ಹೆತ್ತ ತಾಯಿ ಕೈ ಕತ್ತರಿಸಿದ ನೀಚ ಮಗ

Son Cut-Off His mother's hand In Hassan

0

ಹೆತ್ತ ತಾಯಿ ಕೈ ಕತ್ತರಿಸಿದ ನೀಚ ಮಗ

Son Cut-Off His mother’s hand In Hassan

ಹಾಸನ : ಪಾಪಿ ಮಗನೊಬ್ಬ ತನ್ನ ಹೆತ್ತತಾಯಿಯ ಕೈಯನ್ನು ಕತ್ತರಿಸಿ ಭೀಕರವಾಗಿ ಹಲ್ಲೆ ಮಾಡಿರುವ ಅಮಾನುಷ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ. ಸಕಲೇಶಪುರದ ತಾಲೂಕಿನ ಯಡವರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಸಕಲೇಶಪುರ ತಾಲೂಕಿನ ಯಡವರಹಳ್ಳಿ ಗ್ರಾಮದ ಲಲಿತಮ್ಮ (55) ಬಲಗೈ ಕಳೆದುಕೊಂಡು ಮಾರಣಾಂತಿಕವಾಗಿ ಹಲ್ಲೆಗೊಳಗಾದ ಮಹಿಳೆ.

ತನ್ನ ಹೆತ್ತ ತಾಯಿಯ ಹಲ್ಲೆಗೊಳಿಸಿ ಕೈ ಕತ್ತರಿಸಿದ ಪಾಪಿ ಪುತ್ರ , ಆರೋಪಿ ದಿಲೀಪ್ . ಪಾಪಿ ಮಗ ದಿಲೀಪ್  ಮೊದಲನೆ ಪತ್ನಿಯನ್ನು ಬಿಟ್ಟಿದ್ದು ಎರಡನೇ ಮದುವೆ ವಿಚಾರವಾಗಿ ತಾಯಿಮಗನಲ್ಲಿ ವೈಮನಸ್ಸು ಬೆಳೆದಿತ್ತು.

ಅಂತೆಯೇ ಆಸ್ತಿ ವಿಚಾರವಾಗಿ ಪದೇ ಪದೇ ದಿಲೀಪ್ ತನ್ನ ತಾಯಿಯ ಬಳಿ ಜಗಳವಾಡುತಿದ್ದನು ಎಂದು ತಿಳಿದು ಬಂದಿದೆ.

ಈ ನಡುವೆ ದಿಲೀಪ್​ ಶುಕ್ರವಾರ ರಾತ್ರಿ ಕಂಠ ಪೂರ್ತಿ ಕುಡಿದು ಬಂದು ತಾಯಿಯ ಬಳಿ ಜಗಳವಾಡಿದ್ದಾನೆ, ಮನಬಂದಂತೆ ಮಾರಕಾಸ್ತ್ರಗಳಿಂದ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ.

ಕೈ ಕತ್ತರಿಸಿ ಪಾಪಿ ಅಲ್ಲಿಂದ ಪರಾರಿಯಾಗಿದ್ದಾನು, ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಕಾರಣ ಶುಕ್ರವಾರಸಂತೆ ಗ್ರಾಮದ ಸಮೀಪ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಸಧ್ಯ ತೀವ್ರ ಹಲ್ಲೆಗೊಳಗಾಗಿರುವ ಲಲಿತಮ್ಮ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇನ್ನು ಈ ದುಷ್ಕೃತ್ಯ ಎಸಗಿರುವ ಪಾಪಿ ದಿಲೀಪ್ ಗೆ  ಕಠಿಣವಾದ ಶಿಕ್ಷೆಯಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಯಸಳೂರು ಪೊಲೀಸರು ದಿಲೀಪ್​ನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಆರೋಪಿ ವಿರುದ್ಧ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.////

WebTitle : ಹೆತ್ತ ತಾಯಿ ಕೈ ಕತ್ತರಿಸಿದ ನೀಚ ಮಗ-Son Cut-Off His mother’s hand In Hassan

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : Kannada Crime NewsKarnataka Crime News Latest Kannada News | Hassan News Kannada | Hassan News Today

You're currently offline