ಚಿಕ್ಕಬಳ್ಳಾಪುರ-ಅತ್ತೆ ಮಗಳ ಜೊತೆ ಮದುವೆ ಮಾಡಿಸಲಿಲ್ಲ ಎಂದು ತಂದೆಯನ್ನೇ ಕೊಂದ ಫಾಪಿ ಮಗ

son killed his father in chikkaballapur

227

Crime (itskannada) ಚಿಕ್ಕಬಳ್ಳಾಪುರ-ಅತ್ತೆ ಮಗಳ ಜೊತೆ ಮದುವೆ ಮಾಡಿಸಲಿಲ್ಲ ಎಂದು ತಂದೆಯನ್ನೇ ಕೊಂದ ಫಾಪಿ ಮಗ-son killed his father in chikkaballapur : ಅತ್ತೆ ಮಗಳ ಜೊತೆ ಮದುವೆ ಮಾಡಿಸಲಿಲ್ಲ ಎಂಬ ಕಾರಣಕ್ಕೆ ಮಗನೊಬ್ಬ ತನ್ನ ತಂದೆಯನ್ನು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಣಿವಾಲ ಗ್ರಾಮದಲ್ಲಿ ನಡೆದಿದೆ. ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಫಾಪಿ ಮಗನೇ ಸುರೇಶ್.

ಸುರೇಶ್(25) ತನ್ನ ತಂದೆ ವೆಂಕಟೇಶಪ್ಪನನ್ನು ಕೊಲೆ ಮಾಡಿದ ಆರೋಪಿ. ವೆಂಕಟೇಶಪ್ಪ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ಗ್ರಾಮದ ಜಗುಲಿಕಟ್ಟೆ ಮೇಲೆ ಮಲಗಿದ್ದಾಗ ಸುರೇಶ್ ತನ್ನ ತಂದೆಯನ್ನು ಕೊಲೆ ಮಾಡಿರುವ ಸತ್ಯ ಪೊಲೀಸರ ತನಿಖೆಯಿಂದ ಬಯಲಾಗಿದೆ.

ಸುರೇಶ್ ಗೆ ಮಾನಸಿಕ ಖಾಯಿಲೆಯಿದ್ದು, ಆಗಾಗ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದನು ಎನ್ನಲಾಗಿದೆ. ಕೊಲೆಯಾದ ದಿನವೂ ಕೂಡ  ವಿಚಿತ್ರವಾಗಿ ವರ್ತಿಸಿದ್ದ ಎನ್ನಲಾಗಿದೆ. ಮಗನ ವರ್ತನೆ ನೋಡಿ ವೆಂಕಟೇಶಪ್ಪ ಮಂತ್ರವಾದಿ ಬಳಿ ಕರೆದುಕೊಂಡು ಹೋಗಿ ಮಂತ್ರ ಹಾಕಿಸಿಕೊಂಡು ಕರೆದುಕೊಂಡು ಬಂದಿದ್ದರು. ಬರುವಾಗಲೇ ಅತ್ತೆ ಮಗಳ ಮದುವೆ ವಿಚಾರದಲ್ಲಿ ಇಬ್ಬರ ನಡುವೆ ವಾದ ವಿವಾದವೂ ಜೋರಾಗಿ ನಡೆದಿತ್ತು ಎನ್ನಲಾಗಿದೆ. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Karnataka Crime News – Chikkaballapur News Kannada – Gauribidanur News Online- Kannada News

Open

error: Content is protected !!