಬೆಂಗಳೂರು: ಸುಂಕದಕಟ್ಟೆ-ವರದಕ್ಷಿಣೆ ಕಿರುಕುಳ-ಗೃಹಿಣಿ ಆತ್ಮಹತ್ಯೆಗೆ ಶರಣು-woman commits suicide in Sunkadakatte :ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿದೆ.

ರಮ್ಯಾ ಎಂಬ ಗೃಹಿಣಿಯೇ ಮೃತ ದುರ್ದೈವಿಯಾಗಿದ್ದು, ಈಕೆ ಎರಡು ವರ್ಷದ ಹಿಂದೆ ಮಂಜುನಾಥ್ ಎಂಬಾತನನ್ನು ಮದುವೆಯಾಗಿದ್ದರು.ಮದುವೆ ನಂತರ ಪ್ರತಿದಿನ ವರದಕ್ಷಿಣೆ ತರುವಂತೆ ಮಂಜುನಾಥ್ ಕಿರುಕುಳ ನೀಡುತ್ತಿದ್ದನು.ನಮ್ಮ ಮಗಳಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಾರೆ ಇದರಿಂದ ನೊಂದ ರಮ್ಯಾ ನೇಣಿಗೆ ಶರಣಾಗಿದ್ದಾಳೆ ಎಂದು ರಮ್ಯಾ ಪೋಷಕರು ಆರೋಪಿಸಿದ್ದಾರೆ.

ಈ ಘಟನೆ ಬಳಿಕ ಮೃತ ರಮ್ಯಾ ಪತಿ ಹಾಗೂ ಅವರ ಮನೆಯವರು ಅಲ್ಲಿಂದ ಪರಾರಿಯಾಗಿದ್ದು , ಅನುಮಾನ ಮೂಡಿಸಿದೆ. ರಮ್ಯಾ ರ ಪೋಷಕರು ಮಗಳ ಸಾವಿನ ನ್ಯಾಯಕ್ಕಾಗಿ ಮನೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ಈ ಪ್ರಕರಣ ಕುರಿತು ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Karnataka Crime News- Kannada News