ವರದಕ್ಷಿಣೆ ಗಾಗಿ ಮಹಿಳೆ ಬಲಿ:ಪೋಷಕರ ದೂರು

Kannada News(itskannada) Crime News ಹಾವೇರಿ :ವರದಕ್ಷಿಣೆಯ ಪಿಡುಗಿನಿಂದಾಗಿ ಓರ್ವ ಮಹಿಳೆ ಬಲಿಯಾದ ದಾರುಣ ಘಟನೆ ಜಿಲ್ಲೆಯ ನೆಲೋಗಲ್ಲ ಗ್ರಾಮದಲ್ಲಿ  ಮಂಗಳವಾರ ನಡೆದಿದೆ. ಕಳೆದ 6 ವರ್ಷಗಳ ಹಿಂದೆ ಹಾನಗಲ್ ತಾಲ್ಲೂಕಿನ ಹರವಿ ಗ್ರಾಮದ ಗಿರಿಮಲ್ಲಪ್ಪ ದೇವಗಿರಿ ಎಂಬುವವರ ಸುವರ್ಣ(30) ಎಂಬುವವಳನ್ನು, ನೆಲೋಗಲ್ಲ  ಗ್ರಾಮದ ಅಶೋಕ ಹೊನ್ನತ್ತಿ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು.

ನಿಮ್ಮ ಮಗಳು ವಿಷ ಸೇವಿಸಿದ್ದಾಳೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅವಳ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾರೆ. ಚಿಕಿತ್ಸೆ ಫಲಕಾರಿ ಆಗದೆ 3 ಮುದ್ದು ಕಂದಮ್ಮಗಳನ್ನು ಬಿಟ್ಟು ಸುವರ್ಣ ಕೊನೆಯುಸಿರು ಬಿಟ್ಟಿದ್ದಾಳೆ .ಪ್ರತಿ  ದಿನ ವರದಕ್ಷಿಣೆ ಗಾಗಿ ಕಿರುಕುಳ ನೀಡುತ್ತಿದ್ದನ್ನು ನಮ್ಮ ಮಗಳು ಕರೆ ಮಾಡಿ ಹೇಳುತ್ತಿದ್ದಳು ಎಂದು ಪೋಷಕರು ತಿಳಿಸಿದ್ದಾರೆ. ಇದು ಕೊಲೆ ಆಗಿದೆ ನಮಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು. ಈ ಸಂಬಂಧ ಜಿಲ್ಲಾ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ///