ಬೆಂಗಳೂರು-ರೋಡ್ ರೋಲರ್ ಹರಿದು ಬಾಲಕ ಸ್ಥಳದಲ್ಲೇ ಸಾವು

Crime News (itskannada) ಬೆಂಗಳೂರು-ರೋಡ್ ರೋಲರ್ ಹರಿದು ಬಾಲಕ ಸ್ಥಳದಲ್ಲೇ ಸಾವು : ಬಿ.ಬಿ.ಎಂ.ಪಿ ಕಾಮಗಾರಿವೇಳೆ ಅಜಾಗರುಕತೆಯಿಂದ 11 ವರ್ಷದ ಬಾಲಕನನ್ನು ಬಲಿ ತೆಗೆದುಕೊಂಡ  ಘಟನೆ  ಹೆಮ್ಮಿಗಪುರ ವಾರ್ಡ್ ನಂ.198 ರಲ್ಲಿ ನಡೆದಿದೆ.

ಚಾಮರಾಜನಗರದಿಂದ ಜೀವನ ನಡೆಸಲು ಬೆಂಗಳೂರಿಗೆ ರವಿ ಮತ್ತು ಕುಟುಂಬ ಬಂದು ಗಾಣಿಗರ ಪಾಳ್ಯದಲ್ಲಿ ವಾಸವಾಗಿತ್ತು. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತಿದ್ದ ಮನು ರಜೆ ಇದ್ದರೂ ಶಾಲೆಯ ಕಡೆಗೆ ಹೋಗಿ ಬರ್ತಿನಿ ಅಂತ ಹೇಳಿ ಮನೆಯಿಂದ ಸೈಕಲ್ ತೆಗೆದುಕೊಂಡು ಹೋಗಿದ್ದ.

ನೆನ್ನೆ ಶಾಲೆ ರಜೆ ಇದ್ದು ಮೃತ ಬಾಲಕ ತನ್ನ ತಾಯಿ ಬಳಿ ಶಾಲೆಯ ಹತ್ತಿರ ಹೋಗಿ ಬರುವುದಾಗಿ ಹೇಳಿ ತನ್ನ ಸೈಕಲ್ ನಲ್ಲಿ ಶಾಲೆಯ ಬಳಿಗೆ ತೆರಳಿ ತನ್ನ ಸ್ನೇಹಿರ ಜೊತೆ ಆಟವಾಡಿ ವಾಪಾಸ್ಸಗುತ್ತಿದ್ದಾಗ ಬಿ.ಬಿ.ಎಂ.ಪಿ ಕಾಮಗಾರಿಯ ರೋಡ್ ರೋಲರ್ ರಸ್ತೆಯಲ್ಲಿ ಜಲ್ಲಿಯನ್ನು ಸಮಮಾಡುತ್ತಿತ್ತು, ಅಜಾಗರುಕತೆಯ ಚಾಲಕನ ನಿರ್ಲಕ್ಷಕ್ಕೆ ಗಮನಿಸದೆ ಏಕಾಏಕಿ ರೋಡ್ ರೋಲರ್ ಬಾಲಕನ ಮೇಲೆ ಹರಿದಿದೆ.

ಸದ್ಯ ಚಾಲಕನು ಪರಾರಿಯಾಗಿದ್ದು , ಪೊಲೀಸರು ಗುತ್ತಿಗೆದಾರರನ್ನು ವಶಪಡಿಸಿಕೊಂಡು ಚಾಲಕನ ಪತ್ತೆ ಮಾಡುತ್ತಿದ್ದಾರೆ. ಬಡ ಕುಟುಂಬದ ಮಂಜುಳಾ ಮತ್ತು ರವಿಯ ಮಗ ಮನು (11) ಮೃತನು.

ಇನ್ನು ಮೃತ ಬಾಲಕನ ಕುಟುಂಬಕ್ಕೆ ಬಿಬಿಎಂಪಿ ಯಿಂದ 5 ಲಕ್ಷ ರೂ. ಪರಿಹಾರವನ್ನು ಮೇಯರ್ ಸಂಪತ್ ರಾಜ್ ಘೋಷಿಸಿದ್ದಾರೆ.

ಇಂದು 10 ಘಂಟೆಗೆ ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದ್ದು , ಕೆ.ಎಸ್.ಲೇಔಟ್ ನ ಪೊಲೀಸರು ದೂರು ದಾಖಲಿಸಿದ್ದಾರೆ. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ- Karnataka Crime News – Kannada News – Police News Kannada