ವೈಟ್ ಫೀಲ್ಢ್ : ಕಂಪನಿ ಕಟ್ಟಡದಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ

Kannada News (itskannada) Crime News ಬೆಂಗಳೂರು : ವೈಟ್ ಫೀಲ್ಢ್ : ಕಂಪನಿ ಕಟ್ಟಡದಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ : ಟೆಕ್ಕಿಯೊಬ್ಬ ಕಂಪನಿಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ವೈಟ್ ಫೀಲ್ಢ್ ಪೊಲೀಸ್ ಠಾಣಾ ವ್ಯಾಪ್ತಿಯ ಐಟಿಪಿಎಲ್ ಈ ದುರ್ಘಟನೆ ನಡೆದಿದ್ದು. ಭವೇಶ್ ಜೈಸ್ವಾಲ್ (23) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎನ್ನಲಾಗಿದೆ.

ಆತ್ಮಹತ್ಯೆಯ ನಿಖರ ಕಾರಣ ತಿಳಿದು ಬಂದಿಲ್ಲ, ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಭವೇಶ್ ಜೈಸ್ವಾಲ್ ಎಮ್.ಯು.ಸಿಗ್ಮಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

4ಗಂಟೆ ಸುಮಾರಿಗೆ ಕಚೇರಿಯ ಕಟ್ಟಡದ 12ನೇ ಮಹಡಿ ಕಿಟಿಕಿ ಒಡೆದು ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮೇಲಿಂದ ಬಿದ್ದ ರಭಸಕ್ಕೆ ಭವೇಶ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ,  ಸದ್ಯ ಮೃತದೇಹವನ್ನ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ವೈಟ್ ಫೀಲ್ಡ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. //// Bangalore Crime News