ಕಲಬುರ್ಗಿ : ಮಕ್ಕಳನ್ನು ಬಳಸಿ ಭಿಕ್ಷಾಟನೆ – ನಾಲ್ವರ ಬಂಧನ

Kannada News (itskannada) Crime News : ಕಲಬುರ್ಗಿ : ಮಕ್ಕಳನ್ನು ಬಳಸಿ ಭಿಕ್ಷಾಟನೆ – ನಾಲ್ವರ ಬಂಧನ

ಮಕ್ಕಳನ್ನು ಮುಂದಿಟ್ಟುಕೊಂಡು ಭಿಕ್ಷಾಟನೆಯಲ್ಲಿ ತೊಡಗಿದ್ದ ನಾಲ್ವರ ವಿರುದ್ಧ ಕಲಬುರ್ಗಿ ಪೊಲೀಸರು FIR ದಾಖಲಿಸಿದ್ದಾರೆ.

ಉತ್ತರ ಪ್ರದೇಶದ ಸಾಂಬಾಲ್ ಜಿಲ್ಲೆಯ ರೂಬಿ ,ರಯ್ಯಿಸಾ ಎಂಬುವವರೇ ಮಕ್ಕಳನ್ನು ಬಳಸಿ ಭಿಕ್ಷಾಟನೆ ಮಾಡುತ್ತಿದ್ದವರು ಎನ್ನಲಾಗಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಆ ಮಕ್ಕಳನ್ನು ಒಂದು ತಳ್ಳು ಗಾಡಿಯಲ್ಲಿ ಕೂರಿಸಿಕೊಂಡು ನಗರದ ಬೀದಿ ಬೀದಿ ಯಲ್ಲಿ ಭಿಕ್ಷಾಟನೆಗೆ ತೊಡಗಿಸಿ ಕೊಂಡಿದ್ದರು ಎನ್ನಲಾಗಿದೆ.

ಈ ಭಿಕ್ಷಾಟನೆಯ ತಂಡಕ್ಕೆ ಬಷೀರ್ ಎಂಬುವವನು ಆಶ್ರಯ ನೀಡಿದ್ದು, ಅವನಿಗೂ ಬಿಕ್ಷಾಟನೆಯ ಹಣದಲ್ಲಿ ಪಾಲು ನೀಡಬೇಕಾಗಿತ್ತು ಎಂದು ತಿಳಿದು ಬಂದಿದೆ.

ಮಕ್ಕಳನ್ನು ಭಿಕ್ಷಾಟನೆಯಲ್ಲಿ ತೊಡಗಿಸಿರುವುದನ್ನು ಗಮನಿಸಿದ ಸಾರ್ವಜನಿಕರು ಈ ಬಗ್ಗೆ ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದರು. ನಾಗರೀಕರ ಮಾಹಿತಿ ಆದರಿಸಿ , ಇದೀಗ ಇಬ್ಬರು ಮಹಿಳೆಯರು ಹಾಗೂ ಆಶ್ರಯ ನೀಡಿದ ಮಾಲೀಕನ ವಿರುದ್ಧ ಪೊಲೀಸರು ಎಪ್.ಐ,ಆರ್ ದಾಖಲಿಸಿ , ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. /// Karnataka Crime News – Karnataka News